ತನ್ನನ್ನು ಹುಟ್ಟಿಸಿದ್ದು ತಪ್ಪು ಅಂತ ಅಪ್ಪ-ಅಮ್ಮನ ವಿರುದ್ಧ ಕಂಪ್ಲೇಂಟ್​ ಕೊಟ್ಟ ಮಗ..!

0
481

ಎಂಥೆಂಥಾ ವಿಚಿತ್ರ ವ್ಯಕ್ತಿಗಳು ಇರ್ತಾರೆ? ಇಲ್ಲೊಬ್ಬ ಪುಣ್ಯಾತ್ಮ ಅಪ್ಪ-ಅಮ್ಮನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾನೆ! ಕೋರ್ಟ್​ ಮೆಟ್ಟಿಲೇರಲೂ ರೆಡಿಯಾಗಿದ್ದಾನೆ.
ಇದೇನು ವಿಚಿತ್ರಾ? ಇತ್ತೀಚಿನ ದಿನಗಳಲ್ಲಿ ಮಕ್ಕಳು ಅಪ್ಪ-ಅಮ್ಮನ ವಿರುದ್ಧ ದೂರು ಕೊಡೋದು, ದೂರಾಗೋದು ಕಾಮನ್ ಆಗಿ ಬಿಟ್ಟಿದೆ ಅಂತೀರಾ..? ಹೌದು, ನೀವು ಹೇಳಿದಂತೆ ಮಕ್ಕಳು ತಮ್ಮ ಪೋಷಕರನ್ನು ದೂರ ಮಾಡೋದು, ದೂರು ನೀಡೋದು ಕಾಮನ್ನೇ..! ಆದರೆ, ಈ ಭೂಪ ಏನಂತ ಕಂಪ್ಲೇಂಟ್ ಕೊಟ್ಟಿದ್ದಾನೆ ಅನ್ನೋದನ್ನು ತಿಳಿದ್ರೆ ನೀವು ದಂಗಾಗ್ತೀರಾ..? ಇವನೆಂಥಾ ಹುಚ್ಚ ಮಾರ್ರೆ ಅಂತ ತಲೆ ಕೆರೆದು ಕೊಳ್ತೀರಾ..!
ಅಷ್ಟಕ್ಕು ಇವ್ನು ಅಪ್ಪ-ಅಮ್ಮನ ಮೇಲೆ ನೀಡಿರೋ ದೂರೇನು ಗೊತ್ತಾ..? ತನ್ನನ್ನು ಹುಟ್ಟಿಸಿದ್ದೇ ತಪ್ಪು ಅನ್ನೋದು ಈ ಭೂಪನ ವಾದ! ಈ ಮಹಾಶಯನಿಗೆ ಜನ್ಮ ನೀಡಿದ ತಪ್ಪಿಗೆ ಅಪ್ಪ-ಅಮ್ಮ ಕೋರ್ಟ್​ ಮೆಟ್ಟಿಲೇರಬೇಕಿದೆ…ಪೊಲೀಸರ ಮುಂದೆ ಕೈಕಟ್ಟಿಕೊಂಡು ವಿಚಾರಣೆಗೆ ಒಳಗಾಗಬೇಕಿದೆ!
ತನ್ನ ಅನುಮತಿ ಇಲ್ದೇ ತನ್ನುನ್ನು ಹುಟ್ಟಿಸಿದ್ದೇ ತಪ್ಪು ಅಂತ ಪೋಷಕರ ವಿರುದ್ಧ ಪೊಲೀಸ್​ ಸ್ಟೇಷನ್ ಮೆಟ್ಟಿಲೇರಿರೋ ವ್ಯಕ್ತಿಯ ಹೆಸರು ರಫೇಲ್ ಸ್ಯಾಮ್ಯುಯಲ್ ಅಂತ! ಇವನಿಗೀಗ 27 ವರ್ಷ. ‘ತನ್ನ ಅಪ್ಪ-ಅಮ್ಮ ನನ್ನ ಅನುಮತಿ ಇಲ್ದೇ ನನಗೆ ಜನ್ಮ ನೀಡಿದ್ದಾರೆ ಎಂದು ಮುಂಬೈ ಪೊಲೀಸರಿಗೆ ದೂರು ಕೊಟ್ಟಿದ್ದಾನೆ. ನ್ಯಾಯಾಲಯದಲ್ಲಿ ಈ ಬಗ್ಗೆ ಕಾನೂನು ಹೋರಟಕ್ಕೂ ಸಿದ್ಧನಾಗಿದ್ದಾನೆ.
ಇನ್ನು ಈ ಆಸಾಮಿ ಫೇಸ್​ ಬುಕ್​ನಲ್ಲೂ ಈ ಬಗ್ಗೆ ಗೀಚಿಕೊಂಡಿದ್ದಾನೆ. ”ನಾನು ಅಪ್ಪ-ಅಮ್ಮನ್ನು ಬಹಳ ಪ್ರೀತಿಸ್ತೀನಿ. ಆದ್ರೆ, ಅವ್ರು ನನ್ನನ್ನು ಹುಟ್ಟಿಸಿದ್ದು ಅವರಿಗೋಸ್ಕರ! ಅವ್ರ ಖುಷಿಗಾಗಿ ನಾನು ಹುಟ್ಟಿದಂತಾಗಿದೆ! ಅವ್ರು ಹುಟ್ಟಿಸಿದ್ದರಿಂದಲೇ ನಾನು ಕೆಲಸ ಮಾಡ್ಬೇಕಾಗಿದೆ. ಇಲ್ದೇ ಇದ್ದಿದ್ರೆ ನಾನು ಕಷ್ಟಪಡಲೇ ಬೇಕಿರ್ಲಿಲ್ಲ” ಅಂದಿದ್ದಾನೆ.
ಜನ ಲೈಂಗಿಕ ಬಯಕೆಯನ್ನು ಪೂರೈಸಿಕೊಳ್ಳಲು ಮಗು ಮಾಡಿಕೊಳ್ತಾರೆ. ಅವರಿಗೆ ಬೇಕು ಅಂತ ಮಗುವಿಗೆ ಜನ್ಮ ನೀಡ್ತಾರೆ. ಆದ್ರೆ, ಸರಿಯಾಗಿ ಬೆಳೆಸಲು ಸಾಧ್ಯವಾಗದೇ ಇರುವಾಗ ಆ ಮಗು ಕಷ್ಟಪಡ್ಬೇಕಾಗುತ್ತೆ ಅನ್ನೋದು ಈ ರಫೇಲ್ ಅಸಂಬದ್ಧ ವಾದ.

The mother speaks!I'm Raphael's mother and this is my response to the recent upheaval my son has created :1. I must…

Posted by Raphael Samuel on Tuesday, February 5, 2019

LEAVE A REPLY

Please enter your comment!
Please enter your name here