Home P.Special ಹೆಬ್ಬಾವು ಕಂಡು ತಬ್ಬಿಬ್ಬಾದ ಹುಲಿರಾಯ..!

ಹೆಬ್ಬಾವು ಕಂಡು ತಬ್ಬಿಬ್ಬಾದ ಹುಲಿರಾಯ..!

ಕಾಡಿನ ರಾಜ ಸಿಂಹ, ಆದ್ರೂ ಹುಲಿಯ ಗತ್ತೇ ಬೇರೆ. ಠೀವಿಯಿಂದ ಹುಲಿ ಹೆಜ್ಜೆ ಹಾಕ್ತಿದ್ರೆ, ಅದನ್ನು ನೋಡೋದೇ ಚೆಂದ. ಹುಲಿ ಎದುರು ಬರ್ತಿದೆ ಅಂದ್ರೆ, ಎಂಥವರೂ ತಮ್ಮ ದಾರಿ ಬದಲಿಸಲೇ ಬೇಕು. ಆದ್ರೆ, ಇಲ್ಲೊಂದು ವಿಡಿಯೋ ಇದೆ ನೋಡಿ, ಇದರಲ್ಲಿ ಹುಲಿಯೇ ತನ್ನ ದಾರಿ ಬದಲಿಸಿದೆ.
ಕಾಡಿನಲ್ಲಿ ಹುಲಿಯೊಂದು ನಡೆದುಕೊಂಡು ಹೋಗ್ತಾ ಇತ್ತು. ಸಡನ್ ಆಗಿ ಒಂದು ಹೆಬ್ಬಾವು ಅದರ ಎದುರು ಬಂದುಬಿಡ್ತು. ಅದನ್ನು ಕಂಡ ಹುಲಿ ಕ್ಷಣಕಾಲ ತಬ್ಬಿಬ್ಬಾಯ್ತು. ರಸ್ತೆಯ ಮೇಲಿದ್ದ ಹೆಬ್ಬಾವು ನೋಡಿದ ಹುಲಿಗೆ ಏನು ಮಾಡಬೇಕು ಎಂದು ತೋಚಲೇ ಇಲ್ಲ. ಆದ್ರೆ, ಹೆಬ್ಬಾವು ಮಾತ್ರ ಸ್ಥಳದಿಂದ ಕದಲಲೇ ಇಲ್ಲ. ಸ್ವಲ್ಪ ಹೊತ್ತು ನಿಂತು ನೋಡಿದ ಹುಲಿರಾಯ, ಅಲ್ಲಿಂದ ಜಾಗ ಖಾಲಿ ಮಾಡ್ತು.
ಈ ವಿಡಿಯೋವನ್ನು ಕರ್ನಾಟಕ ಕಬಿನಿ ರೆಸಾರ್ಟ್ ನಲ್ಲಿ ಶೂಟ್ ಮಾಡಿರೋದು. ಪರಿಸರವಾದಿ ಶರತ್ ಅಬ್ರಹಾಮ್ ಎಂಬುವರು 2018 ರ ಆಗಸ್ಟ್ ನಲ್ಲಿ ಇದನ್ನು ಚಿತ್ರೀಕರಿಸಿದ್ರು. ಆದ್ರೆ ಈಗ ಸುಸಾಂತ ನಂದಾ ಎಂಬ ಐಎಫ್ಎಸ್ ಅಧಿಕಾರಿಯೊಬ್ಬರು ತಮ್ಮ ಟ್ವಿಟರ್ ನಲ್ಲಿ ಶೇರ್ ಮಾಡಿದ್ದಾರೆ. ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.

LEAVE A REPLY

Please enter your comment!
Please enter your name here

- Advertisment -

Most Popular

‘ಬಿಎಸ್ ವೈ ವಿರುದ್ಧ ಮತ್ತೆ ಗುಡುಗಿದ ಯತ್ನಾಳ್’

ಬೆಂಗಳೂರು: ಸಿಎಂ ಬಿಎಸ್ ಯಡಿಯೂರಪ್ಪ ಅವರ ವಿರುದ್ಧ ಯತ್ನಾಳ್ ಪಾಟೀಲ್ ಇಂದು ಮತ್ತೆ ವಿಧಾನಸೌಧದಲ್ಲಿ ಗುಡುಗಿದ್ದಾರೆ. ಭ್ರಷ್ಟಾಚಾರ ಮುಕ್ತ ಆಡಳಿತ, ವಂಶಪಾರಂಪರ್ಯ ಆಡಳಿತ ಕೊನೆಯಾಗಬೇಕೇಂದು ಪ್ರಧಾನಿ ನರೇಂದ್ರ ಮೋದಿಯವರ ಕನಸು ಆಗಿದೆ. ಒಂದು ಕುಟುಂಬಕ್ಕೆ ಒಂದೇ...

ರಾಜಭವನಕ್ಕೆ ಮುತ್ತಿಗೆ ಹಾಕುತ್ತೇವೆ: ಡಿ.ಕೆ.ಶಿವಕುಮಾರ

ಬೆಂಗಳೂರು: ಪ್ರೀಡಂ ಪಾರ್ಕನ ಸಮಾವೇಶದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ ಸಭೆ ಮುಗಿದ ಬಳಿಕ ರಾಜಭವನಕ್ಕೆ ಮುತ್ತಿಗೆ ಹಾಕುತ್ತೇವೆ ಎಂದು ಹೇಳಿದರು. ಕಾಂಗ್ರೆಸ್ ಪಕ್ಷ ರೈತ ಪರವಾಗಿರುತ್ತೆ. ನಾವು ರೈತರ ಪರವಾಗಿ ಹೋರಾಟ ಮಾಡುತ್ತಿದ್ದೇವೆ....

‘ಪ್ರೀಡಂ ಪಾರ್ಕ್ ತಲುಪಿದ ಪ್ರತಿಭಟನೆ’

ಬೆಂಗಳೂರು: ಕೃಷಿ ವಿರೋಧಿ ಕಾಯ್ದೆಯ ಪ್ರತಿಭಟನೆ ಕಾವು ಕ್ಷಣ ಕ್ಷಣ್ಣಕ್ಕೂ ಹೆಚ್ಚಾಗುತ್ತಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದೆ. ಪ್ರತಿಭಟನೆ ಬಿಸಿ ಹೆಚ್ಚುತ್ತಿದೆ. ಮೆಜೆಸ್ಟಿಕ್ ನಿಂದ ಫ್ರೀಡಂ ಪಾರ್ಕ್ ನತ್ತ...

ಹೆಣ್ಣು ಮಕ್ಕಳ ಶಿಕ್ಷಣ ಎಸ್.ಎಸ್.ಎಲ್.ಸಿಗೆ ಕೊನೆಯಾಗಬಾರದು : ಸುರೇಶ್ ಕುಮಾರ್

ಶಿವಮೊಗ್ಗ: ಶಿಕ್ಷಣ ಸಚಿವ ಸುರೇಶ್ ಕುಮಾರ್ ಇಂದು ಶಿವಮೊಗ್ಗ ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.  ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಅವರ ಜೊತೆ ಇಂದು ನಗರದ ವಿವಿಧ ಸರ್ಕಾರಿ ಶಾಲೆಗಳಿಗೆ ರೌಂಡ್ಸ್ ಹಾಕಿದ ಸಚಿವ...

Recent Comments