Friday, September 30, 2022
Powertv Logo
Homeರಾಜ್ಯರಾಜ್ಯದಲ್ಲಿ ಇಂದು ಒಂದೇ ದಿನ 29 ಮಂದಿಯಲ್ಲಿ ಸೋಂಕು ಪತ್ತೆ : ಸೋಂಕಿತರ ಸಂಖ್ಯೆ  474...

ರಾಜ್ಯದಲ್ಲಿ ಇಂದು ಒಂದೇ ದಿನ 29 ಮಂದಿಯಲ್ಲಿ ಸೋಂಕು ಪತ್ತೆ : ಸೋಂಕಿತರ ಸಂಖ್ಯೆ  474 ಕ್ಕೆ ಏರಿಕೆ

ಬೆಂಗಳೂರು: ರಾಜ್ಯದಲ್ಲಿ ಕ್ಷಣಕ್ಷಣಕ್ಕೂ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಇದೀಗ ಬಂದಿರುವ ಹೆಲ್ತ್ ಬುಲೆಟಿನ್ ಪ್ರಕಾರ ಇಂದು ಒಟ್ಟು 29 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ಸೋಂಕಿತರ ಸಂಖ್ಯೆ 474 ಕ್ಕೆ ಏರಿಕೆಯಾಗಿದೆ.

ಇಂದು ಬೆಂಗಳೂರು ಒಂದರಲ್ಲೇ 19 ಮಂದಿ ಸೋಂಕಿತರು ಪತ್ತೆಯಾಗಿದ್ದು, ಬೆಳಗ್ಗೆ ಬಂದ ಹೆಲ್ತ್ ಬುಲೆಟಿನ್ ಪ್ರಕಾರ 11 ಸೋಂಕಿತರು ಪತ್ತೆಯಾಗಿದ್ದರು. ಆದರೆ ಸಂಜೆ ವೇಳೆಗೆ ಮತ್ತೆ 8 ಜನರಲ್ಲಿ ಸೋಂಕು ಕಂಡು ಬಂದಿದೆ. ಈ ಮೂಲಕ ಬೆಂಗಳೂರಲ್ಲಿ ಪತ್ತೆಯಾದ ಸೋಂಕಿತರ ಸಂಖ್ಯೆ 120 ಕ್ಕೇರಿದೆ. ಬಿಹಾರಿಯ ಕಾರ್ಮಿಕ ಬೆಂಗಳೂರಲ್ಲಿ ಕೊರೋನಾ ಹೆಚ್ಚಾಗಲು ಮೂಲ ಕಾರಣವಾಗಿದ್ದು, ಆತನೊಬ್ಬನಿಂದಲೇ 20 ಮಂದಿಗೆ ಕೊರೋನಾ ಹರಡಿದೆ. ಆತನ ಸಂಪರ್ಕದಲ್ಲಿದ್ದವರ ಪೈಕಿ ಗುರುವಾರ 14 ಮಂದಿ ಹಾಗೂ ಇಂದು 6 ಮಂದಿಗೆ ಸೋಂಕು ಹರಡಿದೆ. ಹಾಗಾಗಿ ಬೆಂಗಳೂರಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಿದ್ದು, ಹೊಂಗಸಂದ್ರ ಡೇಂಜರ್ ಝೋನ್ ಆಗಿದೆ.

ಇನ್ನುಳಿದಂತೆ ಬಾಗಲಕೋಟೆಯಲ್ಲಿ 14 ವರ್ಷದ ಬಾಲಕನಿಗೆ ಸೋಂಕು ತಗುಲಿದ್ದು, ಇಂದು ಒಟ್ಟು ಮೂವರಲ್ಲಿ ಸೋಂಕು ದೃಢಪಟ್ಟಿದೆ. ಬೆಳಗಾವಿಯಲ್ಲಿ ಇಬ್ಬರಲ್ಲಿ ಸೋಂಕು ಪತ್ತೆಯಾಗಿದೆ. ವಿಜಯಪುರದಲ್ಲಿ 27 ವರ್ಷದ  ಸೇರಿದಂತೆ ಇಬ್ಬರಲ್ಲಿ ಸೋಂಕು ದೃಢಪಟ್ಟಿದೆ. ಮಳವಳ್ಳಿಯಲ್ಲಿ 60 ವರ್ಷದ ವೃದ್ಧನಿಗೆ ಸೋಂಕು ತಗುಲಿದೆ. ಇನ್ನು ಚಿಕ್ಕಬಳ್ಳಾಪುರ, ತುಮಕೂರಿನಲ್ಲಿ ತಲಾ ಒಬ್ಬರಲ್ಲಿ ಸೋಂಕು ದೃಢಪಟ್ಟಿದೆ.

- Advertisment -

Most Popular

Recent Comments