Home ದೇಶ-ವಿದೇಶ ದೇಶದಲ್ಲಿ ಒಂದೇ ದಿನ 1,543 ಜನರಲ್ಲಿ ಸೋಂಕು ಪತ್ತೆ : ಸೋಂಕಿತರ ಸಂಖ್ಯೆ 29,435 ಕ್ಕೆ ...

ದೇಶದಲ್ಲಿ ಒಂದೇ ದಿನ 1,543 ಜನರಲ್ಲಿ ಸೋಂಕು ಪತ್ತೆ : ಸೋಂಕಿತರ ಸಂಖ್ಯೆ 29,435 ಕ್ಕೆ  ಏರಿಕೆ

ನವದೆಹಲಿ: ದೇಶದಲ್ಲಿ ಮಹಾಮಾರಿ ಕೊರೋನಾ ಅಟ್ಟಹಾಸ ಮೆರೆಯುತ್ತಲೇ ಇದ್ದು, ದಿನದಿಂದ ದಿನಕ್ಕೆ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಒಂದೇ ದಿನದಲ್ಲಿ 1,543 ಜನರಲ್ಲಿ ಸೋಂಕು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 29,435 ಕ್ಕೆ ಏರಿಕೆಯಾಗಿದೆ. ಇನ್ನು 62 ಮಂದಿ ಸಾವನ್ನಪ್ಪಿದ್ದು,  ದೇಶದಲ್ಲಿ ಈವರೆಗೆ 934 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ.

ದೇಶದಲ್ಲಿ ಸೋಂಕಿತರ ಪಟ್ಟಿಯಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದೆ. ಇಲ್ಲಿ ಒಂದೇ ದಿನದಲ್ಲಿ 522 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, ಈವರೆಗೆ ಒಟ್ಟು 8,590 ಜನರಲ್ಲಿ ಸೋಂಕು ದೃಢಪಟ್ಟಿದೆ. 24 ಗಂಟೆಯಲ್ಲಿ 27 ಜನ ಸೋಂಕಿತರು ಸಾವನ್ನಪ್ಪಿದ್ದು, ಒಟ್ಟು 369 ಮಂದಿಯನ್ನು ಕಿಲ್ಲರ್ ಕೊರೋನಾ ಬಲಿ ಪಡೆದುಕೊಂಡಿದೆ. ಮಹಾರಾಷ್ಟ್ರದ ನಂತರದ ಸ್ಥಾನದಲ್ಲಿ ಗುಜರಾತ್ ಇದೆ. ಗುಜಾರಾತ್​ನಲ್ಲಿ ಒಟ್ಟು 3,548 ಜನರಲ್ಲಿ ಸೋಂಕು ಪತ್ತೆಯಾಗಿದ್ದು, ನಿನ್ನೆ ಸಂಜೆಯಿಂದ ಇವತ್ತಿನವರೆಗೆ 247 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಸಾವನ್ನಪ್ಪಿದವರ ಸಂಖ್ಯೆ ನೂರರ ಗಡಿ ದಾಟಿ 162 ಕ್ಕೆ ಏರಿದೆ. ಮೂರನೇ ಸ್ಥಾನದಲ್ಲಿ ದೆಹಲಿ ಇದ್ದು, 3,108 ಪ್ರಕರಣಗಳು ಧೃಢಪಟ್ಟಿವೆ. 24 ಗಂಟೆಯಲ್ಲಿ 190 ಮಂದಿಗೆ ಸೋಂಕು ಹರಡಿದೆ. 54 ಮಂದಿ ಸಾವನ್ನಪ್ಪಿದ್ದಾರೆ.

ಇವೆಲ್ಲದರ ನಡುವೆ ಸೋಂಕಿನಿಂದ ಗುಣಮುಖರಾದವರ ಸಂಖ್ಯೆಯು ಹೆಚ್ಚಾಗುತ್ತಿದೆ. ಈವರೆಗೆ ದೇಶದಲ್ಲಿ ಒಟ್ಟು 6,869 ಜನ ಸೋಂಕಿನಿಂದ ಗುಣಮುಖರಾಗಿದ್ದಾರೆ.

LEAVE A REPLY

Please enter your comment!
Please enter your name here

- Advertisment -

Most Popular

ಶಿವಮೊಗ್ಗದಲ್ಲಿಯೂ ಲಾಕ್ ಡೌನ್ ಗೆ ಚಿಂತನೆ – ಸಚಿವ ಕೆ.ಎಸ್. ಈಶ್ವರಪ್ಪ

ಶಿವಮೊಗ್ಗ : ಇನ್ನು ಶಿವಮೊಗ್ಗದಲ್ಲಿ ಕೊರೋನಾ ಸೋಂಕಿತರು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಲಾಕ್ ಡೌನ್ ಮಾಡುವ ಬಗ್ಗೆ ಕೂಗು ಕೇಳಿ ಬರುತ್ತಿದೆ. ಸಾರ್ವಜನಿಕರಿಂದಲೇ, ಲಾಕ್ ಡೌನ್ ಮಾಡಿದರೆ ಒಳ್ಳೆಯದಪ್ಪಾ ಎಂಬ ಪ್ರತಿಕ್ರಿಯೇ ಕೇಳಿ ಬರ್ತಿದೆ. ಬೆಂಗಳೂರು...

ಚಾಮುಂಡಿ ವರ್ಧಂತಿ ಉತ್ಸವ…ಯದುವೀರ್ ದಂಪತಿ ಭಾಗಿ…

ಮೈಸೂರು : ಇಂದು ನಾಡದೇವಿ ಚಾಮುಂಡೇಶ್ವರಿ ವರ್ಧಂತಿ ಹಿನ್ನಲೆ ಚಾಮುಂಡಿ ಬೆಟ್ಟದಲ್ಲಿ ಸಾಂಪ್ರದಾಯಿಕವಾಗಿ ಅಧಿದೇವತೆಯ ಉತ್ಸವ ನೆರವೇರಿತು.ಕೊರೊನಾ ಹರಡುವಿಕೆ ನಿಯಂತ್ರಿಸುವ ದೃಷ್ಟಿಯಿಂದ ಅದ್ದೂರಿ ಆಚರಣೆಗೆ ಜಿಲ್ಲಾಡಳಿತ ಬ್ರೇಕ್ ಹಾಕಿದ್ದು ಇಂದಿನ ಆಚರಣೆ ಕೇವಲ...

ಸ್ಮಶಾನದಲ್ಲಿ ಶವ ಸಂಸ್ಕಾರ | ಸ್ಮಶಾನವನ್ನೇ ಸೀಲ್ ಡೌನ್ ಮಾಡಿದ ಬಡಾವಣೆ ಜನತೆ

ವಿಜಯಪುರ : ಕೊರೋನಾದಿಂದ ಮೃತರಾದ ದೇಹವನ್ನು ಹೂತು ಹಾಕಿದ್ದಾರೆ ಎಂದು ಸ್ಮಶಾನದ ಸುತ್ತಮುತ್ತಲಿನ ನಿವಾಸಿಗಳು ಸ್ಮಶಾನವನ್ನೇ ಸೀಲ್ ಡೌನ್ ಮಾಡಿರುವ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ. ನಗರದ ಚಾಲುಕ್ಯ ನಗರದಲ್ಲಿರುವ ಸಿದ್ಧೇಶ್ವರ ಸಂಸ್ಥೆಯ...

ಬೆಂಗಳೂರು ಖಾಲಿ ಮಾಡಿ ಊರುಗಳತ್ತ ಪ್ರಯಾಣ ಬೆಳೆಸಿದ ಜನ..!

ಬೆಂಗಳೂರು :  ದಿನೇದಿನೆ ಕೊರೋನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆ ನಾಳೆ ರಾತ್ರಿ 8ರಿಂದ ಲಾಕ್​ಡೌನ್ ಜಾರಿಮಾಡಲಾಗಿದೆ. ಇನ್ನು ಇಲ್ಲಿ ಜೀವನ ಮಾಡೋದು ತುಂಬಾ ಕಷ್ಟ ಎಂದು  ಹೆದರಿದ ಜನ ಸಾಗರೋಪಾದಿಯಲ್ಲಿ ಸ್ವಗ್ರಾಮಗಳತ್ತ ಹೊರಟಿದ್ದಾರೆ....

Recent Comments