ಬೆಂಗಳೂರು: ಜನವರಿ 4ರ ನಂತರ ಮೂದಿಗಳ ಕಲಾಪ ನಡೆಯುವ ಸಾಧ್ಯತೆ ಇದೆ. ಮೇಲ್ಮನೆ ಸಭಾಪತಿಯನ್ನು ಕೆಳಗಿಳಿಸಲು ಬಿಜೆಪಿ ಹರಸಾಹಸ ಪಡುತ್ತಿದೆ. ವಿಶೇಷ ಅಧಿವೇಶನ ಕರೆಯಲು ಸರ್ಕಾರ ನಿರ್ಧಾರ ಮಾಡಿದೆ. ಗೋ ಹತ್ಯೆ ನೀಷಧೆ ಕಾಯ್ದೆಯನ್ನು ಬಿಜೆಪಿ ತರಲು ಹರಸಾಹಸ ಪಡುತ್ತಿದೆ. ಆದರೆ ಕಾಯ್ದೆ ಜಾರಿಗೆ ಸಭಾಪತಿಗಳು ಅಡ್ಡಿಯಾಗಿರುವ ಹಿನ್ನಲೆ ಕೇಳಗಿಳಿಸಲು ಸತತ ಪ್ರಯತ್ನ ಮಾಡುತ್ತಿದೆ.
ಸಭಾಪತಿಯನ್ನು ಕೆಳಗಿಳಿಸಿ ಬೇರೆಯವರನ್ನು ಕೂರಿಸಲು ಚಿಂತನೆ ನಡೆಸಿದೆ. ಅವಿಶ್ವಾಸ ಮಂಡಿಸಿ ಕೆಳಗಿಳಿಸಲು ಪ್ರಯತ್ನ ಮಾಡುತ್ತಿದೆ ಎಂದು ತಿಳಿದು ಬರುತ್ತಿದೆ. ಡಿಸೆಂಬರ್ 28 ರಂದು ಸಂಪುಟ ಸಭೆ ನಡೆಯಲಿದೆ. ಈಗಾಗಲೇ ಬಿಜೆಪಿ ಅವಿಶ್ವಾಸಕ್ಕೆ ಅನುಮತಿ ಕೋರಿದೆ ಎಂದು ಹೇಳಲಾಗುತ್ತಿದೆ.