ರಾಜ್ಯದಲ್ಲಿ ಅಟ್ಟಹಾಸ ಮೆರೆಯುತ್ತಿದೆ ಕಿಲ್ಲರ್ ಕೊರೋನಾ : ಇಂದು ಒಂದೇ ದಿನ 45 ಜನರಲ್ಲಿ ಸೋಂಕು ದೃಢ

0
576

ಬೆಂಗಳೂರು: ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಗರಿಷ್ಠ ಮಟ್ಟದಲ್ಲಿ ಏರಿಕೆಯಾಗಿದ್ದು, ಇಂದು ಒಂದೇ ದಿನ 45 ಜನರಿಗೆ ಸೋಂಕು ಹರಡಿದೆ. ಈ ಮೂಲಕ ಸೋಂಕಿತರ ಸಂಖ್ಯೆ 750 ಕ್ಕೇರಿಕೆಯಾಗಿದೆ. ಈವರೆಗೆ 30 ಜನ ಸೋಂಕಿನಿಂದ ಸಾವನ್ನಪ್ಪಿದ್ದು, 371 ಜನ ಸೋಂಕಿತರು ಗುಣಮುಖರಾಗಿದ್ದಾರೆ.

ದಾವಣಗೆರೆಯಲ್ಲಿ 14 ಕೊರೋನಾ ಪ್ರಕರಣಗಳು ಪತ್ತೆಯಾಗಿದೆ. ಬೆಳಗಾವಿಯಲ್ಲಿ 11 ಪ್ರಕರಣಗಳು , ಬೆಂಗಳೂರಲ್ಲಿ  7 ಕೇಸ್​ಗಳು, ಬಳ್ಳಾರಿ 1 ಪ್ರಕರಣ ಹಾಗೂ ಉತ್ತರ ಕನ್ನಡದ ಭಟ್ಕಳದಲ್ಲಿ 12 ಕೇಸ್​ಗಳು ಪತ್ತೆಯಾಗಿದೆ.

ಬೆಂಗಳೂರಿನಲ್ಲಿ ಇಂದು ಒಟ್ಟು 7 ಜನರಲ್ಲಿ ಸೋಂಕು ಪತ್ತೆಯಾಗಿದ್ದು, ಅದರಲ್ಲಿ 23 ವರ್ಷದ ಪುರುಷ, 35 ವರ್ಷದ ಮಹಿಳೆ ಹಾಗೂ 34 ವರ್ಷದ ಮಹಿಳೆಯಲ್ಲಿ ಸೋಂಕು ಪತ್ತೆಯಾಗಿದ್ದು, ಸೋಂಕಿನ ಮೂಲ ಪತ್ತೆಯಾಗಿಲ್ಲ. ಇನ್ನುಳಿದ ನಾಲ್ಕು ಜನರಿಗೂ ಒಬ್ಬ ಸೋಂಕಿತನಿಂದಲೇ ಸೋಂಕು ಹರಡಿರುತ್ತದೆ. 22 ವರ್ಷದ ಯುವಕ, 19 ವರ್ಷದ ಯುವಕ, 40 ವರ್ಷದ ಪುರುಷ ಹಾಗೂ 25 ವರ್ಷದ ಪುರುಷನಲ್ಲಿ ಸೋಂಕು ಪತ್ತೆಯಾಗಿದೆ.

ದಾವಣಗೆರೆಯಲ್ಲಿ  ಪೇಷೆಂಟ್ ನಂ. 556 ವ್ಯಕ್ತಿಯಿಂದ 4 ಜನರಿಗೆ ಸೋಂಕು ಹರಡಿದ್ದು, 10 ವರ್ಷದ ಬಾಲಕ, 20 ವರ್ಷದ ಯುವಕ, 18 ವರ್ಷದ ಯುವತಿ ಹಾಗೂ 27 ವರ್ಷದ ಮಹಿಳೆಗೆ ಸೋಂಕು ಬಂದಿರುತ್ತದೆ. ಇನ್ನು ಪೇಷೆಂಟ್ 533 ರ  ವ್ಯಕ್ತಿಯಿಂದ 18 ವರ್ಷದ ಯುವತಿ, 6  ವರ್ಷದ ಬಾಲಕ, 9 ವರ್ಷದ ಬಾಲಕ, 36 ವರ್ಷದ ಪುರುಷ, 32 ವರ್ಷದ ಮಹಿಳೆ, 3 ವರ್ಷದ ಹೆಣ್ಣು ಮಗು, 48 ವರ್ಷದ ಪುರುಷ, 13 ವರ್ಷದ ಹೆಣ್ಣು, 8 ವರ್ಷದ ಬಾಲಕ ಹಾಗೂ 38 ವರ್ಷದ ಮಹಿಳೆಗೆ ಸೊಂಕು ತಗುಲಿರುತ್ತದೆ.

ಉತ್ತರ ಕನ್ನಡದ ಭಟ್ಕಳದಲ್ಲಿ 12 ಜನರಲ್ಲಿ ಸೋಂಕು ಪತ್ತೆಯಾಗಿದ್ದು, ಅದರಲ್ಲಿ 25 ವರ್ಷದ ಮಹಿಳೆ, 18 ವರ್ಷದ ಯುವತಿ, 11 ವರ್ಷದ ಬಾಲಕಿ,  39 ವರ್ಷದ ಮಹಿಳೆ, 33 ವರ್ಷದ ಪುರುಷ, 75 ವರ್ಷದ ಮಹಿಳೆ, 12 ವರ್ಷದ ಬಾಲಕಿ, 83 ವರ್ಷದ ವೃದ್ಧ, 5 ತಿಂಗಳಿನ ಹೆಣ್ಣು ಮಗು, ಮೂರು ವರ್ಷದ ಹೆಣ್ಣು ಮಗು, 60 ವರ್ಷದ ಪುರುಷ ಹಾಗೂ 22 ವರ್ಷದ ಯುವತಿಗೆ ಪೇಷೆಂಟ್ 659 ವ್ಯಕ್ತಿ ಒಬ್ಬನಿಂದಲೇ ಸೋಂಕು ಹರಡಿದೆ.

ಇನ್ನು ಬೆಳಗಾವಿಯಲ್ಲಿ  58 ವರ್ಷದ ಪುರುಷನಿಗೆ ಪೇಷೆಂಟ್ ನಂ. 485 ಹಾಗೂ 483 ಸಂಪರ್ಕದಿಂದ ಸೋಂಕು ಬಂದಿರುತ್ತದೆ. ಪೇಷೆಂಟ್ ನಂ. 552 ವ್ಯಕ್ತಿಯ ಸಂಪರ್ಕದಿಂದ 30 ವರ್ಷದ ಮಹಿಳೆ ಹಾಗೂ 16 ವರ್ಷದ ಬಾಲಕಿಗೆ  ಸೋಂಕು ಹರಡಿದೆ. 20 ವರ್ಷದ ಯುವಕನಿಗೆ  ಪೇಷೆಂಟ್ ನಂ. 485 ಹಾಗೂ 496 ವ್ಯಕ್ತಿಯಿಂದ ಸೋಂಕು ಬಂದಿದೆ. ಇನ್ನು ಪೇಷೆಂಟ್ 547 ರ ಸಂಪರ್ಕದಿಂದ 21 ವರ್ಷದ ಯುವತಿ, 45 ವರ್ಷದ ಪುರುಷ , 26 ವರ್ಷದ ಪುರುಷ, 20 ವರ್ಷದ ಬಾಲಕಿಗೆ ಸೋಂಕು ಹರಡಿರುತ್ತದೆ. ಇನ್ನು ಪೇಷೆಂಟ್ 548 ವ್ಯಕ್ತಿಯಿಂದ 38 ವರ್ಷದ ಮಹಿಳೆಗೆ ಸೋಂಕು ತಗುಲಿರುತ್ತದೆ. 23 ವರ್ಷದ ಯುವಕನಿಗೆ ಪೇಷೆಂಟ್ ನಂ.539 ಹಾಗೂ ಪೇಷೆಮಟ್ 552 ರ ವ್ಯಕ್ತಿಯ ಸಂಪರ್ಕದಿಂದ ಸೋಂಕು ತಗುಲಿದೆ.20 ವರ್ಷದ ಬಾಲಕನಿಗೆ ಪೇಷೆಮಟ್ 575 ರ ಸೋಂಕಿತನಿಂದ ಕೊರೋನಾ ಬಂದಿದೆ.

ಬಳ್ಳಾರಿಯಲ್ಲಿ 37 ವರ್ಷದ ಮಹಿಳೆಯಲ್ಲಿ ಸೊಂಕು ಪತ್ತೆಯಾಗಿದ್ದು, ಸೋಂಕಿತೆ ಮಹಿಳೆಗೆ ಸೋಂಕು ಹರಡಿದ ಮೂಲ ಇನ್ನೂ ಪತ್ತೆಯಾಗಿಲ್ಲ.

LEAVE A REPLY

Please enter your comment!
Please enter your name here