ಬೆಂಗಳೂರು: ರಾಜ್ಯದಲ್ಲಿ ಇಂದು ಮತ್ತೆ 5 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 606 ಕ್ಕೇರಿಕೆಯಾಗಿದೆ. ಈವರೆಗೆ ಸೋಂಕಿನಿಂದ 25 ಜನ ಮೃತಪಟ್ಟಿದ್ದಾರೆ.
ಇಂದು ಕಲಬುರಗಿಯಲ್ಲಿ ಒಟ್ಟು ಮೂವರಲ್ಲಿ ಸೋಂಕು ದೃಢಪಟ್ಟಿದ್ದು, ಅದರಲ್ಲಿ 41 ವರ್ಷದ ವ್ಯಕ್ತಿಯಲ್ಲಿ ಸೋಂಕು ಪತ್ತೆಯಾಗಿದೆ. ಇನ್ನು 13 ವರ್ಷದ ಬಾಲಕಿ ಹಾಗೂ 54 ವರ್ಷದ ಪುರುಷನಿಗೆ ಪೇಷೆಂಟ್ ನಂ 532 ರ ವ್ಯಕ್ತಿ ಒಬ್ಬನಿಂದಲೇ ಸೋಂಕು ಬಂದಿದೆ. ಇನ್ನುಳಿದಂತೆ ಬಾಗಲಕೋಟೆಯ ಮುಧೋಳದಲ್ಲಿ ಪೇಷೆಂಟ್ ನಂ. 380 ರ ವ್ಯಕ್ತಿಯಿಂದ 68 ವರ್ಷದ ಪುರುಷ ಹಾಗೂ 60 ವರ್ಷದ ಮಹಿಳೆಯಲ್ಲಿ ಸೋಂಕು ದೃಢಪಟ್ಟಿದೆ.
1unlettered