Homeರಾಜ್ಯSITಗೆ ವರದಾನವಾಯ್ತು ಆ ಮೂರು ಹೇಳಿಕೆಗಳು..!

SITಗೆ ವರದಾನವಾಯ್ತು ಆ ಮೂರು ಹೇಳಿಕೆಗಳು..!

ಬೆಂಗಳೂರು: ಶಂಕಿತ ಸಿಡಿ ರೂವಾರಿಗಳಲ್ಲಿ ಇಬ್ಬರು ವಿಡಿಯೋ ಬಿಡುಗಡೆ ಮಾಡಿದ್ದು ಎಸ್‌ಐಟಿಗೆ  ವರದಾನವಾಗಿದೆ. ಕೆಲವೊಂದು ಗೊಂದಲಗಳಿಗೆ ತೆರೆ ಎಳೆದಿರುವ ಈ ವಿಡಿಯೋನ್ನು ಸಂಪೂರ್ಣವಾಗಿ ಪರಿಶೀಲನೆ ನಡೆಸಿದ್ದಾರೆ. ಈ ಪ್ರಕರಣದಲ್ಲಿ ಅತಿ ಮುಖ್ಯವಾಗಿ ಬೇಕಿರೋದು ಮೂವರು ಮಾತ್ರ. ಇನ್ನುಳಿದವರು ಆಟಕ್ಕೆ ಉಂಟು ಲೆಕ್ಕಕಿಲ್ಲ. ಹಾಗಾದ್ರೆ, ಎಲ್ಲಿದ್ದಾರೆ ಈ ಪ್ರಮುಖ ವ್ಯಕ್ತಿಗಳು..?

ಸಿಡಿ ಪ್ರಕರಣದಲ್ಲಿ ಬಹು ಮುಖ್ಯವಾಗಿ ಬೇಕಾಗಿರೋದು ಯುವತಿ. ಆದ್ರೆ, ಯುವತಿಗೆ ಎಷ್ಟೇ ಮನವೊಲಿಸಿದ್ರೂ ಆಕೆ ಮಾತ್ರ ಎಸ್ಐಟಿ ಕೈಗೆ ಸಿಗುತ್ತಲೇ ಇಲ್ಲ.  ತನ್ನ ಸ್ಪಷ್ಟ ಹೇಳಿಕೇನು ಕೊಡ್ತಿಲ್ಲ .ಈಗಾಗಲೆ ಮೂರು ಬಾರಿ ನೊಟೀಸ್ ನೀಡಿರುವ ಎಸ್ಐಟಿ, ಮನೆ ಬಾಗಿಲಿಗೆ ಅಂಟಿಸಿ ಬರುವ ಕೆಲಸ ಮುಂದುವರೆಸಿದೆ. ಹೀಗಾಗಿ ಯುವತಿಯ ಸ್ಟೇಟ್ಮೆಂಟ್ ಬಹುಮುಖ್ಯವಾಗಿದ್ದು, ರಾಜ್ಯದ ಯಾವುದೇ ಠಾಣೆಯಲ್ಲಿ ಹೇಳಿಕೆಗಳನ್ನು ಕೊಡಬಹುದು ಅಂತ ಅವಕಾಶ ನೀಡಲಾಗಿದೆ.

ಈಗಾಗಲೇ ಶಂಕಿತ ತನ್ನ ವಿಡಿಯೋದಲ್ಲಿ ಸಾಕಷ್ಟು ಅಂಶಗಳನ್ನು ಹೊರಹಾಕಿದ್ದಾನೆ. ಆ ವಿಡಿಯೋ ಆಧಾರವಾಗಿಟ್ಟುಕೊಂಡು ಪರಿಶೀಲನೆ ನಡೆಸಿರುವ ಎಸ್ಐಟಿಗೆ ಸಾಕಷ್ಟು ಅಂಶಗಳು ಕಂಡುಬಂದಿವೆ. ಮೊದಲು ಸಿಡಿ ಪ್ರಕರಣದಲ್ಲಿ ಪ್ರಮುಖ ಶಂಕಿತನ ಕೈವಾಡ ಇದ್ಯೋ ಇಲ್ವೋ ಎಂಬುದರ ಬಗ್ಗೆ ಎಸ್ಐಟಿಗೆ ಸ್ಪಷ್ಟನೆ ಇರಲಿಲ್ಲ. ಅದರಲ್ಲಿ ಆ ಯುವತಿ ನನಗೆ ಪರಿಚಯವಿದೆ. ಆಕೆ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ನ್ಯಾಯ ಕೊಡಿಸಿ ಎಂದು ಹೇಳಿಕೊಂಡು ಬಂದಿರೋದಾಗಿ ಹೇಳಿದ್ದಾನೆ. ಎರಡನೆಯದಾಗಿ ಆ ಯುವತಿ ತನ್ನ ಜೊತೆ ಸಂಪರ್ಕದಲ್ಲಿದ್ದಾಳೆ ಎಂದು ಹೇಳಿದ್ದಾನೆ. ಮೂರನೆಯದಾಗಿ ನೋಟಿಸ್ ತಲುಪಿದೆ ಎದು ನರೇಶ್ ಗೌಡ ಹೇಳಿದ್ದಾನೆ.  

ಶಂಕಿತ ಹರಿಬಿಟ್ಟಿದ್ದ ವಿಡಿಯೋವನ್ನ ಪಾರ್ಸಿಂಗ್ ಟೆಕ್ನಾಲಜಿ ಮುಖಾಂತರ ಪರಿಶೀಲನೆ ನಡೆಸಿದಾಗ ಅದು ದೆಹಲಿ ಎಂದು ಗೊತ್ತಾಗಿದೆ .ಅಷ್ಟಲ್ಲದೆ ಯುವತಿ ಕೂಡ ಮೊಬೈಲ್ ಸ್ವಿಚ್ ಆನ್ ಮಾಡಿದ ಹಿನ್ನಲೆ ಆಕೆಯ ಟವರ್ ಲೊಕೇಷನ್ ಕೂಡ ದೆಹಲಿ ಎಂದು ತೋರಿಸುತ್ತಿದೆ . ಹೀಗಾಗಿ ಎಸ್ಐಟಿ  ತಂಡ ದೆಹಲಿಗೆ ತೆರಳಿ ಅವರಿದ್ದ ಜಾಗ ಮತ್ತು ಅಲ್ಲಿರುವ ಸಿಸಿಟಿವಿಗಳನ್ನ ಪರಿಶೀಲನೆ ನಡೆಸುತ್ತಿದೆ.

ಅದೇನೆ ಇರಲಿ. ಎಸ್ಐಟಿಗೆ ಮಾತ್ರ ಮೂವರು ಹಲವು ದಿನಗಳಿಂದ ಚಳ್ಳೆ ಹಣ್ಣು ತಿನ್ನಿಸಿ ಪರಾರಿಯಾಗುತ್ತಲೇ ಇದ್ದಾರೆ .ಇವರ ಬೆನ್ನಿಗಿರೋರು ಯಾರು..? ಪರಾರಿಯಾಗಲು ಯಾರ ಸಹಕಾರವನ್ನ ಪಡೆಯುತ್ತಿದ್ದಾರೆ..? ಈ ಎಲ್ಲಾ ವಿಚಾರಗಳ ಬಗ್ಗೆ  ಎಸ್ಐಟಿ ತನಿಖೆ ನಡೆಸುತ್ತಿದೆ.

LEAVE A REPLY

Please enter your comment!
Please enter your name here

- Advertisment -

Most Popular

Recent Comments