Sunday, June 26, 2022
Powertv Logo
Homeರಾಜ್ಯಕೊರೋನಾ ಹಾಟ್​ಸ್ಪಾಟ್ ಆಗಿ ಬದಲಾಗುತ್ತಿದೆ ದಾವಣಗೆರೆ : ಇಂದು ಒಂದೇ ದಿನ 21 ಜನರಲ್ಲಿ ಸೋಂಕು...

ಕೊರೋನಾ ಹಾಟ್​ಸ್ಪಾಟ್ ಆಗಿ ಬದಲಾಗುತ್ತಿದೆ ದಾವಣಗೆರೆ : ಇಂದು ಒಂದೇ ದಿನ 21 ಜನರಲ್ಲಿ ಸೋಂಕು ಪತ್ತೆ

ದಾವಣಗೆರೆ: ಗ್ರೀನ್​ ಝೋನ್​ನಲ್ಲಿದ್ದ ದಾವಣೆಗೆರೆ  ದಿನ ಕಳೆದಂತೆ ಕೊರೋನಾ ಹಾಟ್​ಸ್ಪಾಟ್​ ಆಗುತ್ತಿದೆ. ದಾವಣಗೆರೆಯಲ್ಲಿ ಇಂದು ಒಂದೇ ದಿನ 21 ಜನರಿಗೆ ಸೋಂಕು ಪತ್ತೆಯಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದ್ದಾರೆ.

ದಾವಣಗೆರೆಯಲ್ಲಿ ಕೊರೋನಾ ಸೋಂಕಿತರು ಆತಂಕ ಹೆಚ್ಚಿಸುತ್ತಿದ್ದು, ಲಾಕ್​ಡೌನ್ ಸಡಿಲಿಕೆ ಬೆನ್ನಲ್ಲೇ ಜಿಲ್ಲೆಯಲ್ಲಿ ಕೊರೋನಾ ಕೋಲಾಹಲ ಎಬ್ಬಿಸುತ್ತಿದೆ. ದಾವಣಗೆರೆಯಲ್ಲಿ ಸೋಂಕಿತ  ನರ್ಸ್ ಹಾಗೂ ವೃದ್ಧ ಇಬ್ಬರಿಂದಲೇ 21 ಜನರಲ್ಲೂ ವೈರಸ್ ಪತ್ತೆಯಾಗಿದೆ. ಈ ಮೂಲಕ ಈವರೆಗೆ ಒಟ್ಟು 31 ಕೊರೋನಾ ಪ್ರಕರಣಗಳು ದೃಢಪಟ್ಟಿದೆ. ದಾವಣಗೆರೆಯಲ್ಲಿ ಮಾಡಿದ್ದ 164 ಸ್ಯಾಂಪಲ್ ಸಂಗ್ರಹದಲ್ಲಿ 21 ಜನರಿಗೆ ಸೋಂಕು ಇರುವುದು ಗೊತ್ತಾಗಿದೆ. ಹಾಗಾಗಿ ಕೊರೋನಾ ಸೋಂಕಿತರ ಮೂಲ ಹುಡುಕುವುದೇ ಜಿಲ್ಲಾಡಳಿತಕ್ಕೆ ಸವಾಲಾಗಿದೆ ಎಂದು ಮಹಾಂತೇಶ ಬೀಳಗಿ ಆತಂಕ ವ್ಯಕ್ತಪಡಿಸಿದ್ದಾರೆ.

1 COMMENT

LEAVE A REPLY

Please enter your comment!
Please enter your name here

- Advertisment -

Most Popular

Recent Comments