Home uncategorized ಸರಗಳ್ಳರಿಗೆ ಭರ್ಜರಿ ಗೂಸಾ‌ ಕೊಟ್ಟ ಸಾರ್ವಜನಿಕರು.

ಸರಗಳ್ಳರಿಗೆ ಭರ್ಜರಿ ಗೂಸಾ‌ ಕೊಟ್ಟ ಸಾರ್ವಜನಿಕರು.

ತುಮಕೂರು: ಕೈಯಲ್ಲಿ ಚಾಕುಗಳನ್ನು ಹಿಡಿದುಕೊಂಡು ಸಿಕ್ಕ ಸಿಕ್ಕವರ ಮೇಲೆ ಹಲ್ಲೆ ಮಾಡಿ ಮೊಬೈಲ್ ಹಾಗೂ ಸರ ದೋಚುತ್ತಿದ್ದ ಮೂವರನ್ನು ತುಮಕೂರು ತಾಲೂಕಿನ ಬ್ಯಾತ ಗ್ರಾಮಸ್ಥರು ಹಿಡಿದು ಭರ್ಜರಿ ಗೂಸಾ ಕೊಟ್ಟು ಪೊಲೀಸರಿಗೆ ಒಪ್ಪಿಸಿದ ಘಟನೆ ತುಮಕೂರಿನಲ್ಲಿ ನಡೆದಿದೆ.

ಮೂವರು ಕಿಡಿಗೇಡಿಗಳಿಂದ ತಂಡ ನಿನ್ನೇ ಮಧ್ಯಾಹ್ನ ತುಮಕೂರು ನಗರದ ಭದ್ರಮ್ಮ ವೃತ್ತದಲ್ಲಿರುವ ಮೊಬೈಲ್ ಟ್ಯಾಂಪರ್ ಗ್ಲಾಸ್ ಹಾಕುವ ಕಾರಿನ ಬಳಿ ಬಂದು ಮೊಬೈಲ್ ಗಳನ್ನು ಕಿತ್ತುಕೊಳ್ಳುವ ಯತ್ನ ಮಾಡಿದ್ದಾರೆ. ಮೊಬೈಲ್ ಕೊಡದೇ ಇದ್ದ ಕಾರಣಕ್ಕೆ ಮನಸ್ಸೋ ಇಚ್ಛೆ ಇರಿದು ಅಲ್ಲಿಂದ ಪರಾರಿಯಾಗಿದ್ದರು. ನಂತರ ಸೋಮೇಶ್ವರ ಬಡಾವಣೆಯಲ್ಲಿ ಕಾರಿನಲ್ಲಿ ಕುಳಿತಿದ್ದ ಶಮಂತ್ ಎಂಬಾತನ ಬಳಿ ಮೊಬೈಲ್ ಕಿತ್ತುಕೊಳ್ಳಲು ಯತ್ನಿಸಿ ಆತನಿಗೂ ಇರಿದು ಅಲ್ಲಿಂದ ಪರಾರಿಯಾಗಿದ್ದರು. ಅಲ್ಲಿಂದ ಗ್ರಾಮಾಂತರ ಭಾಗಕ್ಕೆ ಪರಾರಿಯಾಗಿದ್ದ ಈ ಮೂವರನ್ನು ಊರ್ಡಿಗೆರೆ ಸಮೀಪ ಬ್ಯಾತ ಗ್ರಾಮದ ಗ್ರಾಮಸ್ಥರು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಇನ್ನೂ ಈ ಆರೋಪಿಗಳಿಂದ ಇರಿತಕ್ಕೆ ಒಳಗಾದವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಚಾಕು, ಮೊಬೈಲ್ ಹಾಗೂ ಸರವನ್ನು ವಶಪಡಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ. ಸದ್ಯ ಇಬ್ಬರು ಆರೋಪಿಗಳು ಕ್ಯಾತಸಂದ್ರ ಪೊಲೀಸ್ ಠಾಣೆಯಲ್ಲಿ ಬಂಧಿತರಾಗಿದ್ದು ಮತ್ತೊಬ್ಬನಿಗಾಗಿ ತೀವ್ರ ಶೋಧ ನಡೆದಿದೆ.

 

ಹೇಮಂತ್ ಕುಮಾರ್.ಜೆ.ಎಸ್ ಪವರ್ ಟಿವಿ ತುಮಕೂರು.

LEAVE A REPLY

Please enter your comment!
Please enter your name here

- Advertisment -

Most Popular

ಅಪಮಾನದಿಂದ ಶೋಕ್ದಾರ್ ಮುಕ್ತ.. ನೋ ಮಿಸ್ಟೇಕ್..?!

ನೈಟ್ ಸಫಾರಿಯಿಂದ ಹೊಸ ವಿವಾದದಲ್ಲಿ ಸಿಲುಕಿಕೊಂಡಿದ್ದ ಸ್ಯಾಂಡಲ್​ವುಡ್​ನ ಶೋಕ್ದಾರ್, ಟಾಕ್ ಆಫ್ ದ ಟೌನ್ ಆಗಿದ್ರು. ಆದ್ರೀಗ ಅರಣ್ಯಾಧಿಕಾರಿಗಳು ಆ ಕೇಸ್​ನ ಟ್ರೇಸ್ ಮಾಡಿದ್ದಾರೆ. ಅವಮಾನ ಹಾಗೂ ಅಪಮಾನಗಳಿಂದ ಬಜಾರ್ ಹುಡ್ಗನಿಗೆ ಮುಕ್ತಿ...

ಡಿಕೆಶಿ ಗೂಂಡಾ ರಾಜಕಾರಣ ನಡೆಯುವುದಿಲ್ಲ : ಶೋಭಾ ಕರಂದ್ಲಾಜೆ

ಮೈಸೂರು :  ಶಿರಾ, ಆರ್ ಆರ್​ ನಗರ ವಿಧನಾಸಭಾ ಉಪ ಚುನಾವಣೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ . ಕೆ ಶಿವಕುಮಾರ್​ ಅವರ ಗೂಂಡಾ ರಾಜಕಾರಣ  ನಡೆಯುವುದಿಲ್ಲ ಅಂತ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ...

ಕಾಡಾನೆ ದಾಳಿಗೆ ಸಕ್ರೆಬೈಲು ಬಿಡಾರದ ದೈತ್ಯ ಆನೆ `ರಂಗ’ ಸಾವು

ಶಿವಮೊಗ್ಗ :  ಕಾಡಾನೆ ದಾಳಿಯಿಂದ ಸಕ್ರೆಬೈಲು ಬಿಡಾರದ ಆನೆ ರಂಗ ಮೃತಪಟ್ಟಿದೆ. 35 ವರ್ಷದ ಆನೆ ರಂಗ ಸಕ್ರೆಬೈಲು ಬಿಡಾರದ ಪ್ರಮುಖ ಆಕರ್ಷಣೆಯಾಗಿತ್ತು. ಕಳೆದ ರಾತ್ರಿ ಬಿಡಾರಕ್ಕೆ ನುಗ್ಗಿದ ಕಾಡೆನೆಯೊಂದು ಏಕಾಏಕಿ ರಂಗನ ಮೇಲೆರಗಿದೆ....

ದೇವೇಂದ್ರ ಫಡ್ನವಿಸ್​​ಗೆ ಕೊರೋನಾ

ಮುಂಬೈ : ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್​ ಅವರಿಗೆ ಕೊರೋನಾ ಸೋಂಕು ತಗುಲಿದೆ. ಫಡ್ನವೀಸ್ ಅವರು ಬಿಹಾರದ ಬಿಜೆಪಿ ಚುನಾವಣಾ ಪ್ರಚಾರ ಉಸ್ತುವಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಬಿಹಾರ ವಿಧಾನಸಭಾ...

Recent Comments