Home ಸಿನಿ ಪವರ್ 'ಸಂತಸವಾಗಿರಲು ಮಸೀದಿ, ಮಂದಿರ ಬೇಕಿಲ್ಲ ಅಂತ ಎಲ್ಲರೂ ತಿಳಿಯಬೇಕು' : ರಮ್ಯಾ ಮಾತಿನ ಗುಟ್ಟೇನು?

‘ಸಂತಸವಾಗಿರಲು ಮಸೀದಿ, ಮಂದಿರ ಬೇಕಿಲ್ಲ ಅಂತ ಎಲ್ಲರೂ ತಿಳಿಯಬೇಕು’ : ರಮ್ಯಾ ಮಾತಿನ ಗುಟ್ಟೇನು?

ರೀಸೆಂಟ್​ ಆಗಿ ಸೋಶಿಯಲ್​ ಮೀಡಿಯಾಗೆ  ರೀ ಎಂಟ್ರಿ ಕೊಟ್ಟಿದ್ದ ರಮ್ಯಾ ಅಭಿಮಾನಿಗಳಿಗೆ ಶಾಕ್ ಮೇಲೆ ಶಾಕ್ ಕೊಡ್ತಿದ್ದಾರೆ. ಇವತ್ತು ರಮ್ಯಾ ಕೊಟ್ಟಿರೋ  ಶಾಕ್ ನಿಂದ ಫ್ಯಾನ್ಸ್ ಫುಲ್ ಕನ್ಫ್ಯೂಸ್ ಆಗಿದ್ದಾರೆ.

ಕಾಂಗ್ರೆಸ್ ಪಕ್ಷದಿಂದ ಸಂಸದೆಯಾಗಿದ್ದ ರಮ್ಯಾ ಕಾಂಗ್ರೆಸ್ ಐಟಿ ಸೆಲ್ ಹಾಗು ಸೋಶಿಯಲ್ ಮೀಡಿಯಾದ ಅಧ್ಯಕ್ಷೆ ಕೂಡಾ ಆಗಿದ್ರು. ಆದ್ರೆ ಕಳೆದ ಅಕ್ಟೋಬರ್ ನಲ್ಲಿ ಆ ಸ್ಥಾನದಿಂದ ರಮ್ಯಾ ಅವರನ್ನ ಕೆಳಗೆ ಇಳಿಸಲಾಗಿತ್ತು. ಈ ಘಟನೆ ರಮ್ಯಾ ಅವರ ಮನಸ್ಸನ್ನ ತೀವ್ರ ಘಾಸಿಗೊಳಿಸಿತ್ತು. ಆ ಕಾರಣಕ್ಕೆ ಯಾರ ಸಹವಾಸವು ಬೇಡ ಎಂದು ಸೋಶಿಯಲ್ ಮೀಡಿಯಾದಿಂದಲೂ ದೂರ ಉಳಿದಿದ್ರು .ಹಾಗೆ ಕಾಂಗ್ರೆಸ್ ಪಕ್ಷದ ಸಹವಾಸ ಸಾಕು , ಈ ರಾಜಕೀಯ ಕೂಡಾ ನನಗೆ ಬೇಡ ಅನ್ನೋ ನಿರ್ಧಾರಕ್ಕೆ ರಮ್ಯಾ ಬಂದಿದ್ದಾರೆ ಅನ್ನೋ ಮಾತುಗಳು ಕೇಳಿ ಬರುತ್ತಿವೆ.

ಇವೆಲ್ಲ ಅಂಶಗಳ ನಡುವೆ ಇಂದು ರಮ್ಯಾ ಸೋಶಿಯಲ್ ಮೀಡಿಯಾ ಓಪನ್ ಮಾಡಿದವರಿಗೆ ಒಂದು ಶಾಕ್ ಕಾದಿತ್ತು , ಯಾಕಂದ್ರೆ ರಮ್ಯಾ ಹಾಕಿದ್ದ  ಆ ಒಂದು ಪೋಸ್ಟ್ ನಾನಾ ಅರ್ಥಗಳನ್ನ ಕೊಡುತಿತ್ತು. ಅಷ್ಟಕ್ಕೂ ಆ ಪೋಸ್ಟ್ ನಲ್ಲಿ ರಮ್ಯಾ ಬರೆದು ಕೊಂಡಿದ್ದು ಏನು? ಗೊತ್ತಾ ?

ರಾಜಕೀಯದ ಬಲಿಪಶುವಾಗಬೇಡಿ. ಅಧಿಕಾರ ಮತ್ತು ನಿಯಂತ್ರಣದಾಹಕ್ಕಾಗಿ ಸೃಷ್ಟಿಯಾಗುವ ಅಸ್ತಿತ್ವದ ಬಿಕ್ಕಟ್ಟಿಗೆ ಬಲಿಯಾಗದಿರಿ. ಪ್ರಶ್ನಿಸಿ, ಪರಾಮರ್ಶಿಸಿ, ಮತ್ತು ಇದೆಲ್ಲವನ್ನು ಮೀರಿ ಬೆಳೆಯಿರಿ.ರಾಮ ಮಂದಿರ ನಿರ್ಮಾಣದಿಂದಾಗಿ ಹಿಂದೂಗಳು ಸಂತೋಷವಾಗಿರೋದು ನನಗೆ ಖುಷಿತಂದಿದೆ. ಮಸೀದಿ ನಿರ್ಮಾಣದಿಂದ ಮುಸಲ್ಮಾನರು ಸಂತೋಷಪಟ್ಟಾಗಲೂ ನನಗೆ ಖುಷಿಯಾಗುತ್ತೆ. ಆದ್ರೆ, ಸಂತೋಷವಾಗಿರಲು ಮಂದಿರ ಅಥವಾ ಮಸೀದಿ ನಿರ್ಮಾಣದ ಅಗತ್ಯವಿಲ್ಲ ಎಂದು ಅವರು ಅರಿತಾಗ ನನಗೆ ಮತ್ತಷ್ಟು ಖುಷಿಯಾಗುತ್ತೆ. ನಿಜವಾದ ಸಂತೋಷ ಅಡಗಿರೋದು ಒಗ್ಗಟ್ಟಿನಲ್ಲಿ, ಏಕತೆಯಲ್ಲಿ  ಮತ್ತು ಜೊತೆಯಾಗಿರೊದ್ರಲ್ಲಿ. ತೋರಿಕೆಯನ್ನು ಬಿಟ್ಟು ಅಂತರಾತ್ಮದ ಕಡೆಗೆ ನೋಡಿ. ಅಲ್ಲಿ ನಿಮ್ಮ ನಿಜವಾದ ಭಗವಂತ ಇದ್ದಾನೆ ಮತ್ತು ನಿಮ್ಮನ್ನು ನೀವು ಕಾಣುವಿರಿ’’!

ಹೀಗೆ ಮಾರ್ಮಿಕವಾಗಿ ಮತ್ತು ಫಿಲಾಸಫಿಕಲ್ ಆಗಿ ರಮ್ಯಾ ಬದಲಾಗಿದ್ದು ನೋಡಿ ಅನೇಕರಿಗೆ ಶಾಕ್ ಆಗಿದೆ. ರಮ್ಯಾ ಚಿತ್ರರಂಗ,ರಾಜಕೀಯ ಬಿಟ್ಟು ಅಧ್ಯಾತ್ಮದತ್ತ ಒಲವು  ತೋರುತ್ತಿರೋದು ನೋಡಿದ್ರೆ ಅವರ ಅಭಿಮಾನಿಗಳು ಕೊಂಚ ಗಾಬರಿಯಾಗಿರೋದಂತು ನಿಜ. ಆದರೆ ನಿಜಕ್ಕೂ ರಮ್ಯಾ ಅಧ್ಯಾತ್ಮಕ್ಕೆ ಶರಣಾಗಿದ್ದಾರಾ ಅನ್ನೋದಕ್ಕೆ ಕಾಲವೇ ಉತ್ತರಿಸಬೇಕು.

ಈಗ ತಮ್ಮ ನೋವನ್ನ ಮರೆತಿರುವ ರಮ್ಯಾ ನಿಧಾನವಾಗಿ ಮೊದಲಿನಂತೆ ಸಾರ್ವಜನಿಕ ಜೀವನ ಆರಂಭಿಸುತ್ತಿದ್ದಾರೆ .ಆದಷ್ಟು ಬೇಗ ರಮ್ಯಾ ಮತ್ತೆ ಬಣ್ಣ ಹಚ್ಚಿ ಸಿನಿಮಾಗಳಲ್ಲಿ ನಟಿಸಲಿ ಅನ್ನೋದು ಅವರ ಅಭಿಮಾನಿಗಳ ಆಶಯವಾಗಿದೆ . ರಮ್ಯಾ ಅಭಿಮಾನಿಗಳ ಆಶಯವನ್ನ ಗಂಭಿರವಾಗಿ ಪರಿಗಣಿಸಿ, ಮತ್ತೆ ಬ್ಯಾಕ್ ಟು ಪೆವಿಲಿಯನ್ ಅಂತ ಚಿತ್ರರಂಗಕ್ಕೆ ಮುಖ ಮಾಡ್ತಾರಾ..? ಕಾದೇ ನೋಡೋಣ.

-ಮನೋಜ್​ ವಿಜಯೀಂದ್ರ

LEAVE A REPLY

Please enter your comment!
Please enter your name here

- Advertisment -

Most Popular

5 ವರ್ಷದ ಬಾಲಕಿ ಕಾಣೆ

ಬೆಂಗಳೂರು : ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ 5 ವರ್ಷದ ಬಾಲಕಿ ಕಾಣೆಯಾಗಿದ್ದಾಳೆ. ಲೋಕಿತ ಕೆ.ಮರನ್ ಕಾಣೆಯಾಗಿರುವ ಬಾಲಕಿ‌. ಈಕೆ ತನ್ನ ತಾತನ ಜೊತೆ ಸೆ.18 ರಂದು ಮನೆಯಿಂದ ತೆರಳಿದ್ದಳು. ಮೆಜೆಸ್ಟಿಕ್ ನಿಲ್ದಾಣದಲ್ಲಿ...

ಅಕ್ಕ ಗೌರಿ ಲಂಕೇಶ್​ರನ್ನು ನೆನೆದು ಕಣ್ಣೀರಿಟ್ಟ ಇಂದ್ರಜಿತ್ ಲಂಕೇಶ್..!

ಬೆಂಗಳೂರು : ಸ್ಯಾಂಡಲ್​​ವುಡ್​ ಡ್ರಗ್ಸ್​ ಮಾಫಿಯಾ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಸಿಸಿಬಿ ವಿಚಾರಣೆ ಎದುರಿಸಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಇಂದು ಮತ್ತೊಮ್ಮೆ ಸಿಸಿಬಿ ಅಧಿಕಾರಿಗಳ ಮುಂದೆ ಹಾಜರಾಗುತ್ತಿದ್ದಾರೆ.  ಇಂದು ಸಿಸಿಬಿ ವಿಚಾರಣೆಗೆ ಹೋಗುವ...

ಸ್ಯಾಂಡಲ್​​ವುಡ್​​​​​ನಲ್ಲಿ ಡ್ರಗ್​ ಮಾಫಿಯಾ : ಇಂದು ಸಿಸಿಬಿಯಿಂದ ನಟಿ ರಾಗಿಣಿ ವಿಚಾರಣೆ

ಬೆಂಗಳೂರು :  ಸ್ಯಾಂಡಲ್​​​​ವುಡ್​​ನಲ್ಲಿ ಡ್ರಗ್​​ ಮಾಫಿಯಾದ ಬಗ್ಗೆ ಬಿಸಿಬಿಸಿ ಚರ್ಚೆ ನಡೀತಾ ಇದೆ. ಚಂದನವನಕ್ಕೆ ಮಾದಕ ಜಾಲ ಹಬ್ಬಿದೆಯೇ ಅಥವಾ ಇಲ್ಲವೇ ಅನ್ನೋದು ಸದ್ಯದ ಗಾಂಧಿನಗರದ ಹಾಟ್ ಸುದ್ದಿ. ಇದಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ...

ಕೊರೋನಾದಿಂದ ಮಾಜಿ ಶಾಸಕ ಅಪ್ಪಾಜಿ ಗೌಡ ನಿಧನ

ಶಿವಮೊಗ್ಗ : ಭದ್ರಾವತಿಯ ಜೆಡಿಎಸ್ ನ ಮಾಜಿ ಶಾಸಕ ಅಪ್ಪಾಜಿಗೌಡ ವಿಧಿವಶರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಕೊರೋನಾ ಸೋಂಕಿಗೆ ಒಳಗಾಗಿದ್ದ ಅವರು,  ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಅಪ್ಪಾಜಿಗೌಡರಿಗೆ 69 ವರ್ಷ ವಯಸ್ಸಾಗಿತ್ತು. ಪತ್ನಿ...

Recent Comments