ನೀರ್ದೋಸೆ ಸಿನಿಮಾದ ನವರಸ ನಾಯಕ ಜಗ್ಗೇಶ್ ಹಾಗೂ ನಿರ್ದೇಶಕ ವಿಜಯ್ ಪ್ರಸಾದ್ ಕಾಂಬಿನೇಶನ್ನಲ್ಲಿ ತೋತಾಪುರಿ ಸಿನಿಮಾ ಬರ್ತಿರೋ ವಿಷ್ಯ ಈಗಾಗ್ಲೇ ಎಲ್ರಿಗೂ ತಿಳಿದೇ ಇದೆ. ಹಾಡಿನ ಮೂಲಕ ವರ್ಲ್ಡ್ ವೈಡ್ ತೋತಾಪುರಿ ಫ್ಲೇವರ್ ಹರಡಿರೋ ಚಿತ್ರತಂಡ ಇದೀಗ ಕಿಚ್ಚು ಹಚ್ಚುವಂತೆ ತಮ್ಮ ಸಿನಿಮಾದ ಟ್ರೈಲರ್ ರಿವೀಲ್ ಮಾಡಲು ಸಜ್ಜಾಗಿದೆ.
ನವರಸ ನಾಯಕ ಜಗ್ಗೇಶ್ ನಟನೆಯ ಬಹುನಿರೀಕ್ಷಿತ ಸಿನಿಮಾ ತೋತಾಪುರಿ. ಈ ಹಿಂದೆ ನೀರ್ದೋಸೆ ಸಿನಿಮಾ ಮೂಲಕ ಸಿನಿಪ್ರಿಯರನ್ನು ರಂಜಿಸಿದ್ದ ನಿರ್ದೇಶಕ ವಿಜಯ್ ಪ್ರಸಾದ್ ಈ ಬಾರಿ ಮತ್ತೆ ಜಗ್ಗೇಶ್ ಅವ್ರೊಂದಿಗೆ ತೋತಾಪುರಿ ಚಿತ್ರದಲ್ಲಿ ನವರಸಗಳ ಸವಿಯನ್ನು ಪ್ರೇಕ್ಷಕರಿಗೆ ನೀಡಲು ರೆಡಿಯಾಗಿದ್ದಾರೆ. ಈಗಾಗ್ಲೇ ಒಂದು ಸಾಂಗ್ ಮೂಲಕ ಅದ್ರ ಸ್ಯಾಂಪಲ್ ತೋರಿಸಿದ್ದಾರೆ.
ತೋತಾಪುರಿ ಚಿತ್ರದಲ್ಲಿ ಜಗ್ಗೇಶ್ಗೆ ಜೋಡಿಯಾಗಿ ಬೆಣ್ಣೆ ನಗರಿ ಬೆಡಗಿ, ಸ್ಯಾಂಡಲ್ವುಡ್ ಶಾನೆ ಟಾಪ್ ಹುಡುಗಿ ಅದಿತಿ ಪ್ರಭುದೇವ ಕಾಣಿಸಿಕೊಳ್ತಿದ್ದಾರೆ. ಈಗಾಗ್ಲೇ ಇಬ್ಬರ ಕಾಂಬಿನೇಶನ್ನ ಬಾಗ್ಲು ತೆಗಿ ಮೇರಿ ಜಾನ್.. ಅನ್ನೋ ಹಿಂದಿ ಸಾಹಿತ್ಯದೊಂದಿಗೆ, ಕನ್ನಡದ ಸೊಗಡಿರುವ ಬ್ಯೂಟಿಫುಲ್ ಸಾಂಗ್ ರಿವೀಲ್ ಆಗಿ ಮಿಲಿಯನ್ಗಟ್ಟಲೆ ವೀವ್ಸ್ ಪಡೆಯೋ ಮೂಲಕ ವಿಶ್ವಮಟ್ಟದಲ್ಲಿ ಸದ್ದು ಮಾಡ್ತಿದೆ.
ಕನ್ನಡ ಚಿತ್ರರಂಗದಲ್ಲಿ ಒಂದು ಹೊಸ ಟ್ರೆಂಡ್ ಕ್ರಿಯೇಟ್ ಮಾಡಿದ ತೋತಾಪುರಿ ಚಿತ್ರದ ಈ ಹಾಡಿಗೆ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ತನಕ ಎಲ್ರೂ ಫಿದಾ ಆಗಿದ್ದಾರೆ. ಸಾಂಗ್ ನೋಡಿ ಖುಷಿ ಪಟ್ಟಿರೋ ಸಿನಿ ಅಭಿಮಾನಿಗಳು ಸಿನಿಮಾ ಟ್ರೈಲರ್ಗಾಗಿ ಕಾದು ಕುಳಿತಿದ್ದಾರೆ. ಹೀಗಾಗಿ ಸದ್ಯ ತೋತಾಪುರಿ ಟೀಮ್ ಟ್ರೈಲರ್ ಬಿಡುಗಡೆಗೆ ರೆಡಿಯಾಗಿದ್ದು, ಅದಕ್ಕೆ ಮುಹೂರ್ತ ಕೂಡ ಫಿಕ್ಸ್ ಆಗಿದೆ. ವಿಶೇಷ ಅಂದ್ರೆ ಜಗ್ಗಣ್ಣನ ತೋತಾಪುರಿ ಸಿನಿಮಾ ಟ್ರೈಲರ್ ಬಿಡುಗಡೆಗೆ ಕಿಚ್ಚ ಸುದೀಪ್ ಸಾಥ್ ನೀಡಲಿದ್ದಾರೆ.
ತೋತಾಪುರಿ ಸಿನಿಮಾದ ಟ್ರೈಲರ್ನ್ನು ಏಪ್ರಿಲ್ 21ರಂದು ಅದ್ಧೂರಿ ಕಾರ್ಯಕ್ರಮದಲ್ಲಿ ಸ್ಯಾಂಡಲ್ವುಡ್ ಬಾದ್ಷಾ ಸುದೀಪ್ ಲಾಂಚ್ ಮಾಡಲಿದ್ದಾರೆ. ಮೊದಲಿನಿಂದ್ಲೂ ಜಗ್ಗೇಶ್ ಹಾಗೂ ಸುದೀಪ್ ನಡುವೆ ಉತ್ತಮ ಬಾಂಧವ್ಯವಿದೆ. ಈ ಹಿಂದೆ ಬಿಗ್ಬಾಸ್ ವೇದಿಕೆಯಲ್ಲೊಮ್ಮೆ ಕಿಚ್ಚ ಹಾಗೂ ನವರಸ ನಾಯಕ ಒಟ್ಟಿಗೆ ಕಾಣಿಸಿಕೊಂಡಿದ್ರು. ಆಗಾಗ ಹಲವು ಸಭೆ, ಸಮಾರಂಭಗಳಲ್ಲಿ ಪರಸ್ರರ ಭೇಟಿಯಾಗ್ತಿರ್ತಾರೆ. ಆದ್ರೆ ಈ ಬಾರಿ ತೋತಾಪುರಿ ಚಿತ್ರದ ಟ್ರೈಲರ್ ರಿಲೀಸ್ಗಾಗಿ ಇಬ್ಬರೂ ಸ್ಟಾರ್ಸ್ ಒಟ್ಟಿಗೆ ಕಾಣಿಸಿಕೊಳ್ತಿರೋದು ಸಿಕ್ಕಾಪಟ್ಟೆ ಸ್ಪೆಷಲ್ ಅನ್ಬಹುದು.
ಅಂದಹಾಗೆ ತೋತಾಪುರಿ ಸಿನಿಮಾ ಎರಡು ಭಾಗಗಳಲ್ಲಿ ಮೂಡಿಬರ್ತಿದೆ. ಜೊತೆಗೆ ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಐದೂ ಭಾಷೆಗಳಲ್ಲೂ ಸಿನಿಮಾ ತೆರೆ ಕಾಣಲಿದೆ. ಸುದೀಪ್ ಅಲ್ ರೆಡಿ ಸ್ಯಾಂಡಲ್ವುಡ್ ಟು ಬಾಲಿವುಡ್ವರೆಗೂ ಸೂಪರ್ ಹಿಟ್ ಸಿನಿಮಾಗಳಲ್ಲಿ ಮಿಂಚಿ, ಎಲ್ಲೆಡೆ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಹೀಗಾಗಿ ಕಿಚ್ಚನಿಂದ ಟ್ರೈಲರ್ ರಿಲೀಸ್ ಮಾಡಿಸಿ ಎಲ್ಲಾ ಭಾಷಿಗರನ್ನೂ ಸೆಳೆಯೋ ತಂತ್ರ ಚಿತ್ರತಂಡದ್ದು.
ಸದ್ಯಕ್ಕೆ ಕನ್ನಡದಲ್ಲಿ ಮಾತ್ರ ತೋತಾಪುರಿ ಟ್ರೈಲರ್ ರಿವೀಲ್ ಮಾಡಿ, ನಂತ್ರ ಉಳಿದ ಭಾಷೆಗಳಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ. ಇನ್ನು ತೋತಾಪುರಿ ಸಿನಿಮಾದಲ್ಲಿ ಡಾಲಿ ಧನಂಜಯ್, ದತ್ತಣ್ಣ, ಸುಮನ್ ರಂಗನಾಥ್, ವೀಣಾ ಸುಂದರ್, ಹೇಮದತ್ ಮುಂತಾದ ಕಲಾವಿದರು ತಾರಾಗಣದಲ್ಲಿದ್ದಾರೆ.
ತೋತಾಪುರಿ ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ ಸಂಯೋಜಿಸಿದ್ರೆ, ನಿರಂಜನ್ ಬಾಬು ಛಾಯಾಗ್ರಹಣ ಮಾಡ್ತಿದ್ದಾರೆ. ಕೆ.ಎ ಸುರೇಶ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಒಟ್ಟಾರೆ ತೋತಾಪುರಿ ಚಿತ್ದ ಟ್ರೈಲರ್ನ್ನು ನಟ ಸುದೀಪ್ ಲಾಂಚ್ ಮಾಡ್ತಿದ್ದು, ಈ ವಿಚಾರ ಸದ್ಯ ಜಗ್ಗೇಶ್ ಹಾಗೂ ಕಿಚ್ಚ ಇಬ್ಬರ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.
ಚಂದನ.ಎಸ್, ಫಿಲ್ಮ್ ಬ್ಯೂರೋ, ಪವರ್ ಟಿವಿ