Sunday, May 29, 2022
Powertv Logo
Homeದೇಶಜೂನ್ 8 ರಿಂದ ಭಕ್ತರಿಗೆ ತಿರುಪತಿ ತಿಮ್ಮಪ್ಪನ ದರ್ಶನ ಭಾಗ್ಯ

ಜೂನ್ 8 ರಿಂದ ಭಕ್ತರಿಗೆ ತಿರುಪತಿ ತಿಮ್ಮಪ್ಪನ ದರ್ಶನ ಭಾಗ್ಯ

ಆಂಧ್ರಪ್ರದೇಶ: ದೇಶಾದ್ಯಂತ ಕೊರೋನಾ ಹಾವಳಿಯಿಂದ ಲಾಕ್​ಡೌನ್ ಆದೇಶ ಹೊರಡಿಸಿ ಎಲ್ಲಾ ಸೇವೆ ಸ್ಥಗಿತಗೊಳಿಸುವುದರೊಂದಿಗೆ ದೇವಸ್ಥಾನಗಳನ್ನು ಮುಚ್ಚಲಾಗಿತ್ತು. ಆದರೆ ಇದೀಗ ಲಾಕ್​ಡೌನ್ ಸಡಿಲಿಕೆ ಮಾಡಿದ್ದು, ಜೂನ್ 8 ರಿಂದ ಎಲ್ಲಾ ದೇವಾಸ್ಥಾನಗಳನ್ನು ತೆರೆಯಲು ಕೇಂದ್ರ ಸರ್ಕಾರ ಅವಕಾಶ ನೀಡಿದ್ದು, ಹೊಸ ನಿಯಮಗಳನ್ನು ಜಾರಿಗೊಳಿಸಿದೆ. ಈ ಮೂಲಕ ಇಷ್ಟು ದಿನ ದೇವರ ದರ್ಶನಕ್ಕೆ ಕಾಯುತ್ತಿದ್ದ ಭಕ್ತಾದಿಗಳಿಗೆ  ದೇವರ ದರ್ಶನದ ಭಾಗ್ಯ ದೊರೆಯುವಂತಾಗಿದೆ. .

ಕೇಂದ್ರ ಸರ್ಕಾರದ ಆದೇಶದಂತೆ ಮುಂದಿನ ಸೋಮವಾರದಿಂದ ತಿರುಪತಿ ದೇಗುಲವನ್ನು ಮತ್ತೆ ತೆರೆಯಲಿ ಟಿಟಿಡಿಗೆ ಆಂಧ್ರಪ್ರದೇಶ  ಸರ್ಕಾರ ಅನುಮತಿ ನೀಡಿದೆ. ಹಾಗಾಗಿ ಕೆಲವೊಂದು ನಿಯಮಗಳನ್ನು ಜಾರಿಗೊಳಿಸಿದ್ದು, ಭಕ್ತರು ನಿಲ್ಲುವ ಸಾಲಿನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಕೆಲವೊಂದು ಬದಲಾವಣೆಗಳನ್ನು ಮಾಡಲಾಗುತ್ತಿದೆ. ಅಲ್ಲದೆ ದೇವಾಸ್ಥಾನಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆಯಲ್ಲೂ ಮಿತಿಗೊಳಿಸಲು ನಿರ್ಧರಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಜೂ.5ರಿಂದ ಪ್ರಯೋಗಾತ್ಮಕವಾಗಿ ಸ್ಥಳೀಯ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತಿದ್ದು, ಈ ವೇಳೆ, ಭಕ್ತರು ಮತ್ತು ಟಿಟಿಡಿ ಅಧಿಕಾರಿಗಳಿಗೆ ಕೋವಿಡ್-19 ಮಾರ್ಗಸೂಚಿ ಅನುಸರಿಸುವ ನಿಟ್ಟಿನಲ್ಲಿ ತರಬೇತಿ ನೀಡಲಾಗುವುದು.

 

LEAVE A REPLY

Please enter your comment!
Please enter your name here

- Advertisment -

Most Popular

Recent Comments