ರಾಜ್ಯದಲ್ಲಿ 520 ಕ್ಕೇರಿದ ಸೋಂಕಿತರ ಸಂಖ್ಯೆ : ಕಲಬುರಗಿಯಲ್ಲೇ 6 ಜನರಲ್ಲಿ ಸೋಂಕು ದೃಢ

0
464

ಬೆಂಗಳೂರು: ರಾಜ್ಯದಲ್ಲಿ ಇಂದು ಮತ್ತೆ 8 ಜನರಲ್ಲಿ ಸೋಂಕು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 520 ಕ್ಕೇರಿದೆ. ಇಂದು ಒಂದೇ ದಿನ ಕಲಬುರಗಿಯಲ್ಲಿ 6 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಬೆಂಗಳೂರು ಹಾಗೂ ಗದಗದಲ್ಲಿ ತಲಾ ಒಬ್ಬರಿಗೆ ಸೋಂಕು ಹರಡಿದೆ.

ಕಲಬುರಗಿಯಲ್ಲಿ ಪತ್ತೆಯಾದ 6 ಮಂದಿ ಸೋಂಕಿತರಿಗೂ ಪೇಷೆಂಟ್ ನಂ.425 ವ್ಯಕ್ತಿಯಿಂದ ಸೋಂಕು ಹರಡಿದೆ. ಅವರಲ್ಲಿ ನಾಲ್ವರು ಮಹಿಳೆಯರಾಗಿದ್ದು, 40 ವರ್ಷದ ಮಹಿಳೆ, 28 ವರ್ಷದ ಮಹಿಳೆ, 45 ವರ್ಷದ ಮಹಿಳೆ, 22 ವರ್ಷದ ಮಹಿಳೆಯರಿಗೆ ಸೋಂಕು ತಗುಲಿದೆ. ಇನ್ನುಳಿದಂತೆ 55 ವರ್ಷದ ಹಾಗೂ 43 ವರ್ಷದ ಇಬ್ಬರು ಪುರುಷರಲ್ಲಿ ಸೋಂಕು ದೃಢಪಟ್ಟಿದೆ.

ಬೆಂಗಳೂರಲ್ಲಿ 48 ವರ್ಷದ ಪುರುಷನಲ್ಲಿ ಸೋಂಕು ಕಂಡುಬಂದಿದ್ದು, ಬಿಬಿಎಂಪಿ ಕಂಟೈನ್ಮೆಂಟ್ ಝೋನ್​, 135 ವಾರ್ಡ್​ನ ಸಂಪರ್ಕದಿಂದ ಕೊರೋನಾಗೆ ತುತ್ತಾಗಿದ್ದಾರೆ. ಇನ್ನು ಗದಗದಲ್ಲಿ ಕಂಡುಬಂದಿರುವ 75 ವರ್ಷದ ಪುರುಷನಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ರಾಜ್ಯದಲ್ಲಿ ಈವರೆಗೆ 520 ಜನರಲ್ಲಿ ಸೋಂಕು ಪತ್ತೆಯಾಗಿದ್ದು, 20 ಸೋಂಕಿತರು ಕೊರೋನಾಗೆ ಬಲಿಯಾಗಿದ್ದಾರೆ.

LEAVE A REPLY

Please enter your comment!
Please enter your name here