Home ರಾಜ್ಯ ಕರ್ನಾಟಕದಲ್ಲಿ 75 ಜನರಲ್ಲಿ ಕೊರೋನಾ ಪಾಸಿಟಿವ್ : ಹಾಸನವೊಂದರಲ್ಲೇ ಟ್ರಾವೆಲ್ ಹಿಸ್ಟರಿ ಇಲ್ಲದ 10 ಕೊರೋನಾ...

ಕರ್ನಾಟಕದಲ್ಲಿ 75 ಜನರಲ್ಲಿ ಕೊರೋನಾ ಪಾಸಿಟಿವ್ : ಹಾಸನವೊಂದರಲ್ಲೇ ಟ್ರಾವೆಲ್ ಹಿಸ್ಟರಿ ಇಲ್ಲದ 10 ಕೊರೋನಾ ಕೇಸ್ ಪತ್ತೆ

ಬೆಂಗಳೂರು: ದಿನ ಕಳೆದಂತೆ ರಾಜ್ಯದಲ್ಲಿ ಕೊರೋನಾಗೆ ತುತ್ತದವರ ಸಂಖ್ಯೆಯೂ ಹೆಚ್ಚಾಗುತ್ತಲೇ ಇದೆ. ಇಂದು ಮತ್ತೆ ರಾಜ್ಯದಲ್ಲಿ 75 ರಷ್ಟು ಸೋಂಕಿತರು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ  2,493ಕ್ಕೆ  ಏರಿಕೆಯಾಗಿದೆ. ಇನ್ನು ಸೋಂಕಿನಿಂದ ಮೃತಪಟ್ಟವರ ಸಂಖ್ಯೆಯೂ 47 ಕ್ಕೆ ಏರಿದೆ. ಇವೆಲ್ಲದರ ನಡುವೆಯೂ ಸಂತಸದ ವಿಷಯವೆಂದರೆ ಈವರೆಗೆ ಪತ್ತೆಯಾದ ಸೋಂಕಿತರ ಸಂಖ್ಯೆಯಲ್ಲಿ 809 ಜನ ಸೋಂಕಿನಿಂದ ಗುಣಮುಖರಾಗಿದ್ದಾರೆ.

ಕರ್ನಾಟಕದಲ್ಲಿ ಇತ್ತೀಚೆಗೆ ಹೊರರಾಜ್ಯದಿಂದ ಬರುವವರಲ್ಲೇ ಸೋಂಕು ಪತ್ತೆಯಾಗುತ್ತಿದೆ. ಆದರೆ ಇಂದು ಪತ್ತೆಯಾದ ಸೋಂಕಿತರಲ್ಲಿ ಹಾಸನದಲ್ಲಿ ಪತ್ತೆಯಾದ 13 ಜನ ಸೋಂಕಿತರಲ್ಲಿ 10 ಜನರಿಗೆ ಯಾವುದೇ ರೀತಿಯ ಟ್ರಾವೆಲ್ ಹಿಸ್ಟರಿಯೇ ಇಲ್ಲ. ಆ 10 ಮಂದಿ ಸೊಂಕಿತರಿಗೂ ಯಾವ ಮೂಲದಿಂದ ಸೋಂಕು ಹರಡಿದೆ ಎಂಬುದನ್ನು ಪತ್ತೆಹಚ್ಚಲಾಗುತ್ತಿದೆ.

ಇನ್ನು ನೆರೆ ರಾಜ್ಯಕ್ಕೆ ಪ್ರಯಾಣ ಬೆಳೆಸಿದವರಲ್ಲಿ ಹೆಚ್ಚಿನವರು ಮಹಾರಾಷ್ಟ್ರಕ್ಕೆ ಪ್ರಯಾಣ ಬೆಳೆಸಿದವರಾಗಿದ್ದಾರೆ. ಅದರಲ್ಲಿ ವಿಜಯಪುರದಲ್ಲಿ 2, ಕಲಬುರಗಿ 3, ದಕ್ಷಿಣ ಕನ್ನಡದಲ್ಲಿ ಜನ ಸೋಂಕಿತರು ಇರುವುದು ದೃಢಪಟ್ಟಿದೆ. ದಕ್ಷಿಣ ಕನ್ನಡದಲ್ಲಿ 6, ಉಡುಪಿಯಲ್ಲಿ 24, ಹಾಸನ ಇಬ್ಬರು, ಚಿಕ್ಕಮಗಳೂರು 2, ಯಾದಗಿರಿಯಲ್ಲಿ 7 ಜನರಲ್ಲಿ ಸೋಂಕು ಪತ್ತೆಯಾಗಿದೆ.

ಬೆಂಗಳೂರಲ್ಲಿ ಇಂದು ಪತ್ತೆಯಾದ 7 ಜನ ಸೋಂಕಿತರಲ್ಲಿ ಒಬ್ಬರು ಸೌಧಿಗೆ ಪ್ರಯಾಣ ಬೆಳೆಸಿದ್ದರಿಂದ ಸೋಂಕು ಬಂದಿರುತ್ತದೆ. ಇನ್ನುಳಿದ 6 ಜನರಿಗೂ ಸೋಂಕಿತ ಪೇಷೆಂಟ್ 1240 ರ ವ್ಯಕ್ತಿಯಿಂದ ಸೋಂಕು ತಗುಲಿದೆ. ರಾಯಚೂರಿನಲ್ಲಿ ಒಬ್ಬರಲ್ಲಿ ತೀವ್ರತರ ಉಸಿರಾಟದ ಸಮಸ್ಯೆ ಕಂಡುಬಂದಿದ್ದು , ಸೋಂಕು ಇರುವುದು ದೃಢಪಟ್ಟಿದೆ. ಉಡುಪಿಯಲ್ಲಿ ಕೇರಳದಿಂದ ಬಂದವರು ಒಬ್ಬರು, ತೆಲಂಗಾಣ ಪ್ರಯಾಣದಿಂದ ಇಬ್ಬರು, ಹಾಸನದಲ್ಲಿ ಒಬ್ಬರಿಗೆ ಪೇಷೆಂಟ್ 2441 ರ ವ್ಯಕ್ತಿಯ ಸಂಪರ್ಕದಿಂದಸೋಂಕು ತಗುಲಿದೆ. ಚಿಕ್ಕಮಗಳೂರಲ್ಲಿ ಒಬ್ಬರಿಗೆ ನವದೆಹಲಿ ಪ್ರಯಾಣದಿಂದ ಸೋಂಕು ಬಂದಿದೆ. ಚಿತ್ರದುರ್ಗದಲ್ಲಿ ತಮಿಳುನಾಡಿಗೆ ಪ್ರಯಾಣ ಬೆಳೆಸಿದ್ದರಿಂದ 6 ಜನರಿಗೆ ಸೋಂಕು ಬಂದಿರುತ್ತದೆ.

 

LEAVE A REPLY

Please enter your comment!
Please enter your name here

- Advertisment -

Most Popular

‘ಈ ಗ್ರಾಮದಲ್ಲಿ ಎಲ್ಲರಿಗೂ ಕಷಾಯ ಉಚಿತ’

ಗದಗ : ಕೊರೊನಾ ನಿರ್ಮೂಲನೆಗೆ ಗ್ರಾಮ ಪಂಚಾಯತಿಯೊಂದು ವಿಭಿನ್ನ ಹಾಗೂ ವಿನೂತನ ಪ್ರಯತ್ನ ನಡೆಸಿದೆ. ಈಗಾಗಲೇ ರಾಜ್ಯದಲ್ಲಿ ಹಲವು ಗ್ರಾಮ‌ ಪಂಚಾಯತಿಗಳು ಕೊರೋನಾ ನಿರ್ಮೂಲನೆಗೆ ಅತ್ಯುನ್ನತ ಹಾಗೂ ವಿನೂತನ ಕಾರ್ಯಗಳನ್ನ ಮಾಡಿ ಮಾದರಿ...

‘ವಿಚಿತ್ರ ರೋಗಕ್ಕೆ ನವಜಾತ ಶಿಶು ಬಲಿ’

ಬೆಂಗಳೂರು : ಕೊರೋನಾದಿಂದ ಗುಣಮುಖವಾದ ಮಕ್ಕಳನ್ನು ಈಗ ಹೊಸದೊಂದು ರೋಗ ಕಾಡುತ್ತಿದೆ. ಪುಟ್ಟ ಮಕ್ಕಳಲ್ಲೇ ಈ ರೋಗ ಹೆಚ್ಚಾಗಿ ಕಂಡು ಬರುತ್ತಿದ್ದು, ಪೋಷಕರು ಕಂಗಾಲಾಗಿದ್ದಾರೆ. ಈ ರೋಗಕ್ಕೆ ಚಿಕಿತ್ಸೆ ನೀಡಲು ಒಂದು ಮಗುವಿಗೆ...

ಖಾಸಗಿ ಶಾಲಾ ಶುಲ್ಕದಲ್ಲಿ ಕಡಿತ ಮಾಡುವ ಪ್ರಮೇಯವೇ ಇಲ್ಲ : ಕ್ಯಾಮ್ಸ್ ತೀರ್ಮಾನ

ಬೆಂಗಳೂರು : ಖಾಸಗಿ ಶಾಲಾ ಶುಲ್ಕದಲ್ಲಿ ಕಡಿತ ಮಾಡುವ ಪ್ರಮೇಯವೇ ಇಲ್ಲ. ಪೂರ್ತಿ ಶುಲ್ಕ ಕಟ್ಟಲೇ ಬೇಕು ಎಂದು ವರ್ಚುವಲ್ ಮೀಟಿಂಗ್ ನಲ್ಲಿ ಕ್ಯಾಮ್ಸ್ ತೀರ್ಮಾನ ಕೈಗೊಂಡಿದೆ. ವರ್ಚುವಲ್ ಮೀಟಿಂಗ್ ನಲ್ಲಿ 10ಕ್ಕೂ...

ಬೈಕ್‌ ಅಪಘಾತದಲ್ಲಿ ನಟ ಸಂಚಾರಿ ವಿಜಯ್‌ ಗೆ ಗಂಭೀರ ಗಾಯ..

ಬೆಂಗಳೂರು :  ರಾಷ್ಟ್ರ ಪ್ರಶಸ್ತಿ ನಟ ಸಂಚಾರಿ ವಿಜಯ್ ಗೆ ಅಪಘಾತವಾಗಿದ್ದು, ಸಂಚಾರಿ ವಿಜಯ್ ಸ್ಥಿತಿ ಚಿಂತಾಜನಕವಾಗಿದೆ. ಬನ್ನೇರುಘಟ್ಟ ರಸ್ತೆಯಲ್ಲಿರುವ ಅಪೊಲೋ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ನಟ ಸಂಚಾರಿ ವಿಜಯ್ ತಲೆಗೆ...

Recent Comments