Home P.Special ಗೌರಿ-ಗಣೇಶ ಪ್ರತಿಷ್ಠಾಪಿಸಿ , ಗಿಡ-ಮರ ಬೆಳೆಸಿ..! ಏನಿದು ಡಿಫ್ರೆಂಟ್ ಪರಿಸರ ಸ್ನೇಹಿ ಟಿಪ್ಸ್​?

ಗೌರಿ-ಗಣೇಶ ಪ್ರತಿಷ್ಠಾಪಿಸಿ , ಗಿಡ-ಮರ ಬೆಳೆಸಿ..! ಏನಿದು ಡಿಫ್ರೆಂಟ್ ಪರಿಸರ ಸ್ನೇಹಿ ಟಿಪ್ಸ್​?

ಮಂಡ್ಯ : ಪ್ರತಿ ವರ್ಷದಂತೆ ಈ ವರ್ಷವೂ ಗೌರಿ-ಗಣೇಶ ಹಬ್ಬವನ್ನ ಸಂಭ್ರಮದಿಂದ ಮಾಡಲು ಎಲ್ಲರೂ ಬಯಸಿರ್ತಾರೆ. ಆದ್ರೆ, ಈ ಬಾರಿಯ ಗೌರಿ-ಗಣೇಶ ಹಬ್ಬಕ್ಕೆ ಕೊರೋನಾ ಕಾರ್ಮೋಡ ಆವರಿಸಿಕೊಂಡಿದೆ. ಕೊರೋನಾ ಕರಿ ನೆರಳಲ್ಲಿ ಗೌರಿ-ಗಣೇಶ ಹಬ್ಬ ಮಾಡೋದು ಹೇಗೆ ಅಂತ ಚಿಂತೆ ಮಾಡ್ತಿರೋರಿಗೆ ಕೃಷಿ ಇಲಾಖೆ ಹಾಗೂ ಮಂಡ್ಯ ಜಿಲ್ಲಾಡಳಿತ ಒಂದು ಟಿಪ್ಸ್ ನೀಡಿದೆ.

ಗಣೇಶ ಚತುರ್ಥಿಗೆ ಮಂಡ್ಯ ಜಿಲ್ಲಾಡಳಿತದ ಟಿಪ್ಸ್ : ಇದೇ ತಿಂಗಳ 21 ಹಾಗೂ 22 ರಂದು ಗೌರಿ-ಗಣೇಶ ಹಬ್ಬವಿದೆ. ಪ್ರತಿ ವರ್ಷದಂತೆ ಈ ವರ್ಷವೂ ಗೌರಿ ಗಣೇಶ ಹಬ್ಬವನ್ನ ಸಂಭ್ರಮದಿಂದ ಆಚರಿಸೋದಕ್ಕೆ ಜನ ನಿರ್ಧಾರ ಮಾಡಿದ್ರು. ಮಂಡ್ಯ ಜಿಲ್ಲಾಡಳಿತ, ಕೃಷಿ ಇಲಾಖೆ ಹಾಗೂ ವಿ.ಸಿ.ಫಾರಂ ವಲಯ ಕೃಷಿ ಸಂಶೋಧನಾ ಕೇಂದ್ರ ವಿನೂತನ ಟಿಪ್ಸ್ ನೀಡಿದೆ. 

ಕೊರೋನಾ ಹಾವಳಿ ಜೊತೆಗೆ ಪರಿಸರ ಉಳಿಸಿಕೊಳ್ಳಬೇಕಿರೋದು ಪ್ರತಿಯೊಬ್ಬರ ಕರ್ತವ್ಯ ಕೂಡ ಹೌದು. ದಿನೇ ದಿನೇ ಹದಗೆಡುತ್ತಿರುವ ಪರಿಸರ ಉಳಿಸಲು ಸರ್ಕಾರಗಳು ನಿರಂತರವಾಗಿ ಶ್ರಮಿಸುತ್ತಲೇ ಇವೆ. ಈ ನಡುವೆಯೂ ಪರಿಸರಕ್ಕೆ ಮಾರಕವಾದ ಗಣೇಶ ಮೂರ್ತಿಗಳ ತಯಾರಿಕೆ ಮತ್ತು ಪ್ರತಿಷ್ಠಾಪನೆ ನಡೆಯುತ್ತಲೇ ಇವೆ. ಅದನ್ನ ತಪ್ಪಿಸುವ ಉದ್ದೇಶದಿಂದ ಮಂಡ್ಯದ ವಿ.ಸಿ.ಫಾರಂನಲ್ಲಿರುವ ಆರಾಧ್ಯ ಆಗ್ರೋ ಫುಡ್ ಅಂಡ್ ಬೀವರೇಜ್​ನವರು ಜೇಡಿ ಮಣ್ಣಿನಿಂದ ಸಿದ್ಧಪಡಿಸಿರುವ ಪರಿಸರ ಸ್ನೇಹಿ ಗಣಪನನ್ನ ಜನರಿಗೆ ಪರಿಚಯಿಸಿದ್ದಾರೆ.

120 ರೂ.ಗೆ ಸಿಗಲಿರುವ ಗೌರಿ-ಗಣೇಶ ಮೂರ್ತಿಗಳು

ಅತ್ಯಂತ ಕಡಿಮೆ ಬೆಲೆಗೆ ಅಂದ್ರೆ 120 ರೂ.ಗೆ ಸಿಗುವ ಈ ಗೌರಿ-ಗಣೇಶ ಮೂರ್ತಿಗಳ ಪ್ರತಿಷ್ಠಾಪಿಸಿ ಔಷಧೀಯ ಗುಣಗಳುಳ್ಳ ಗಿಡ, ಮರಗಳನ್ನೂ ಬೆಳೆಸಬಹುದು. 120 ರೂ. ಕೊಟ್ಟರೆ ಪುಟ್ಟದೊಂದು ಮಣ್ಣಿನ ಪಾಟ್, ಗೌರಿ-ಗಣೇಶ ಮೂರ್ತಿಗಳು ಹಾಗೂ ವಿವಿಧ ಔಷಧೀಯ ಗುಣಗಳನ್ನು ಹೊಂದಿರುವ ಗಿಡಗಳ ಬೀಜವನ್ನ ನೀಡ್ತಾರೆ.
ಎಂದಿನಂತೆ ಗೌರಿ-ಗಣೇಶ ಮೂರ್ತಿಗಳನ್ನ ಮನೆಯಲ್ಲೇ ಪ್ರತಿಷ್ಟಾಪನೆ ಮಾಡಿದ ಬಳಿಕ, ಮಣ್ಣಿನ ಪಾಟ್ ಒಳಗೆ ಎರಡೂ ಮೂರ್ತಿಗಳನ್ನ ಇಟ್ಟು, ಅದರ ಜೊತೆಗೆ ಔಷಧೀಯ ಗುಣಗಳನ್ನು ಹೊಂದಿರುವ ಗಿಡಗಳ ಬೀಜವನ್ನ ಇಟ್ಟರೆ ಸಾಕು. ಅದರ ಮೇಲೆ ಕೇವಲ ಎರಡು ಲೀಟರ್ ಅಷ್ಟು ನೀರು ಹಾಕಿದರೆ ಎರಡೂ ಮೂರ್ತಿಗಳು ಕರಗಿ, ಪಾಟ್ ಒಳಗೆ ಗಿಡಗಳು ಬೆಳೆಯುತ್ತವೆ.ಇದರಿಂದ ಮನೆಯಲ್ಲೇ ಪರಿಸರ ಸ್ನೇಹಿ  ಗೌರಿ-ಗಣೇಶ ಮೂರ್ತಿಗಳನ್ನ ಪ್ರತಿಷ್ಠಾಪಿಸು ಜೊತೆಗೆ ಔಷಧೀಯ ಗುಣಗಳುಳ್ಳ ಗಿಡಗಳನ್ನ ಬೆಳೆಸಬಹುದು ಅಂತಾರೆ ಮಂಡ್ಯದ ವಿ.ಸಿ.ಫಾರಂನಲ್ಲಿರುವ ಆರಾಧ್ಯ ಆಗ್ರೋ ಫುಡ್ ಅಂಡ್ ಬೇವರೇಜ್ ನ ದಿವಾಕರ್ ಆರಾಧ್ಯ.

ಪರಿಸರ ಸ್ನೇಹಿ ಗಣೇಶ ಪ್ರತಿಷ್ಟಾಪಿಸಲು ಮಂಡ್ಯ ಡಿಸಿ ಕರೆ

ಇನ್ನು ಈ ಪರಿಸರ ಸ್ನೇಹಿ ಗಣೇಶನ ಪ್ರತಿಷ್ಠಾಪಿಸುವ ಪ್ರಾತ್ಯಕ್ಷಿಕೆ ಮಂಡ್ಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯಿತು. ಪ್ರಾತ್ಯಕ್ಷಿಕ ವೀಕ್ಷಣೆ ಮಾಡಿ, ಅದರ ಮಹತ್ವ ಅರಿತ ಮಂಡ್ಯ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್, ಪರಿಸರ ಸ್ನೇಹಿ ಗಣೇಶ ಪ್ರತಿಷ್ಟಾಪಿಸಿ, ಪರಿಸರ ಉಳಿಸುವಂತೆ ಜನರಿಗೆ ಕರೆ ನೀಡಿದ್ರು.
ಪರಿಸರ ಅಸಮತೋಲನದಿಂದ ಸಾಕಷ್ಟು ಅನಾಹುತಗಳನ್ನ ನೋಡ್ತಿದ್ದೇವೆ. ಈ ನಡುವೆಯೇ ಹಬ್ಬದ ಸಂಭ್ರಮವನ್ನ ಇಮ್ಮಡಿಗೊಳಿಸುವ ಜೊತೆಗೆ ಪರಿಸರ ಉಳಿಸುವ ದಿವಾಕರ್ ಆರಾಧ್ಯ ಅವರ ವಿನೂತನ ಪ್ರಯೋಗಕ್ಕೆ ಹ್ಯಾಟ್ಸ್ ಆಫ್ ಹೇಳಲೇಬೇಕಿದೆ.
ಅಂದ್ಹಾಗೆ, ಈ ಪರಿಸರ ಸ್ನೇಹಿ ಗೌರಿ-ಗಣೇಶಮೂರ್ತಿಗಳು ಬೇಕಂದರೆ ಮಂಡ್ಯದ ವಿ.ಸಿ.ಫಾರಂನಲ್ಲಿರುವ ಆರಾಧ್ಯ ಆಗ್ರೋ ಫುಡ್ ಅಂಡ್ ಬೀವರೇಜ್ ಅಥವಾ ದೂರವಾಣಿ ಸಂಖ್ಯೆ 9008005454 ಅಥವಾ 9845338953 ಸಂಪರ್ಕಿಸಬಹುದು.

-ಡಿ.ಶಶಿಕುಮಾರ್

LEAVE A REPLY

Please enter your comment!
Please enter your name here

- Advertisment -

Most Popular

5 ವರ್ಷದ ಬಾಲಕಿ ಕಾಣೆ

ಬೆಂಗಳೂರು : ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ 5 ವರ್ಷದ ಬಾಲಕಿ ಕಾಣೆಯಾಗಿದ್ದಾಳೆ. ಲೋಕಿತ ಕೆ.ಮರನ್ ಕಾಣೆಯಾಗಿರುವ ಬಾಲಕಿ‌. ಈಕೆ ತನ್ನ ತಾತನ ಜೊತೆ ಸೆ.18 ರಂದು ಮನೆಯಿಂದ ತೆರಳಿದ್ದಳು. ಮೆಜೆಸ್ಟಿಕ್ ನಿಲ್ದಾಣದಲ್ಲಿ...

ಅಕ್ಕ ಗೌರಿ ಲಂಕೇಶ್​ರನ್ನು ನೆನೆದು ಕಣ್ಣೀರಿಟ್ಟ ಇಂದ್ರಜಿತ್ ಲಂಕೇಶ್..!

ಬೆಂಗಳೂರು : ಸ್ಯಾಂಡಲ್​​ವುಡ್​ ಡ್ರಗ್ಸ್​ ಮಾಫಿಯಾ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಸಿಸಿಬಿ ವಿಚಾರಣೆ ಎದುರಿಸಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಇಂದು ಮತ್ತೊಮ್ಮೆ ಸಿಸಿಬಿ ಅಧಿಕಾರಿಗಳ ಮುಂದೆ ಹಾಜರಾಗುತ್ತಿದ್ದಾರೆ.  ಇಂದು ಸಿಸಿಬಿ ವಿಚಾರಣೆಗೆ ಹೋಗುವ...

ಸ್ಯಾಂಡಲ್​​ವುಡ್​​​​​ನಲ್ಲಿ ಡ್ರಗ್​ ಮಾಫಿಯಾ : ಇಂದು ಸಿಸಿಬಿಯಿಂದ ನಟಿ ರಾಗಿಣಿ ವಿಚಾರಣೆ

ಬೆಂಗಳೂರು :  ಸ್ಯಾಂಡಲ್​​​​ವುಡ್​​ನಲ್ಲಿ ಡ್ರಗ್​​ ಮಾಫಿಯಾದ ಬಗ್ಗೆ ಬಿಸಿಬಿಸಿ ಚರ್ಚೆ ನಡೀತಾ ಇದೆ. ಚಂದನವನಕ್ಕೆ ಮಾದಕ ಜಾಲ ಹಬ್ಬಿದೆಯೇ ಅಥವಾ ಇಲ್ಲವೇ ಅನ್ನೋದು ಸದ್ಯದ ಗಾಂಧಿನಗರದ ಹಾಟ್ ಸುದ್ದಿ. ಇದಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ...

ಕೊರೋನಾದಿಂದ ಮಾಜಿ ಶಾಸಕ ಅಪ್ಪಾಜಿ ಗೌಡ ನಿಧನ

ಶಿವಮೊಗ್ಗ : ಭದ್ರಾವತಿಯ ಜೆಡಿಎಸ್ ನ ಮಾಜಿ ಶಾಸಕ ಅಪ್ಪಾಜಿಗೌಡ ವಿಧಿವಶರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಕೊರೋನಾ ಸೋಂಕಿಗೆ ಒಳಗಾಗಿದ್ದ ಅವರು,  ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಅಪ್ಪಾಜಿಗೌಡರಿಗೆ 69 ವರ್ಷ ವಯಸ್ಸಾಗಿತ್ತು. ಪತ್ನಿ...

Recent Comments