Home ರಾಜ್ಯ ಕರ್ನಾಟಕದಲ್ಲಿ 122 ಜನರಲ್ಲಿ ಕೊರೋನಾ ಪಾಸಿಟಿವ್ : ಮೃತಪಟ್ಟವರ ಸಂಖ್ಯೆಯೂ 45 ಕ್ಕೆ ಏರಿಕೆ

ಕರ್ನಾಟಕದಲ್ಲಿ 122 ಜನರಲ್ಲಿ ಕೊರೋನಾ ಪಾಸಿಟಿವ್ : ಮೃತಪಟ್ಟವರ ಸಂಖ್ಯೆಯೂ 45 ಕ್ಕೆ ಏರಿಕೆ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನ ಕಳೆದಂತೆ ಹೆಚ್ಚಳವಾಗುತ್ತಿದೆಯಲ್ಲದೆ ಕಡಿಮೆಯಾಗುತ್ತಿಲ್ಲ. ಇಂದು ಮತ್ತೆ ರಾಜ್ಯದಲ್ಲಿ 122 ರಷ್ಟು ಸೋಂಕಿತರು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 2,405 ಕ್ಕೆ ಏರಿಕೆಯಾಗಿದೆ. ಇಂದು ಒಬ್ಬ ಸೋಂಕಿತೆ ಮಹಿಳೆ ಸಾವನ್ನಪ್ಪಿದ್ದು, ಮೃತಪಟ್ಟವರ ಸಂಖ್ಯೆಯೂ 45ಕ್ಕೆ ಏರಿದೆ. ಇವೆಲ್ಲದರ ನಡುವೆಯೂ ಸಂತಸದ ವಿಷಯವೆಂದರೆ ಈವರೆಗೆ ಪತ್ತೆಯಾದ ಸೋಂಕಿತರ ಸಂಖ್ಯೆಯಲ್ಲಿ 762 ಜನ ಸೋಂಕಿನಿಂದ ಗುಣಮುಖರಾಗಿದ್ದಾರೆ. ಹಾಗಾಗಿ ಇನ್ನು 1,596 ಜನ ಸೋಂಕಿನಿಂದ ಬಳಲುತ್ತಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.

ಕರ್ನಾಟಕದಲ್ಲಿ ಇತ್ತೀಚೆಗೆ ಪತ್ತೆಯಾಗುತ್ತಿರುವ ಸೋಂಕಿತರಲ್ಲಿ ಹೆಚ್ಚಿನವರು ನೆರೆ ರಾಜ್ಯಕ್ಕೆ ಪ್ರಯಾಣ ಬೆಳೆಸಿದವರಾಗಿದ್ದಾರೆ. ಇವರಲ್ಲಿ ಮಹಾರಾಷ್ಟ್ರಕ್ಕೆ ಪ್ರಯಾಣ ಬೆಳೆಸಿದವರಲ್ಲಿ ಯಾದಗಿರಿಯಲ್ಲಿ 16 , ಕಲಬುರಗಿಯಲ್ಲಿ 28 ಮಂಡ್ಯ 1, ಬೆಳಗಾವಿ 2, ವಿಜಯಪುರ 2, ದಕ್ಷಿಣ ಕನ್ನಡ 10, ಉತ್ತರ ಕನ್ನಡ 6, ಚಿಕ್ಕಮಗಳೂರು 3, ಉಡುಪಿ 9, ಬೀದರ್ 11, ರಾಯಚೂರಿನಲ್ಲಿ 5, ತುಮಕೂರಿನಲ್ಲಿ 1, ಹಾಸನದಲ್ಲಿ 14 ಜನ ಸೋಂಕಿತರು ಇರುವುದು ದೃಢಪಟ್ಟಿದೆ.

ಮಹಾರಾಷ್ಟ್ರಕ್ಕೆ ಪ್ರಯಾಣ ಬೆಳೆಸಿ ಒಂದಷ್ಟು ಜನರಲ್ಲಿ ಕೊರೋನಾ ಪಾಸಿಟಿವ್ ಬಂದಿದ್ದರೆ, ಇನ್ನೂ ಕೆಲವೊಬ್ಬರಿಗೆ ತಮಿಳುನಾಡಿಗೆ ಪ್ರಯಾಣ ಬೆಳೆಸಿದ್ದರಿಂದ ಸೋಂಕು ಹರಡಿದೆ. ಅದರಲ್ಲಿ ಬೆಂಗಳೂರಲ್ಲಿ 2, ಹಾಸನ ಒಬ್ಬರಲ್ಲಿ ಸೋಂಕು ದೃಢಪಟ್ಟಿದೆ.

ಗುಜರಾತ್​ಗೆ ಪ್ರಯಾಣ ಬೆಳೆಸಿದ್ದರಿಂದ ದಕ್ಷಿಣ ಕನ್ನಡದಲ್ಲಿ ಒಬ್ಬರಿಗೆ ಸೋಂಕು ತಗುಲಿದೆ. ಬಳ್ಳಾರಿಯಲ್ಲಿ ಉತ್ತರ ಪ್ರದೇಶ ಪ್ರಯಾಣದಿಂದ ಒಬ್ಬರಿಗೆ ಸೋಂಕು ಬಂದಿದೆ. ಬೀದರ್​ನಲ್ಲಿ ಒಬ್ಬರಲ್ಲಿ ಪೇಷೆಂಟ್ 2328 ರ ವ್ಯಕ್ತಿಯಿಂದ ಒಬ್ಬನಿಗೆ ಸೋಂಕು ಹರಡಿದೆ. ಬೆಂಗಳೂರು ಪೇಷೆಂಟ್ 1606,1607,ಹಾಗೂ ಪೇಷೆಂಟ್ 1608 ರ ವ್ಯಕ್ತಿಯ ಸಂಪರ್ಕದಿಂದ ಸೋಂಕು ಬಂದಿರುತ್ತದೆ. ಇನ್ನು ಪೇಷೆಂಟ್ 1993 ರಿಂದ ಒಬ್ಬರಿಗೆ, ಪೇಷೆಂಟ್ 1396 ರಿಂದ ಒಬ್ಬರು ಹಾಗೂ ಮಧ್ಯಪ್ರದೇಶಕ್ಕೆ ಪ್ರಯಾಣ ಬೆಳೆಸಿದ್ದರಿಂದ ಒಬ್ಬರಲ್ಲಿ ಸೋಂಕು ಕಾಣಿಸಿಕೊಂಡಿದೆ. ಇನ್ನಿಬ್ಬರಲ್ಲಿ ಒಬ್ಬರು ನೇಪಾಳ ಪ್ರಯಾಣ ಹಾಗೂ ಮತ್ತೊಬ್ಬರು ಯುಎಇ ಗೆ ಪ್ರಯಾಣ ಬೆಳೆಸಿದವರಾಗಿದ್ದಾರೆ. ಬೆಳಗಾವಿಯಲ್ಲಿ ಇಬ್ಬರು ಸೋಂಕಿತರಲ್ಲಿ ಒಬ್ಬರು ದೆಹಲಿ ಹಾಗೂ ಇನ್ನೊಬ್ಬರು ಕೇರಳ ಪ್ರಯಾಣ ಬೆಳೆಸಿದವರಾಗಿದ್ದಾರೆ.

ಇನ್ನು ಇಂದು ಒಬ್ಬ ಸೋಂಕಿತೆ ಮಹಿಳೆಯು ಸಾವನ್ನಪ್ಪಿದ್ದು, ಆಕೆಯು ಮಹಾರಾಷ್ಟ್ರಕ್ಕೆ ಪ್ರಯಾಣ  ಬೆಳೆಸಿದ್ದರಿಂದ  ಸೋಂಕು ತಗುಲಿದೆ ಎಂಬುದು ತಿಳಿದು ಬಂದಿದೆ. ಮೃತ ಮಹಿಳೆಗೆ 69 ವರ್ಷ ವಯಸ್ಸಾಗಿದ್ದು, ಯಾದಗಿರಿಯ ನಿವಾಸಿಯಾಗಿದ್ದಾರೆ. ಮಹಿಳೆ ಸಾವನ್ನಪ್ಪಿದ ಬಳಿಕ  ಅವರನ್ನು ಗಂಟಲು ದ್ರವ ಪರೀಕ್ಷೆಗೆ ಒಳಪಡಿಸಲಾಗಿದ್ದು, ಅವರಿಗೆ ಕೊರೋನಾ ಇರುವುದು ದೃಢಪಟ್ಟಿದೆ. ಈ ಮೂಲಕ ರಾಜ್ಯದಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆಯೂ 45 ಕ್ಕೆ ಏರಿಕೆಯಾಗಿದೆ. 

LEAVE A REPLY

Please enter your comment!
Please enter your name here

- Advertisment -

Most Popular

ಬುಧವಾರ ರಾತ್ರಿಯಿಂದಲೇ ದಕ್ಷಿಣ ಕನ್ನಡ ಜಿಲ್ಲೆ ಸಂಪೂರ್ಣ ಲಾಕ್ ಡೌನ್..!!

ದಕ್ಷಿಣ ಕನ್ನಡ : ಕೊರೊನಾ ಸೋಂಕು ಹೆಚ್ಚಾದ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಒಂದು ವಾರ ಕಾಲ ಲಾಕ್ ಡೌನ್ ಮಾಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಘೋಷಿಸಿದ್ದಾರೆ. ಇಂದು...

ಉಡುಪಿ ಜಿಲ್ಲೆಗೆ ಸದ್ಯ ಲಾಕ್ಡೌನ್ ಅಗತ್ಯ ಇಲ್ಲ – ರಘುಪತಿ ಭಟ್

ಉಡುಪಿ : ಬೆಂಗಳೂರು ಲಾಕ್ಡೌನ್ ಆದೇಶದ ಬೆನ್ನಲ್ಲಿ ಉಳಿದ ಜಿಲ್ಲೆಗಳನ್ನು ಕೂಡ ಲಾಕ್ಡೌನ್ ಮಾಡಿವ ವಿಚಾರವಾಗಿ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಮಾತನಾಡಿರುವ ಉಡುಪಿ ಶಾಸಕ ರಘುಪತಿ ಭಟ್ ಜಿಲ್ಲೆಗೆ ಸದ್ಯ ಲಾಕ್ಡೌನ್...

ಶಿವಮೊಗ್ಗದಲ್ಲಿಯೂ ಲಾಕ್ ಡೌನ್ ಗೆ ಚಿಂತನೆ – ಸಚಿವ ಕೆ.ಎಸ್. ಈಶ್ವರಪ್ಪ

ಶಿವಮೊಗ್ಗ : ಇನ್ನು ಶಿವಮೊಗ್ಗದಲ್ಲಿ ಕೊರೋನಾ ಸೋಂಕಿತರು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಲಾಕ್ ಡೌನ್ ಮಾಡುವ ಬಗ್ಗೆ ಕೂಗು ಕೇಳಿ ಬರುತ್ತಿದೆ. ಸಾರ್ವಜನಿಕರಿಂದಲೇ, ಲಾಕ್ ಡೌನ್ ಮಾಡಿದರೆ ಒಳ್ಳೆಯದಪ್ಪಾ ಎಂಬ ಪ್ರತಿಕ್ರಿಯೇ ಕೇಳಿ ಬರ್ತಿದೆ. ಬೆಂಗಳೂರು...

ಚಾಮುಂಡಿ ವರ್ಧಂತಿ ಉತ್ಸವ…ಯದುವೀರ್ ದಂಪತಿ ಭಾಗಿ…

ಮೈಸೂರು : ಇಂದು ನಾಡದೇವಿ ಚಾಮುಂಡೇಶ್ವರಿ ವರ್ಧಂತಿ ಹಿನ್ನಲೆ ಚಾಮುಂಡಿ ಬೆಟ್ಟದಲ್ಲಿ ಸಾಂಪ್ರದಾಯಿಕವಾಗಿ ಅಧಿದೇವತೆಯ ಉತ್ಸವ ನೆರವೇರಿತು.ಕೊರೊನಾ ಹರಡುವಿಕೆ ನಿಯಂತ್ರಿಸುವ ದೃಷ್ಟಿಯಿಂದ ಅದ್ದೂರಿ ಆಚರಣೆಗೆ ಜಿಲ್ಲಾಡಳಿತ ಬ್ರೇಕ್ ಹಾಕಿದ್ದು ಇಂದಿನ ಆಚರಣೆ ಕೇವಲ...

Recent Comments