ರಾಜ್ಯದಲ್ಲಿ ಒಂದೇ ದಿನ 22 ಜನರಲ್ಲಿ ಸೋಂಕು ದೃಢ : ಬೆಳಗಾವಿ ಜಿಲ್ಲೆಯಲ್ಲೇ 14 ಸೋಂಕಿತರು

0
558

ಬೆಂಗಳೂರು: ರಾಜ್ಯದಲ್ಲಿ ಇಂದು ಸೋಂಕಿತರ ಸಂಖ್ಯೆ ಗರಿಷ್ಠ ಮಟ್ಟದಲ್ಲಿ ಏರಿಕೆಯಾಗಿದ್ದು, ಇಂದು ಒಟ್ಟು 22 ಜನರಲ್ಲಿ ಸೋಂಕು ದೃಢಪಟ್ಟಿದೆ.ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 557 ಕ್ಕೆ ಏರಿಕೆಯಾಗಿದೆ.

ಇಂದು ಪತ್ತೆಯಾದ ಒಟ್ಟು ಸೋಂಕಿತರಲ್ಲಿ ಬೆಳಗಾವಿ ಒಂದರಲ್ಲೇ 14 ಜನರಲ್ಲಿ ಸೋಂಕು ದೃಢಪಟ್ಟಿದೆ. ಇನ್ನುಳಿದಂತೆ ವಿಜಯಪುರದಲ್ಲಿ 2 ಕೇಸ್​ಗಳು, ದಕ್ಷಿಣ ಕನ್ನಡದಲ್ಲಿ 1, ಬೆಂಗಳೂರು 3, ತುಮಕೂರು ಹಾಗೂ ದಾವಣಗೆರೆಯಲ್ಲಿ ತಲಾ ಒಂದು ಪ್ರಕರಣಗಳು ಪತ್ತೆಯಾಗಿದೆ.

ಬೆಳಗಾವಿಯಲ್ಲಿ ಪತ್ತೆಯಾದ 14 ಕೊರೋನಾ ಪ್ರಕರಣಗಳಲ್ಲಿ 12 ಪ್ರಕರಣಗಳು ಬೆಳಗಾವಿಯ ಹಿರೇಬಾಗೇವಾಡಿಯಿಂದಲೇ ಬಂದಿದೆ. ಇನ್ನೆರಡು ಪ್ರಕರಣ ಹುಕ್ಕೇರಿಯಲ್ಲಿ ಪತ್ತೆಯಾಗಿದೆ. ಹಿರೇಬಾಗೇವಾಡಿಯಲ್ಲಿ ಪತ್ತೆಯಾದ 24 ವರ್ಷದ  ಮಹಿಳೆಯಾಗಿದ್ದು, ಪೇಷೆಂಟ್ ನಂ. 469, 483,ಹಾಗೂ 484 ಸೋಂಕಿತರ ದ್ವಿತೀಯ ಸಂಪರ್ಕದಿಂದ ಸೋಂಕು ಬಂದಿರುತ್ತದೆ. ಇನ್ನು ಪೇಷೆಂಟ್ ನಂ. 483 ವ್ಯಕ್ತಿಯ ದ್ವೀತೀಯ ಸಂಪರ್ಕದಿಂದ 27 ವರ್ಷದ ಪುರುಷ ಹಾಗೂ 50 ವರ್ಷದ ಪುರುಷ ಸೋಂಕು ಬಂದಿದೆ. ಪೇಷೆಂಟ್ ನಂ. 486 ವ್ಯಕ್ತಿಯ ದ್ವಿತೀಯ ಸಂಪರ್ಕದಿಂದ 24 ವರ್ಷದ ಮಹಿಳೆ, 16 ವರ್ಷದ ಬಾಲಕ ಹಾಗೂ 36 ವರ್ಷದ ಮಹಿಳೆಗೆ ಸೋಂಕು ಹರಡಿದೆ. 18 ವರ್ಷದ ಯುವಕ ಹಾಗೂ 36 ವರ್ಷದ ಪುರುಷನಿಗೆ ಪೇಷೆಂಟ್ ನಂ. 496 ರ ವ್ಯಕ್ತಿಯ ದ್ವಿತೀಯ ಸಂಪರ್ಕದಿಂದ ಸೋಂಕು ಬಂದಿದೆ. ಪೇಷೆಂಟ್ 494 ವ್ಯಕ್ತಿಯ ದ್ವಿತೀಯ ಸಂಪರ್ಕದಿಂದ 48 ವರ್ಷದ ಮಹಿಳೆಗೆ ಸೋಂಕು ಬಂದಿದೆ. 27 ವರ್ಷದ ಮಹಿಳೆಗೆ ಪೇಷೆಂಟ್ ನಂ. 496 ಹಾಗೂ 483 ವ್ಯಕ್ತಿಯ ದ್ವಿತೀಯ ಸಂಪರ್ಕದಿಂದ ಸೋಂಕು ತಗುಲಿರುತ್ತದೆ. ಪೇಷೆಂಟ್ 293 ವ್ಯಕ್ತಿಯಿಂದ  8 ವರ್ಷದ ಹೆಣ್ಣು ಮಗುವಿಗೆ ಸೋಂಕು ಬಂದಿದೆ. ಪೇಷೆಂಟ್ 484 ವ್ಯಕ್ತಿಯ ದ್ವಿತೀಯ ಸಂಪರ್ಕದಿಂದ 43 ವರ್ಷದ ಪುರುಷನಿಗೆ ಸೋಂಕು ತಗುಲಿದೆ. ಇನ್ನು ಬೆಳಗಾವಿಯ ಹುಕ್ಕೇರಿಯಲ್ಲಿ ಪೇಷೆಂಟ್ 293 ವ್ಯಕ್ತಿಯ ಸಂಪರ್ಕದಿಂದ 9 ವರ್ಷದ ಬಾಲಕ ಹಾಗೂ 75 ವರ್ಷದ ಮಹಿಳೆಗೆ ಸೋಂಕು ಹರಡಿದೆ.

ಬೆಂಗಳೂರಲ್ಲಿ ಇಂದು ಮೂವರಲ್ಲಿ ಸೋಂಕು ಪತ್ತೆಯಾಗಿದ್ದು, ಕಂಟೈನ್​ಮೆಂಟ್​ ವಲಯಕ್ಕೆ ಭೇಟಿ ನೀಡಿದ್ದರಿಂದ 20  ವರ್ಷದ ಯುವಕ ಹಾಗೂ 28 ವರ್ಷದ ಪುರುಷನಿಗೆ ಸೋಂಕು ಬಂದಿದೆ. 63 ವರ್ಷದ ಪುರುಷನಿಗೂ ಸೋಂಕು ತಗುಲಿದೆ.

ಇನ್ನುಳಿದಂತೆ  ದಾವಣಗೆರೆ 69 ವರ್ಷದ ಪುರುಷನಲ್ಲಿ ಸೋಂಕು ಪತ್ತೆಯಾಗಿದೆ. ತುಮಕೂರಿನಲ್ಲಿ ಪೇಷೆಂಟ್ ನಂ. 535 ಸಂಪರ್ಕದಿಂದ 65 ವರ್ಷದ ಮಹಿಳೆ ಹಾಗೂ ದಕ್ಷಿಣ ಕನ್ನಡದಲ್ಲಿ ಪೇಷೆಂಟ್ ನಂ. 501 ವ್ಯಕ್ತಿಯ ಸಂಪರ್ಕದಿಂದ  58 ವರ್ಷದ ಮಹಿಳೆಯಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 557 ಕ್ಕೆ ಏರಿಕೆಯಾಗಿದೆ. ಈವರೆಗೆ ಸಾವನ್ನಪ್ಪಿದವರ ಸಂಖ್ಯೆ 21 ಆಗಿದ್ದು, ಗುಣಮುಖರಾದವರ ಸಂಖ್ಯೆ 223 ಕ್ಕೆ ಏರಿದೆ.

LEAVE A REPLY

Please enter your comment!
Please enter your name here