Home ರಾಜ್ಯ ರಾಜ್ಯದಲ್ಲಿ ಇಂದು ಮತ್ತೆ 53 ಜನರಲ್ಲಿ ಸೋಂಕು ದೃಢ : ಸೋಂಕಿತರ ಸಂಖ್ಯೆ 847 ಕ್ಕೆ...

ರಾಜ್ಯದಲ್ಲಿ ಇಂದು ಮತ್ತೆ 53 ಜನರಲ್ಲಿ ಸೋಂಕು ದೃಢ : ಸೋಂಕಿತರ ಸಂಖ್ಯೆ 847 ಕ್ಕೆ ಏರಿಕೆ

ಬೆಂಗಳೂರು: ರಾಜ್ಯದಲ್ಲಿ ಇಂದು ಮತ್ತೆ ಕೊರೋನಾ ತನ್ನ ಕದಂಬಬಾಹುವನ್ನು ಚಾಚಿದ್ದು, ಇಂದು ಒಟ್ಟು 53 ಜನರಿಗೆ ಸೋಂಕು ತಗುಲಿದೆ. ಈ ಮೂಲಕ ಸೋಂಕಿತರ ಸಂಖ್ಯೆ 847 ಕ್ಕೇರಿಕೆಯಾಗಿದೆ. ಇಂದು ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆಯೂ ಏರಿಕೆಯಾಗಿದ್ದು, 31 ಕ್ಕೆ ಏರಿಕೆಯಾಗಿದೆ. ಇದರ ಮಧ್ಯೆ 405 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಇಂದು ರಾಜ್ಯದಲ್ಲಿ ದೃಢಪಟ್ಟ ಸೋಂಕಿತರಲ್ಲಿ ಬೆಂಗಳೂರಲ್ಲಿ 3, ಉತ್ತರ ಕನ್ನಡದ ಭಟ್ಕಳದಲ್ಲಿ 7, ಚಿಕ್ಕಬಳ್ಳಾಪುರ 1, ಕಲಬುರಗಿಯಲ್ಲಿ 3, ಇನ್ನು ಗ್ರೀನ್ ಝೋನ್ ಆಗಿದ್ದ ಶಿವಮೊಗ್ಗದಲ್ಲಿ 8 ಜನರಲ್ಲಿ ಸೋಂಕು ಪತ್ತೆಯಾಗಿದೆ. ಬೆಳಗಾವಿಯಲ್ಲಿ 22 ಪ್ರಕರಣಗಳು, ಬಾಗಲಕೋಟೆಯಲ್ಲಿ 8 ಪ್ರಕರಣ ಹಾಗೂ ದಾವಣಗೆರೆಯಲ್ಲಿ ಒಂದು ಪ್ರಕರಣ ಪತ್ತೆಯಾಗಿದೆ.

ಬೆಂಗಳೂರಿನಲ್ಲಿ ಪತ್ತೆಯಾದ ಪ್ರಕರಣಗಳಲ್ಲಿ ಬಿಬಿಎಂಪಿ ಕಂಟೈನ್ಮೆಂಟ್ ಝೋನ್​ಗೆ ವಾರ್ಡ್ ನಂ. 135 ಕ್ಕೆ ತೆರಳಿದ್ದರಿಂದ 29 ವರ್ಷದ ಪುರುಷನಲ್ಲಿ ಸೋಂಕು ಪತ್ತೆಯಾಗಿದೆ. ಇನ್ನು 60 ವರ್ಷದ ಸೋಂಕು ಪತ್ತೆಯಾಗಿದೆ. 56 ವರ್ಷದ ಮಹಿಳೆ ಮೃತಪಟ್ಟಿದ್ದು, ಮಹಿಳೆಯ ರಿಪೋರ್ಟ್​ನಲ್ಲಿ ಸೋಂಕು ದೃಢಪಟ್ಟಿದೆ.

ಬೆಳಗಾವಿಯಲ್ಲಿ ಇಂದು ಗರಿಷ್ಟ ಮಟ್ಟದಲ್ಲಿ ಸೋಂಕಿತರ ಸಂಖ್ಯೆ ಏರಿಕೆಯಾಗಿದ್ದು, ಬರೋಬ್ಬರಿ 22 ಜನರಲ್ಲಿ ಸೋಂಕು ದೃಢಪಟ್ಟಿದೆ. ಈ 22 ಜನ ಸೊಂಕಿತರು ರಾಜಸ್ಥಾನ ಅಜ್ಮೀರ್​ಗೆ ಪ್ರಯಾನ ಬೆಳೆಸಿದ್ದರಿಂದ ಸೊಂಕು ಹರಡಿದೆ ಎಂದು ಪತ್ತೆ ಹಚ್ಚಲಾಗಿದೆ.

ಇನ್ನು ಗ್ರೀನ್​ ಝೋನ್​ನಲ್ಲಿದ್ದ ಶಿವಮೊಗ್ಗದಲ್ಲಿ  ಇಂದು ಒಂದೇ ದಿ 8 ಜನರಲ್ಲಿ ಸೋಂಕು ಪತ್ತೆಯಾಗಿದೆ. ಇವರಲ್ಲಿ 7 ಜನ ಶಿವಮೊಗ್ಗದ ಶಿಕಾ ರಿಪುರ ಹಾಗೂ ಒಬ್ಬ ತೀರ್ಥಹಳ್ಳಿಯ ನಿವಾಸಿಯಾಗಿದ್ದಾರೆ.  ಆ 8 ಸೋಂಕಿತರು ಗುಜರಾತ್​ನ ಅಹಮದಾಬಾದ್​ಗೆ ತೆರಳಿದ್ದರಿಂದ ವೈರಸ್ ತಗುಲಿದೆ ಎಂದು ತಿಳಿದುಬಂದಿದೆ.

ಇಂದು ಬಾಗಲಕೋಟೆಯಲ್ಲೂ 8 ಜನರಲ್ಲಿ ಸೊಂಕು ಪತ್ತೆಯಾಗಿದ್ದು, ಅವರೆಲ್ಲರೂ ರಾಜಸ್ಥಾನದ ಅಜ್ಮೀರ್​ಗೆ ತೆರಳಿದ್ದರಿಂದ ಸೋಂಕು ಹರಡಿರುತ್ತದೆ. ಅದರಲ್ಲಿ ಒಂದು 2 ವರ್ಷದ ಹೆಣ್ಣು ಮಗವಿಗೂ ಸೊಂಕು ಬಂದಿದೆ.

ಉತ್ತರ ಕನ್ನಡದ ಭಟ್ಕಳದಲ್ಲಿ ಇಂದು ಮತ್ತೆ 7 ಜನರಲ್ಲಿ ಸೋಂಕು ದೃಢಪಟ್ಟಿದೆ. ಪೇಷೆಂಟ್ 659 ರ ವ್ಯಕ್ತಿಯ ದ್ವಿತೀಯ ಸಂಪರ್ಕದಿಂದಲೇ 7 ಜನರಿಗೂ ಸೋಂಕು ಹಬ್ಬಿದೆ.

ಕಲಬುರಗಿಯಲ್ಲೂ ಮೂವರಲ್ಲಿ ಸೋಂಕು ಕಂಡುಬಂದಿದ್ದು, ಅಫಜಲ್​ಪುರದಲ್ಲಿ 35 ವರ್ಷದ ಪುರುಷನಲ್ಲಿ ತೀವ್ರ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದು, ಇದೀಗ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ. ಇನ್ನು ಮಹಾರಾಷ್ಟ್ರಕ್ಕೆ ಪ್ರಯಾಣ ಬೆಳೆಸಿದ ಹಿನ್ನೆಲೆ ಕಮಲಾಪುರಲ್ಲಿ 30 ವರ್ಷದ ಪುರುಷನಲ್ಲಿ ಸೋಂಕು ಕಂಡುಬಂದಿದೆ. ಪೇಷೆಂಟ್ 604 ರ ವ್ಯಕ್ತಿಯ ಸಂಪರ್ಕದಿಂದ 72 ವರ್ಷದ ವೃದ್ಧನಲ್ಲಿ ಸೋಂಕು ಪತ್ತೆಯಾಗಿದೆ.

ಇನ್ನು ಚಿಕ್ಕಬಳ್ಳಾಪುರ ಹಾಗೂ ದಾವಣಗೆರೆಯಲ್ಲಿ ತಲಾ ಒಂದು ಪ್ರಕರಣ ಪತ್ತೆಯಾಗಿದ್ದು, ಚಿಕ್ಕಬಳ್ಳಾಪುರದ ಚಿಂತಾಮಣಿಯಲ್ಲಿ ಪೇಷೆಂಟ್ 790 ಸಂಪರ್ಕದಿಂದ 22 ವರ್ಷದ ಯುವಕನಿಗೆ ಸೋಂಕು ತಗುಲಿದೆ. ದಾವಣಗೆರೆಯಲ್ಲಿ 22 ವರ್ಷದ ಯುವಕನಲ್ಲಿ ಸೋಂಕು ಕಂಡುಬಂದಿದ್ದು, ಆತ ರಾಜಸ್ಥಾನ ಅಜ್ಮೀರ್​ಗೆ ಪ್ರಯಾಣ ಬೆಳೆಸಿದ್ದ ಎನ್ನಲಾಗಿದೆ. 

LEAVE A REPLY

Please enter your comment!
Please enter your name here

- Advertisment -

Most Popular

ದೇಶದಲ್ಲಿ  24 ಗಂಟೆಗಳಲ್ಲಿ 48,648 ಕೊರೋನಾ ಕೇಸ್ ಪತ್ತೆ!

ನವದೆಹಲಿ : ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 48,648 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 80,88,851ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ...

 ಸಿನಿಮೀಯ ರೀತಿಯಲ್ಲಿ ನಗರಸಭೆ ಸದಸ್ಯ ಕಿಡ್ನಾಪ್​!

ಕೊಪ್ಪಳ : ಸಿನಿಮೀಯ ರೀತಿಯಲ್ಲಿ ನಗರಸಭೆ ಸದಸ್ಯನನ್ನು ಕಿಡ್ನಾಪ್ ಮಾಡಲಾಗಿದೆ. ಕಿಡ್ನಾಪ್​ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನವೆಂಬರ್ 2 ರಂದು ನಗರಸಭೆ ಚುನಾವಣೆ ನಡೆಯಲಿದ್ದು, ಗಂಗಾವತಿ ನಗರಸಭೆ ಕಾಂಗ್ರೆಸ್ ಸದಸ್ಯ...

ಅಲಹಬಾದ್​ ಹೈಕೋರ್ಟ್ ನಿಗಾದಲ್ಲಿ ಹತ್ರಾಸ್​ ಗ್ಯಾಂಗ್ ರೇಪ್​ ಕೇಸ್ ತನಿಖೆಗೆ ಸುಪ್ರೀಂ ಆದೇಶ

ನವದೆಹಲಿ : ಉತ್ತರ ಪ್ರದೇಶ ಹತ್ರಾಸ್​​​​ ಗ್ಯಾಂಗ್​ ರೇಪ್​​ ಪ್ರಕರಣದ ತನಿಖೆ ಅಲಹಬಾದ್​ ಹೈಕೋರ್ಟ್​ ನಿಗಾದಲ್ಲಿ ನಡೆಯಬೇಕೆಂದು ಸುಪ್ರೀಂ ಕೋರ್ಟ್​ ಆದೇಶಿಸಿದೆ. ಸದ್ಯ ಸಿಬಿಐ ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದು, ತನಿಖಾ ತಂಡದಲ್ಲಿರುವ ಅಧಿಕಾರಿಗಳನ್ನು ರಾಜ್ಯದಿಂದ...

ಡಿ.ಬಾಸ್​​ಗಾಗಿ ಕನ್ನಡ ಕಲಿತ ಜಗಮಪತಿ ಬಾಬು..!

ಸಾಲ್ಟ್ ಅಂಡ್ ಪೆಪ್ಪರ್ ಲುಕ್​ನಲ್ಲಿ ಸೌತ್​ನಲ್ಲಿ ಸಂಚಲನ ಸೃಷ್ಠಿಸಿರೋ ಜಗಪತಿ ಬಾಬು, ಮತ್ತೊಂದು ನೂತನ ದಾಖಲೆ ಬರೆದಿದ್ದಾರೆ. ಅದೂ ಡಿ ಬಾಸ್ ದರ್ಶನ್​ಗಾಗಿ ಅನ್ನೋದು ವಿಶೇಷ. ಇಷ್ಟಕ್ಕೂ ಮೋಸ್ಡ್ ಡಿಮ್ಯಾಂಡಿಂಗ್ ಜಗಪತಿ ಬಾಬು...

Recent Comments