ಬೆಂಗಳೂರು: ಕರ್ನಾಟಕದಲ್ಲಿ ಕೋವಿಡ್-19 ತನ್ನ ಕದಂಬ ಬಾಹುವನ್ನು ಚಾಚುತ್ತಲೇ ಇದೆ. ಇಂದು ಮತ್ತೆ 54 ಜನರಲ್ಲಿ ಸೋಂಕು ಪತ್ತೆಯಾಗಿದೆ . ಈ ಮೂಲಕ ಸೋಂಕಿತರ ಸಂಖ್ಯೆ 1,146 ಜನರಲ್ಲಿ ಸೋಂಕು ದೃಢಪಟ್ಟಿದೆ. ಈವರೆಗೆ ಸೋಂಕಿನಿಂದ 37 ಜನ ಮೃತಪಟ್ಟಿದ್ದು, ಗುಣಮುಖರಾದವರ ಸಂಖ್ಯೆಯು 497ಕ್ಕೆ ಏರಿಕೆಯಾಗಿದೆ.
ಇಂದಿನ ಹೆಲ್ತ್ ಬುಲೆಟಿನ್ ಪ್ರಕಾರ ಮಂಡ್ಯವೊಂದರಲ್ಲೇ 22ಜನರಲ್ಲಿ ಸೋಂಕು ದೃಢಪಟ್ಟಿದ್ದು, ಅದರಲ್ಲಿ 1 ವರ್ಷ, 8 ವರ್ಷ ಹಾಗೂ 9 ವರ್ಷದ ಪುಟ್ಟ ಮಕ್ಕಳು ಸೇರಿದಂತೆ ಒಟ್ಟು 21 ಜನರು ಮಹಾರಾಷ್ಟ್ರ, ಮುಂಬೈಗೆ ಪ್ರಯಾಣ ಬೆಳೆಸಿದವರಾಗಿದ್ದಾರೆ. ಇನ್ನೊಬ್ಬ ಸೋಂಕಿತನಿಗೆ ಪೇಷೆಂಟ್ ನಂಬರ್ 869 ರ ವ್ಯಕ್ತಿಯ ಸಂಪರ್ಕದಿಂದ ಸೋಂಕು ಹರಡಿದೆ.
ಕಲಬುರಗಿಯಲ್ಲಿ 10 ಜನರಲ್ಲಿ ಸೋಂಕು ಪತ್ತೆಯಾಗಿದ್ದು, 6 ಜನ ಸೋಂಕಿತರು ಮುಂಬೈಗೆ ಪ್ರಯಾಣ ಬೆಳೆಸಿದ್ದರು ಎಂದು ತಿಳಿದುಬಂದಿದೆ. ಇನ್ನುಳಿದಂತೆ ಪೇಷೆಂಟ್ 927 ರ ವ್ಯಕ್ತಿಯಿಂದ ಇಬ್ಬರಿಗೆ ಸೋಂಕು ಹರಡಿದೆ. ಇನ್ನೊಬ್ಬ ಸೋಂಕಿತ ಕಲಬುರಗಿ ಜಿಲ್ಲೆಯ ಕಂಟೈನ್ಮೆಂಟ್ ಝೋನ್ಗೆ ತೆರಳಿದ್ದರಿಂದ ಸೋಂಕು ತಗುಲಿದೆ. ಮತ್ತೊಬ್ಬ 35 ವರ್ಷದ ಮಹಿಳೆಯಲ್ಲಿ ಸೋಂಕು ಪತ್ತೆಯಾಗಿದ್ದು, ಸೋಂಕಿನ ಮೂಲ ಪತ್ತೆಯಾಗಿಲ್ಲ.
ಹಾಸನದಲ್ಲಿ 6 ಜನರಲ್ಲಿ ಸೋಂಕು ಕಂಡುಬಂದಿದ್ದು, ಈ ಆರು ಜನ ಸೋಂಕಿತರು ಮುಂಬೈಗೆ ಪ್ರಯಾಣ ಬೆಳೆಸಿದ ಹಿನ್ನೆಲೆ ಸೋಂಕು ಬಂದಿರುತ್ತದೆ.
ಯಾದಗಿರಿಯಲ್ಲಿ ಮೂರು ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದು, ಈ ಮೂವರು ಮಹಾರಾಷ್ಟ್ರದ ಥಾಣೆಗೆ ಪ್ರಯಾಣ ಬೆಳೆಸಿದ ಹಿನ್ನೆಲೆ ಸೋಂಕು ಹರಡಿದೆ.
ಕೋಲಾರದಲ್ಲಿ ಮೂವರಿಗೆ ಸೋಂಕು ಪತ್ತೆಯಾಗಿದ್ದು, 43 ವರ್ಷದ ಪುರುಷನಲ್ಲಿ ಸೋಂಕು ದೃಢಪಟ್ಟಿದ್ದು, ಸೋಂಕು ತಗುಲಿರುವ ಮೂಲವನ್ನು ಪತ್ತೆ ಹಚ್ಚಲಾಗುತ್ತಿದೆ. ಇನ್ನೊಬ್ಬ 49 ವರ್ಷದ ಪುರುಷನಿಗೆ ತೀವ್ರ ಉಸಿರಾಟದ ತೊಂದರೆ ಕಾಣಿಸಿಕೊಂಡ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇದೀಗ ಕೊರೋನಾ ದೃಢಪಟ್ಟಿದೆ. 27 ವರ್ಷದ ಪುರುಷನಲ್ಲಿ ತಮಿಳುನಾಡು ಚೆನ್ನೈಗೆ ಪ್ರಯಾಣ ಬೆಳೆಸಿದ್ದರಿಂದ ಸೋಂಕು ದೃಢಪಟ್ಟಿದೆ.
ಧಾರವಾಡದಲ್ಲಿ ನಾಲ್ವರಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಅದರಲ್ಲಿ ಮುಂಬೈಗೆ ತೆರಳಿದ್ದರಿಂದ ಇಬ್ಬರಿಗೆ ಸೋಂಕು ಬಂದಿದ್ದು, ಇನ್ನೊಬ್ಬ ಸೋಂಕಿತ ಮಹಾರಾಷ್ಟ್ರದ ಕೊಲ್ಲಾಪುರಕ್ಕೆ ಪ್ರಯಾಣ ಬೆಳೆಸಿದ್ದರಿಂದ ಸೋಂಕು ಪತ್ತೆಯಾಗಿದೆ. ಇನ್ನು 16 ವರ್ಷದ ಹುಡುಗನಿಗೆ ಪೇಷೆಂಟ್ ನಂಬರ್ 589 ರ ವ್ಯಕ್ತಿಯಿಂದ ಸೋಂಕು ಬಂದಿದೆ.
ಗ್ರೀನ್ ಝೋನಾಗಿದ್ದ ಶಿವಮೊಗ್ಗದಲ್ಲಿ ಇಂದು ಮತ್ತೆ ಇಬ್ಬರಲ್ಲಿ ಸೋಂಕು ದೃಢಪಟ್ಟಿದೆ. ಇವರಿಬ್ಬರೂ ಮುಂಬೈಗೆ ಪ್ರಯಾಣ ಬೆಳೆಸಿದ್ದರಿಂದ ಸೋಂಕು ಹರಡಿರುತ್ತದೆ.
ದಕ್ಷಿಣ ಕನ್ನಡದಲ್ಲಿ ಇಬ್ಬರಲ್ಲಿ ಸೋಂಕು ಪತ್ತೆಹಚ್ಚಲಾಗಿದ್ದು, ಅದರಲ್ಲಿ ಒಬ್ಬರು 35 ವರ್ಷದ ಮಹಿಳೆಯಾಗಿದ್ದು, ಸೋಂಕಿತೆ ಮುಂಬೈಗೆ ಪ್ರಯಾಣ ಬೆಳೆಸಿದ್ದರು ಎಂದು ತಿಳಿದು ಬಂದಿದೆ. ಇನ್ನೊಬ್ಬ ಸೋಂಕಿತ ಮೂಲ ಪತ್ತೆಯಾಗಿಲ್ಲ.
ಇನ್ನುಳಿದಂತೆ ವಿಜಯಪುರ ಹಾಗೂ ಉಡುಪಿಯಲ್ಲಿ ತಲಾ ಒಬ್ಬರಲ್ಲಿ ಸೋಂಕು ದೃಢಪಟ್ಟಿದ್ದು, ವಿಜಯಪುರದಲ್ಲಿ ಪೇಷೆಂಟ್ 577 ರ ವ್ಯಕ್ತಿಯ ಸಂಪರ್ಕದಿಂದ 35 ವರ್ಷದ ಮಹಿಳೆಗೆ ಸೋಂಕು ಬಂದಿದೆ. ಇನ್ನು ಉಡುಪಿಯಲ್ಲಿ ಸೋಂಕಿತ ವ್ಯಕ್ತಿ ಮುಂಬೈಗೆ ಪ್ರಯಾಣ ಬೆಳೆಸಿದ್ದರು ತಿಳಿದುಬಂದಿದ್ದು, ಇದೀಗ ಆ ವ್ಯಕ್ತಿ ಸೋಂಕಿನಿಂದ ಮೃತಪಟ್ಟಿದ್ದಾರೆ. ಈ ಮೂಲಕ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 37ಕ್ಕೇರಿದೆ.
zithromax nursing implications
zithromax coupons
2christina