ರಾಜ್ಯದಲ್ಲಿ 1500 ರ ಗಡಿ ದಾಟಿದ ಸೋಂಕಿತರ ಸಂಖ್ಯೆ  : ಇಂದು ಮತ್ತೆ 116 ಜನರಲ್ಲಿ ಕೊರೋನಾ ಪಾಸಿಟಿವ್

0
594

ಬೆಂಗಳೂರು: ರಾಜ್ಯದಲ್ಲಿ ಇಂದು ಮತ್ತೆ 116 ಜನರಲ್ಲಿ ಸೋಂಕು ಪತ್ತೆಯಾಗಿದ್ದು, ಈ ಮೂಲಕ ರಾಜ್ಯದಲ್ಲಿ  ಸೋಂಕಿತರ ಸಂಖ್ಯೆ 1500 ರ ಗಡಿದಾಟಿದೆ. ಇನ್ನು ಈವರೆಗೆ ಸೋಂಕಿನಿಂದ 41 ಜನ ಮೃತಪಟ್ಟಿದ್ದಾರೆ.

ಇಂದು ರಾಜ್ಯದಲ್ಲಿ ಪತ್ತೆಯಾದ ಸೋಂಕಿತರಲ್ಲಿ  ಮಹಾರಾಷ್ಟ್ರ ದ ಮುಂಬೈ, ದುಬೈ ಪ್ರಯಾಣ ಬೆಳೆಸಿದವರೇ ಹೆಚ್ಚಾಗಿದ್ದಾರೆ. ಇಂದು ಉಡುಪಿ ಒಂದರಲ್ಲೇ 25 ಜನ ಸೋಂಕಿತರು ಪತ್ತೆಯಾಗಿದ್ದಾರೆ. ಅದರಲ್ಲಿ ಹೆಚ್ಚಿನವರು ಮಹಾರಾಷ್ಟ್ರದ ಪ್ರಮುಖ ನಗರಗಳಿಗೆ ತೆರಳಿದವರಾಗಿದ್ದು, ಥಾಣೆಗೆ ಪ್ರಯಾಣ ಬೆಳೆಸಿದವರು 4, ಪಲ್​ಘರ್ 1, ಮಲ್ಲಚಾಂದಿವಲ್ಲಿ 1, ಸಾಯಿಲ್ 1, ಪುಣೆ 2, ಮುಂಬೈ ಔರಂಗಬಾದ್ 1, ಮುಂಬೈಗೆ 11 ಜನ ಪ್ರಯಾಣ ಬೆಳೆಸಿದ್ದಾರೆ. ಇನ್ನುಳಿದಂತೆ ತೆಲಂಗಾಣಕ್ಕೆ ತೆರಳಿದವರು 2, ಹೈದರಾಬಾದ್ ತೆಲಂಗಾಣ 1, ಕೇರಳಕ್ಕೆ ಹೋಗಿ ಬಂದವರಲ್ಲಿ ಒಬ್ಬರಲ್ಲಿ ಸೋಂಕು ದೃಢಪಟ್ಟಿದೆ.

ಮಂಡ್ಯದಲ್ಲಿ 14 ಜನರಲ್ಲಿ ಸೋಂಕು ದೃಢಪಟ್ಟಿದ್ದು, ಅದರಲ್ಲಿ 10 ಮಂದಿ ಸೋಂಕಿತರು ಮಹಾರಾಷ್ಟದ ಮುಂಬೈಗೆ ಹೋಗಿಬಂದವರೇ ಆಗಿದ್ದಾರೆ. ಇನ್ನುಳಿದಂತೆ ಪೇಷೆಂಟ್ ನಂಬರ್ 869 ರ ವ್ಯಕ್ತಿಯ ಸಂಪರ್ಕದಿಂದ ಮೂವರಲ್ಲಿ ಸೋಂಕು ದೃಢಪಟ್ಟಿದೆ. ಇನ್ನೊಬ್ಬ ಸೋಂಕಿತನಿಗೆ ಸೋಂಕು ಹರಡಿವ ಮೂಲ ಇನ್ನೂ ಪತ್ತೆಯಾಗಿಲ್ಲ.

ಬೆಂಗಳೂರಲ್ಲಿ ಇಂದು 7 ಜನರಲ್ಲಿ ಸೋಂಕು ದೃಢಪಟ್ಟಿದ್ದು, ಪೇಷೆಂಟ್ 1208 ರ ಸಂಪರ್ಕದಿಂದ ಇಬ್ಬರಲ್ಲಿ ಸೋಂಕು ಪತ್ತೆಯಾಗಿದೆ. 60 ವರ್ಷದ ಪುರುಷನಲ್ಲಿ ಸೋಂಕು ಪತ್ತೆಯಾಗಿದ್ದು, ಸೋಂಕಿನ ಮೂಲ ಪತ್ತೆಯಾಗಿಲ್ಲ. ಪೇಷೆಂಟ್ 738 ರ ಸೋಂಕಿತನಿಂದ ಇಬ್ಬರಿಗೆ ಹಾಗೂ ಇನ್ನಿಬ್ಬರಿಗೆ ಪೇಷೆಂಟ್ 707 ರ ವ್ಯಕ್ತಿಯಿಂದ ಸೋಂಕು ಬಂದಿರುತ್ತದೆ.

ಹಾಸನದಲ್ಲಿ 13 ಜನರಲ್ಲಿ ಸೋಂಕು ಪತ್ತೆಯಾಗಿದ್ದು, ಇವರೆಲ್ಲರೂ ಮಹಾರಾಷ್ಟ್ರಕ್ಕೆ ಪ್ರಯಾಣ ಬೆಳೆಸಿದವರಾಗಿದ್ದಾರೆ.

ದಕ್ಷಿಣ ಕನ್ನಡದಲ್ಲಿ ಇಂದು 6 ಜನರಲ್ಲಿ ಸೋಂಕು ಪತ್ತೆಯಾಗಿದ್ದು, ಈ ಆರೂ ಮಂದಿ ಸೋಂಕಿತರು ಯುಎಇ ಗೆ ಪ್ರಯಾಣ ಬೆಳೆಸಿದವರಾಗಿದ್ದಾರೆ.

ಬಳ್ಳಾರಿಯಲ್ಲಿ 8 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಮುಂಬೈ ಪ್ರಯಾಣ ಬೆಳೆಸಿದವರೇ ಆಗಿದ್ದಾರೆ.

ಶಿವಮೊಗ್ಗದಲ್ಲಿ 6 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಅದರಲ್ಲಿ ಒಬ್ಬರಿಗೆ ತೀವ್ರ ಉಸಿರಾಟ ಸಮಸ್ಯೆ ಕಾಣಿಸಿಕೊಂಡಿದ್ದು, ಸೋಂಕು ದೃಢಪಟ್ಟಿದೆ. ಇನ್ನುಳಿದಂತೆ ಐವರು ಅಂತರಾಜ್ಯ ತಮಿಳುನಾಡಿಗೆ ಪ್ರಯಾಣ ಬೆಳೆಸಿದವರಾಗಿದ್ದಾರೆ.

ಉತ್ತರ ಕನ್ನಡದಲ್ಲಿ  9 ಜನರಲ್ಲಿ ಸೋಂಕು ಪತ್ತೆಯಾಗಿದ್ದು, ಮುಂಬೈಗೆ ಪ್ರಯಾಣ ಬೆಳೆಸಿದವರಾಗಿದ್ದಾರೆ.
ಧಾರವಾಡದಲ್ಲಿ 5 ಜನರಲ್ಲಿ  3 ಜನ ಮುಂಬೈಗೆ ಹಾಗೂ ಇಬ್ಬರು ತೆಲಂಗಾಣಕ್ಕೆ ತೆರಳಿದವರು ಆಗಿದ್ದಾರೆ.

ಬೆಳಗಾವಿಯಲ್ಲಿ 9 ಜನರಲ್ಲಿ ಸೋಂಕು ಪತ್ತೆಯಾಗಿದ್ದು, ಅದರಲ್ಲಿ ಮೂವರು ಜಾರ್ಖಾಂಡ್​ಗೆ ತೆರಳಿದವರು ಆಗಿದ್ದಾರೆ. ಇನ್ನುಳಿದಂತೆ ಅಜ್ಮೀರ್​ಗೆ ಇಬ್ಬರು ಹಾಗೂ ಮುಂಬೈಗೆ ಇಬ್ಬರು ಹೋಗಿ ಬಂದಿದ್ದಾರೆ. ಇನ್ನಿಬ್ಬರಲ್ಲಿ ಒಬ್ಬ ಮಹಾರಾಷ್ಟ್ರದಲ ಕೊಲ್ಹಾಪುರಕ್ಕೆ ಹೋಗಿಬಂದಿದ್ದು ಇನ್ನೊಬ್ಬ ಸೋಂಕಿತನಿಗೆ ಪೇಷೆಂಟ್ 721 ರ ಸಂಪರ್ಕದಿಂದ ಸೋಂಕು ಹರಡಿದೆ.

ಇನ್ನುಳಿದಂತೆ ಚಿಕ್ಕಬಳ್ಳಾಪುರದಲ್ಲಿ  ಪತ್ತೆಯಾದ ಇಬ್ಬರು ಸೋಂಕಿತರಿಗೂ ಪೇಷೆಂಟ್ 790 ರ ವ್ಯಕ್ತಿ ಒಬ್ಬನಿಂದಲೇ ಸೋಂಕು ಹರಡಿದೆ. ಗದಗದಲ್ಲಿ ಇಬ್ಬರಲ್ಲಿ ಸೋಂಕು ದೃಢಪಟ್ಟಿದ್ದು, ಒಬ್ಬರು ಮುಂಬೈ ಹಾಗೂ ಇನ್ನೊಬ್ಬರು ಛತ್ತೀಸ್​ಘಡ್​ಗೆ ಪ್ರಯಾಣ ಬೆಳೆಸಿದ್ರು ಎಂದು ತಿಳಿದುಬಂದಿದೆ. ದಾವಣಗೆರೆಯಲ್ಲಿ  ಪೇಷೆಂಟ್ ನಂಬರ್ 634 ಸಂಪರ್ಕದಿಂದ ಒಬ್ಬರು, ಪೇಷೆಂಟ್  667ರಿಂದ ಒಬ್ಬರು, ಹಾಗೂ ದಾವಣಗೆರೆಯ ಕಂಟೈನ್ಮೆಂಟ್ ಝೋನ್​ಗೆ ತೆರಳಿದ್ದರಿಂದ ಒಬ್ಬರಿಗೆ ಸೊಂಕು ಹರಡಿದ್ದು, ಇಮದು ಒಟ್ಟ ಮೂವರಲ್ಲಿ ಸೋಂಕು ದೃಢಪಟ್ಟಿದೆ. ಇನ್ನುಳಿದಂತೆ ವಿಜಯಪುರ, ತುಮಕೂರು, ಹಾಗೂ ಮೈಸೂರಲ್ಲಿ ತಲಾ ಒಬ್ಬರಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಈ ಮೂವರು ಮುಂಬೈಗೆ ಹೋಗಿ ಬಂದವರಾಗಿದ್ದಾರೆ

 

LEAVE A REPLY

Please enter your comment!
Please enter your name here