ಅರೆ…ನಾಯಿಗೂ ಹೆಲ್ಮೆಟ್ ಕಡ್ಡಾಯ ಮಾಡಿದ್ರಾ?

0
420

ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಹೆಲ್ಮೆಟ್ ಧರಿಸಿರೋ ನಾಯಿಯೊಂದರ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ಫೋಟೋ ನೋಡಿದ್ರೆ ಕೆಲವರು.. ಅರೆ, ನಾಯಿಗೂ ಹೆಲ್ಮೆಟ್ ಕಡ್ಡಾಯ ಮಾಡಿದ್ರಾ ಅಂತ ಮೂಗಿನ ಮೇಲೆ ಬೆರಳಿಟ್ಟು ಕೊಂಡ್ರೂ ಅಚ್ಚರಿ ಇಲ್ಲ.
ಹೌದು ನಾಯಿಯೊಂದು ಹೆಲ್ಮೆಟ್ ಧರಿಸಿರುವ ದೃಶ್ಯ ಸೆರೆ ಸಿಕ್ಕಿದ್ದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ. ಮಾಲೀಕರು ನಾಯಿಯ ತಲೆಗೆ ಹೆಲ್ಮೆಟ್ ಹಾಕಿ ಬೈಕಿನಲ್ಲಿ ಹಿಂಬದಿ ಕೂರಿಸಿಕೊಂಡು ಹೋಗುತ್ತಿರುವುದನ್ನು ವ್ಯಕ್ತಿಯೊಬ್ಬರು ಫೋಟೋ ಕ್ಲಿಕ್ಕಿಸಿ ಟ್ವಿಟರಲ್ಲಿ ಹಂಚಿಕೊಂಡಿದ್ದಾರೆ. ಹೆಲ್ಮೆಟ್​ ಹಾಕಿಕೊಂಡ ನಾಯಿ ಆರಾಮಾಗಿ ಬೈಕಲ್ಲಿ ಕುಳಿತ ಪರಿಗೆ ಜನ ಫಿದಾ ಆಗಿದ್ದಾರೆ.
ಈ ಫೋಟೋವನ್ನು ದೆಹಲಿ ಟ್ರಾಫಿಕ್ ಪೊಲೀಸರು ಹೆಲ್ಮೆಟ್​ ಅಭಿಯಾನಕ್ಕೆ ಬಳಸಿಕೊಳ್ಳಬೇಕು ಅಂತ ಒಂದಿಷ್ಟು ಮಂದಿ ಕಮೆಂಟ್ ಮಾಡಿದ್ದಾರೆ. ಮತ್ತೊಂದಿಷ್ಟು ಜನ, ದೆಹಲಿ ಪೊಲೀಸರ ಭಯ ಹೇಗಿದೆ ನೋಡಿ ಅಂತ ತಮಾಷೆ ಮಾಡಿದ್ದಾರೆ. ಒಟ್ನಲ್ಲಿ ಹೆಲ್ಮೆಟ್ ಧರಿಸಿ ಟ್ರಾಫಿಕ್ ರೂಲ್ಸ್ ಫಾಲೋ ಮಾಡ್ತೀನಿ ಅಂತಿರೋ ನಾಯಿ ಬಗ್ಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. 

LEAVE A REPLY

Please enter your comment!
Please enter your name here