ಅಮೆರಿಕಾ: ಡೆಡ್ಲಿ ಕೊರೋನಾ ವೈರಸ್ಗೆ ಇಡೀ ಜಗತ್ತೆ ತತ್ತರಿಸಿ ಹೋಗಿದೆ. ಇದೀಗ ಈ ಮಹಾಮಾರಿ ಸೋಂಕು ಮೃಗಾಲಯದಲ್ಲಿದ್ದ ಹುಲಿಗೂ ತಗುಲಿದೆ.
ಹೌದು ನ್ಯೂಯಾರ್ಕ್ನ ಬ್ರಾಂಕ್ಸ್ ಮೃಗಾಲಯದಲ್ಲಿದ್ದ ಹೆಣ್ಣು ಹುಲಿಯೊಂದಕ್ಕೆ ಕೋರೋನಾ ಸೋಂಕು ಹರಡಿದ್ದು, ಪ್ರಾಣಿಗಳಲ್ಲಿ ಸೋಂಕು ಕಂಡುಬಂದಿರುವುದು ಇದೇ ಮೊದಲ ಪ್ರಕರಣ ಆಗಿದೆ. ಇದು ನಾಲ್ಕು ವರ್ಷದ ಮಲಾಯನ್ ಹುಲಿಯಾಗಿದ್ದು, ಮೃಗಾಲಯ ಸಿಬ್ಬಂದಿಯಿಂದಲೇ ಹುಲಿಗೆ ಸೋಂಕು ಹರಡಿದೆ. ಮೃಗಾಲಯದಲ್ಲಿ ಪ್ರಾಣಿಗಳ ಆರೈಕೆ ಮಾಡುತ್ತಿದ್ದ ವ್ಯಕ್ತಿಗೆ ಸೋಂಕಿನ ಲಕ್ಷಣಗಳಿದ್ದವು ಎಂದು ಬ್ರಾಂಕ್ಸ್ ಮೃಗಾಲಯದ ವನ್ಯಜೀವಿ ಸಂರಕ್ಷಣಾ ತಂಡ ತಿಳಿಸಿದೆ.
ಈ ಮೃಗಾಲಯದಲ್ಲಿನಾಡಿಯಾ ಮಾತ್ರವಲ್ಲದೆ ಇತರೆ ಐದು ಹುಲಿಗಳು ಹಾಗೂ ಸಿಂಹಗಳಲ್ಲಿ ಉಸಿರಾಟ ಸಮಸ್ಯೆಯ ಲಕ್ಷಣಗಳು ಕಾಣಿಸಕೊಂಡಿದೆ. ಈ ಹಿನ್ನೆಲೆ ನಾಡಿಯಾ ಹುಲಿಯ ಮಾದರಿನ್ನು ಪರೀಕ್ಷೆಗೆ ಕಳುಹಿಸಿದ್ದು, ಸೋಂಕು ಇರುವುದು ದೃಢಪಟ್ಟಿದೆ. ನಾಡಿಯಾ ಸಹೋದರಿ ಅಜುಲ್, ಎರಡು ಆಮುರ್ ಹುಲಿಗಳು ಹಾಗೂ ಮೂರು ಆಫ್ರಿಕನ್ ಸಿಂಹಗಳಿಗೆ ಕೆಮ್ಮು ಕಾಣಿಸಿಕೊಂಡಿದೆ. ಸದ್ಯ ಅನಾರೋಗ್ಯಕ್ಕೀಡಾಗಿರುವ ಹುಲಿ ಮತ್ತು ಸಿಂಹಗಳಿಗೆ ಚಿಕಿತ್ಸೆ ನೀಡಿ ನಿಗಾದಲ್ಲಿಡಲಾಗಿದೆ.