Sunday, June 26, 2022
Powertv Logo
HomePower Economicsಇಂದು, ನಾಳೆ ಬ್ಯಾಂಕ್ ಮುಷ್ಕರ

ಇಂದು, ನಾಳೆ ಬ್ಯಾಂಕ್ ಮುಷ್ಕರ

ಬೆಂಗಳೂರು: ಬ್ಯಾಂಕ್‌ಗಳ ಖಾಸಗೀಕರಣ ವಿರೋಧಿಸಿ ದೇಶಾದ್ಯಂತ ಸೋಮವಾರ ಮತ್ತು ಮಂಗಳವಾರ (ಮಾ. 28 ಮತ್ತು 29) ಬ್ಯಾಂಕ್ ನೌಕರರು ಮುಷ್ಕರ ಹಮ್ಮಿಕೊಂಡಿದ್ದಾರೆ. ಹೀಗಾಗಿ ಬ್ಯಾಂಕ್ ವ್ಯವಹಾರಗಳಲ್ಲಿ ವ್ಯತ್ಯಯವಾಗುವ ಸಾಧ್ಯತೆಗಳಿವೆ. ಬ್ಯಾಂಕ್ ನೌಕರರ ಮುಷ್ಕರದಿಂದಾಗಿ ಗ್ರಾಹಕರಿಗೆ ಯಾವುದೇ ಸಮಸ್ಯೆ ಆಗುವುದಿಲ್ಲ. ಮುಷ್ಕರದ ದಿನಗಳಲ್ಲಿ ಶಾಖೆಗಳು ಹಾಗೂ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ರಾಷ್ಟ್ರೀಯ ಬ್ಯಾಂಕುಗಳು ಗ್ರಾಹಕರಿಗೆ ಭರವಸೆ ನೀಡಿವೆ. ಹಾಗಿದ್ದರೂ ಪೂರ್ಣಪ್ರಮಾಣದಲ್ಲಿ ನೌಕರರು ಕಾರ್ಯನಿರ್ವಹಿಸದ ಕಾರಣ ಸೇವೆಯಲ್ಲಿವ್ಯತ್ಯಯವಾಗುವ ಸಾಧ್ಯತೆಗಳಿವೆ.

ಬ್ಯಾಂಕಿಂಗ್ ಕಾಯ್ದೆಗಳ ತಿದ್ದುಪಡಿ ಮಸೂದೆ 2021 ಮತ್ತು ಬ್ಯಾಂಕ್‌ಗಳ ಖಾಸಗೀಕರಣಗೊಳಿಸುವ ಕೇಂದ್ರ ಸರ್ಕಾರದ ನಿಲುವು ವಿರೋಧಿಸಿ ಈ ಮುಷ್ಕರ ನಡೆಸಲಾಗುತ್ತಿದೆ. 4ನೇ ಶನಿವಾರ ಹಾಗೂ ಭಾನುವಾರದ ಹಿನ್ನೆಲೆಯಲ್ಲಿ ಈಗಾಗಲೇ ಮಾ. 26 ಮತ್ತು 27ರಂದು ಬ್ಯಾಂಕ್ ಸೇವೆ ಲಭ್ಯವಿರಲಿಲ್ಲ. ಇದೀಗ ಇನ್ನೂ ಎರಡು ಕಾಲ ನೌಕರರ ಮುಷ್ಕರದಿಂದ ಗ್ರಾಹಕರಿಗೆ ಸಮಸ್ಯೆ ಆಗಲಿದೆ.

- Advertisment -

Most Popular

Recent Comments