ಬೆಂಗಳೂರು: ಇಂದು ರಾಜ್ಯದಲ್ಲಿ ಮತ್ತೆ ಕೊರೋನಾ ಸೋಂಕಿತರ ಸಂಖ್ಯೆ ಏರಿಕೆಯಾಗಿದ್ದು, ಇಂದು ಒಟ್ಟು 28 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ಸೋಂಕಿತರ ಸಂಖ್ಯೆ 642 ಕ್ಕೇರಿಕೆಯಾಗಿದೆ. ದಾವಣಗೆರೆ ಒಂದರಲ್ಲೇ 21 ಜನರಲ್ಲಿ ಸೋಂಕು ದೃಢಪಟ್ಟಿದೆ. ಇನ್ನು ರಾಜ್ಯದಲ್ಲಿ ಒಬ್ಬ ಸೋಂಕಿತ ವ್ಯಕ್ತಿ ಸಾವನ್ನಪ್ಪಿದ್ದು, ಸಾವನ್ನಪ್ಪಿದವರ ಸಂಖ್ಯೆ 26 ಕ್ಕೇರಿಕೆಯಾಗಿದೆ.
ದಾವಣಗೆರೆಯಲ್ಲಿ ಪತ್ತೆಯಾದ 21 ಜನ ಸೋಂಕಿತರಲ್ಲಿ ಪೇಷೆಂಟ್ ನಂ 533 ವ್ಯಕ್ತಿಯಿಂದ 52 ವರ್ಷದ ಮಹಿಳೆ, 38 ವರ್ಷದ ಪುರುಷ, 32 ವರ್ಷದ ಮಹಿಳೆ, 35 ವರ್ಷದ ಪುರುಷ, 32 ವರ್ಷದ ಮಹಿಳೆ 12 ವರ್ಷದ ಬಾಲಕಿ, 7 ವರ್ಷದ ಬಾಲಕ, 27 ವರ್ಷದ ಪುರುಷ,25 ವರ್ಷದ ಪುರುಷ, 33 ವರ್ಷದ ಪುರುಷ, 62 ವರ್ಷದ ಮಹಿಳೆ, 34 ವರ್ಷದ ಮಹಿಳೆ, 20 ವರ್ಷದ ಮಹಿಳೆ, 22 ವರ್ಷದ ಮಹಿಳೆ, 6 ವರ್ಷದ ಬಾಲಕ, 17 ವರ್ಷದ ಯುವಕ, 42 ವರ್ಷದ ಪುರುಷ ಹಾಗೂ 11 ವರ್ಷದ ಬಾಲಕನಿಗೆ ಸೊಂಕು ಹರಡಿದೆ. ಇನ್ನುಳಿದಂತೆ ಪೇಷೆಂಟ್ 556 ರ ವ್ಯಕ್ತಿಯಿಂದ 30 ವರ್ಷದ ಪುರುಷ ಹಾಗೂ 49 ವರ್ಷದ ಮಹಿಳೆ ಇಬ್ಬರಿಗೆ ಸೋಂಕು ಬಂದಿದೆ. ಇನ್ನೊಬ್ಬ 38 ವರ್ಷದ ಪುರುಷನಿಗೆ ಸೋಂಕು ಹರಡಿದೆ.
ಇನ್ನುಳಿದಂತೆ ಚಿಕ್ಕಬಳ್ಳಾಪುರದಲ್ಲಿ 30 ವರ್ಷದ ಪುರುಷನಿಗೆ ಪೇಷೆಂಟ್ ನಂ. 586 ರ ವ್ಯಕ್ತಿಯಿಂದ ಸೋಂಕು ಬಂದಿರುತ್ತದೆ. ಮಂಡ್ಯದಲ್ಲಿ 20 ವರ್ಷದ ಯುವತಿ ಹಾಗೂ 19 ವರ್ಷದ ಯುವಕನಿಗೆ ಸೋಂಕು ಬಂದಿದ್ದು, ಮುಂಬೈ, ಮಹಾರಾಷ್ಟ್ರಕ್ಕೆ ಪ್ರಯಾಣ ಬೆಳೆಸಿದ ಹಿನ್ನೆಲೆ ಇಬ್ಬರಿಗೂ ಸೋಂಕು ಹರಡಿರುತ್ತದೆ. ಹಾವೇರಿಯಲ್ಲಿ ಮೊದಲ ಸೋಂಕು ಪ್ರಕರಣ ಪತ್ತೆಯಾಗಿದ್ದು, ಮುಂಬೈ, ಮಹಾರಾಷ್ಟ್ರಕ್ಕೆ ಪ್ರಯಾಣ ಬೆಳೆಸಿದ ಪರಿಣಾಮ 32 ವರ್ಷದ ಪುರುಷನಿಗೆ ಸೋಂಕು ತಗುಲಿರುತ್ತದೆ. ವಿಜಯಪುರದಲ್ಲಿ 62 ವರ್ಷದ ಮಹಿಳೆಗೆ ಪೇಷೆಂಟ್ 228 ರ ಸೋಂಕಿತನ ದ್ವಿತೀಯ ಸಂಪರ್ಕದಿಂದ ಸೋಂಕು ಹರಡಿರುತ್ತದೆ. ಇನ್ನು ಕಲಬುರಗಿಯಲ್ಲಿ ಇಂದು ಇಬ್ಬರಲ್ಲಿ ಸೋಂಕು ಪತ್ತೆಯಾಗಿದ್ದು, ಅದರಲ್ಲಿ ಒಬ್ಬರು 36 ವರ್ಷದ ಮಹಿಳೆಯಾಗಿದ್ದು, ಪೇಷೆಂಟ್ ನಂ. 604 ರ ವ್ಯಕ್ತಿಯಿಂದ ಸೊಮಕು ಬಂದಿದೆ. ಇನ್ನೊಬ್ಬ 37 ವರ್ಷದ ಪುರುಷ ಕಲಬುರಗಿಯ ಚಿಂಚೋಳಿಯವನಾಗಿದ್ದು, ಹೈದರಾಬಾದ್, ತೆಲಂಗಾಣಕ್ಕೆ ಪ್ರಯಾಣ ಬೆಳೆಸಿದ್ದರಿಂದ ಸೋಂಕು ಹರಡಿದೆ.
2camping