ಬೆಂಗಳೂರು: ರಾಜ್ಯದಲ್ಲಿ ಇಂದು ಮತ್ತೆ ಕೊರೋನಾಗೆ 8 ಮಂದಿ ತುತ್ತಾಗಿದ್ದಾರೆ. ಈ ಮೂಲಕ ಸೋಂಕಿತರ ಸಂಖ್ಯೆ 701 ಕ್ಕೇರಿಕೆಯಾಗಿದೆ. ಇನ್ನು ಈವರೆಗೆ ಕೊರೋನಾಗೆ ಬಲಿಯಾದವರ ಸಂಖ್ಯೆಯೂ ಹೆಚ್ಚಾಗಿದ್ದು, 30 ಕ್ಕೆ ಏರಿಕೆಯಾಗಿದೆ. ಇದರ ನಡುವೆ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 363ಕ್ಕೆ ಏರಿದೆ.
ರಾಜ್ಯದಲ್ಲಿ ಇಂದು ಪತ್ತೆಯಾದ ಸೋಂಕಿತರಲ್ಲಿ ಕಲಬುರಗಿಯಲ್ಲಿ ಮೂರು ಪ್ರಕರಣಗಳು ಪತ್ತೆಯಾಗಿದೆ. ಅದರಲ್ಲಿ 36 ವರ್ಷದ ಪುರುಷ ಹಾಗೂ 41 ವರ್ಷದ ಪುರುಷ ಇಬ್ಬರಿಗೂ ಪೇಷೆಂಟ್ ನಂ. 641 ಒಬ್ಬ ಸೋಂಕಿತನಿಂದಲೇ ಸೋಂಕು ಹರಡಿದೆ. ಇನ್ನೊಬ್ಬ 35 ವರ್ಷದವರಾಗಿದ್ದು, ಪೇಷೆಂಟ್ ನಂ 642 ವ್ಯಕ್ತಿಯಿಂದ ಸೋಂಕು ಹರಡಿದೆ. ಇನ್ನು ಬೆಂಗಳೂರಿನಲ್ಲಿ 49 ವರ್ಷದ ಮಹಿಳೆಗ ಸೋಂಕು ಹರಡಿದೆ. ಬೆಳಗಾವಿಯ ಹಿರೇಬಾಗೇವಾಡಿಯಲ್ಲೂ ಸೊಂಕು ಹರಡಿದ್ದು, 13 ವರ್ಷದ ಬಾಲಕಿಗೆ ಪೇಷೆಂಟ್ 364 ರ ಸೋಂಕಿತನ ಸಂಪರ್ಕದಿಂದ ವೈರಸ್ ಹರಡಿರುತ್ತದೆ. ಇನ್ನು ದಾವಣಗೆರೆಯಲ್ಲಿ ಮೂರು ಕೊರೋನಾ ಕೇಸ್ಗಳು ಪತ್ತೆಯಾಗಿದ್ದು, 40 ವರ್ಷದ ಮಹಿಳೆ ಹಾಗೂ 53 ವರ್ಷದ ಮಹಿಳೆಗೆ ಸೋಂಕು ಹರಡಿದೆ. 55 ವರ್ಷದ ಸೋಂಕು ಬಂದಿದ್ದು ಇದೀಗ ಮೃತಪಟ್ಟಿದ್ದಾರೆ.
ದಾವಣಗೆರೆಯಲ್ಲಿ ಸೋಂಕಿನಿಂದ 55 ವರ್ಷದ ಮಹಿಳೆ ಸಾವನ್ನಪ್ಪಿದ್ದು, ಡಯಾಬಿಟಿಸ್ ಹಾಗೂ ಅಧಿಕ ರಕ್ತದೊತ್ತಡದಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರದಲ್ಲಿ ಅವರನ್ನು ವೆಂಟಿಲೇಟರ್ಗೆ ಶಿಫ್ಟ್ ಮಾಡಲಾಗಿತ್ತು. ಆದರೆ ಇಂದು ಸೋಂಕಿತ ಮಹಿಳೆ ಸಾವನ್ನಪ್ಪಿದ್ದಾರೆ.