ನವದೆಹಲಿ: ಜನವರಿ 23 ಭಾರತದ ಸ್ವಾತಂತ್ರ್ಯ ಹೋರಾಟದ ಸೇನಾನಿ ನೇತಾಜಿ ಸುಭಾಶ್ಚಂದ್ರ ಬೋಸ್ರವರ 125ನೇ ಜನ್ಮದಿನೋತ್ಸವ. ಆಜಾದ್ ಹಿಂದ್ ಸೇನೆ ಕಟ್ಟಿ ಭಾರತದ ಸ್ವಾತಂತ್ರ್ಯಕ್ಕಾಗಿ ಅವಿರತ ಹೋರಾಟ ನಡೆಸಿದ ನೇತಾಜಿಯವರ ಸ್ಮರಣಾರ್ಥವಾಗಿ ಭಾರತ ಸರ್ಕಾರ ಜನವರಿ 23ನ್ನು ಪರಾಕ್ರಮ್ ದಿವಸ್ ಎಂದು ಆಚರಿಸಲು ನಿರ್ಧರಿಸಿದೆ. ಇಂಡಿಯಾ ಗೇಟ್ನಲ್ಲಿ ಬೋಸ್ ಪುತ್ಥಳಿಗೆ ಗೌರವ ಅರ್ಪಿಸುತ್ತ ಪ್ರಧಾನಿ ಮೋದಿ ಈ ಘೋಷಣೆ ಮಾಡಿದ್ದಾರೆ.
ಈ ಸಮಯದಲ್ಲಿ ನೇತಾಜಿಯವರ ಹೊಲೊಗ್ರಾಮ್ ಪುತ್ಥಳಿಗೆ ಗೌರವಾರ್ಪಣೆ ಮಾಡಿದ ಮೋದಿ, ಈ ಜಾಗದಲ್ಲಿ ನೇತಾಜಿಯವರ ಭವ್ಯ ಪ್ರತಿಮೆ ತಲೆಯೆತ್ತಲಿದೆ. ಅಲ್ಲಿಯವರೆಗೆ ನಾವು ಈ ಪುತ್ಥಳಿಗೆ ಗೌರವ ಸಲ್ಲಿಸೋಣ ಎಂದು ಹೇಳಿದರು.