ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 858ಕ್ಕೇರಿಕೆ : ಇಂದು ಮತ್ತೆ 10 ಜನರಲ್ಲಿ ಕೊರೋನಾ ಪಾಸಿಟಿವ್

0
730

ಬೆಂಗಳೂರು: ರಾಜ್ಯದಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯಾಗಿದ್ದು, ಇಂದು ಮತ್ತೆ 10 ಜನ ಸೋಂಕಿತರು ಪತ್ತೆಯಾಗಿದ್ದಾರೆ. ಈ ಮೂಲಕ ಸೋಂಕಿತರ ಸಂಖ್ಯೆ 858 ಕ್ಕೆ ಏರಿದೆ. ಸಾವಿನ ಸಂಖ್ಯೆ 31 ಕ್ಕೇರಿಕೆಯಾಗಿದೆ.ಇದರ ನಡುವೆ 422 ಜನ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ದಿಸ್ಚಾರ್ಜ್ ಆಗಿದ್ದಾರೆ

ಇಂದು ಪತ್ತೆಯಾದ ಸೋಂಕಿತರಲ್ಲಿ ದಾವಣಗೆರೆಯಲ್ಲಿ ಮೂವರಲ್ಲಿ ಸೋಂಕು ಪತ್ತೆಯಾಗಿದ್ದು, ಪೇಷೆಂಟ್ 662 ಸೋಂಕಿತನ ಸಂಪರ್ಕದಿಂದ  33 ವರ್ಷದ ಪುರುಷ, ಪೇಷೆಂಟ್ 663 ರಿಂದ 30 ವರ್ಷದ ಮಹಿಳೆಗೆ, ಹಾಗೂ ಪೇಷೆಂಟ್ ನಂ 667 ಸೋಂಕಿತನ ದ್ವಿತೀಯ ಸಂಪರ್ಕದಿಂದ 56 ವರ್ಷದ ಮಹಿಳೆಗೆ ಸೋಂಕು ಹರಡಿದೆ.

ಇನ್ನು ಬಾಗಲಕೋಟೆಯಲ್ಲಿ ಇಬ್ಬರಲ್ಲಿ ಸೋಂಕು ಕಂಡುಬಂದಿದ್ದು, ಒಂದು ಬಾಗಲಕೋಟೆಯ ಬನಹಟ್ಟಿಯ 20 ವರ್ಷದ ಬಾಲಕ ಗುಜರಾತ್​ನ ಅಹಮದಾಬಾದ್​ಗೆ ಪ್ರಯಾಣ ಬೆಳೆಸಿದ್ದರಿಂದ ಕೊರೋನಾ ವೈರಸ್ ಬಂದಿರುತ್ತದೆ. ಇನ್ನೊಬ್ಬ ವ್ಯಕ್ತಿ ಬಾಗಲಕೋಟೆಯ ಬಾದಾಮಿಯ 28 ವರ್ಷದವರಾಗಿದ್ದು, ಪೇಷೆಂಟ್ ನಂ.688 ರ ಸೋಂಕಿತನ ಸಂಪರ್ಕದಿಂದ ವೈರಸ್ ತಗುಲಿದೆ.

ಬೀದರ್​ನಲ್ಲೂ ಇಬ್ಬರಲ್ಲಿ ಸೋಂಕು ಹರಡಿದ್ದು, ಪೇಷೆಂಟ್ 644 ರ ಸಂಪರ್ಕದಿಂದಲೇ 50 ವರ್ಷದ ಪುರುಷ ಹಾಗು 27 ವರ್ಷದ ಪುರುಷ ಇಬ್ಬರಿಗೂ ಸೋಂಕು ತಗುಲಿದೆ.   

ಇನ್ನು ಕಲಬುರಗಿ, ಹಾವೇರಿ ಹಾಗೂ ವಿಜಯಪುರದಲ್ಲಿ ತಲಾ ಒಂದು ಕೇಸ್ ಪತ್ತೆಯಾಗಿದ್ದು, ಕಲಬುರಗಿಯಲ್ಲಿ 38 ವರ್ಷದ ಪುರುಷನಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಆದರೆ ಸೋಂಕಿತನಿಗೆ ಸೋಂಕು ಹರಡಿರುವ ಮೂಲ ಪತ್ತೆಯಾಗಿಲ್ಲ. ಇನ್ನು ಹಾವೇರಿಯ ಶಿಗ್ಗಾವಿಯ ಲ್ಲಿ ಪತ್ತೆಯಾಗಿರುವ 26 ವರ್ಷದ ಸೋಂಕಿತ ಮುಂಬೈಗೆ ಪ್ರಯಾಣ ಬೆಳೆಸಿದ್ದರಿಂದ ಸೋಂಕು ಹರಡಿರುವುದು ದೃಢಪಟ್ಟಿದೆ. ಪೇಷೆಂಟ್ ನಂ 511 ರ ವ್ಯಕ್ತಿಯ ಸಂಪರ್ಕದಿಂದ ವಿಜಯಪುರದ 20 ವರ್ಷದ ಯುವತಿಗೆ ಸೋಂಕು ಹರಡಿದೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here