Update ಬೆಂಗಳೂರು: ನೈಟ್ ಕರ್ಪ್ಯೂ ಜಾರಿ ಹಾಗೂ ಶಾಲೆ ಪುನಾರಂಭ ಸೇರಿದಂತೆ ಹಲವು ಮಹತ್ವದ ವಿಷಯಗಳ ಬಗ್ಗೆ ತೀರ್ಮಾನ ಮಾಡುತ್ತೇವೆ. ಸಿಎಂ ಜೊತೆ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಆರೋಗ್ಯ ಸಚಿವ ಸುಧಾಕರ ಹೇಳಿದ್ದಾರೆ.
ಹೊಸ ವೈರಸ್ ಬಗ್ಗೆ ತಜ್ಞರ ಜೊತೆ ಮಾತಡಿದ್ದೀನಿ. ಮೊದಲು ನಿರ್ಧರಿಸಿದಂತೆ ಜನವರಿ 1ರಿಂದ ಶಾಲೆ ಪ್ರಾರಂಭ ಮಾಡಲಾಗುತ್ತದೆ ಎಂದು ಬೆಂಗಳೂರಿನಲ್ಲಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.
ರೂಪಾಂತರ ಕೊರೋನಾದ ಬಗ್ಗೆ ಯಾರು ಆತಂಕ ಪಡುವ ಅಗತ್ಯ ಇಲ್ಲ. ಇದುವರೆಗೂ ಆ ಕೊರೋನಾ ರಾಜ್ಯದಲ್ಲಿ ಪತ್ತೆಯಾಗಿಲ್ಲ ಈಗಾಗಲೇ ಬ್ರಿಟನ್ ನಿಂದ ಬಂದವರ ತಪಾಸಣೆ ಮಾಡಲಾಗಿದೆ. ಅವರಲ್ಲಿ ಎಲ್ಲಿಯೂ ಈ ವೈರಸ್ ಪತ್ತೆಯಾಗಿಲ್ಲ ಸರ್ಕಾರ ಕೂಡ ಮುಂಜಾಗ್ರತಾ ಕ್ರಮ ವಹಿಸಿದೆ. ಹೈ ಸ್ಪೀಡ್ ಕೊರೋನಾ ಹರಡದ ರೀತಿ ಬಿಗಿ ಕ್ರಮ ಮಾಡ್ತಿದೆ. ಹೀಗಾಗಿ ಸಾರ್ವಜನಿಕರು ಭಯ ಪಡುವ ಅಗತ್ಯತೆ ಇಲ್ಲ ವಿಧಾನಸೌಧಕ್ಕೆ ತೆರಳಿದ ಆರೋಗ್ಯ ಸಚಿವ ಕೆ ಸುಧಾಕರ್ ತಾಂತ್ರಿಕ ಸಲಹಾ ಸಮಿತಿ ಸದಸ್ಯರ ಜೊತೆ ಸಭೆಗೆ ತೆರಳಿದ ಸುಧಾಕರ್ ಅಲ್ಲಿ ಚರ್ಚೆ ನಂತರ ಸಿಎಂ ಭೇಟಿಯಾಗಲಿರುವ ಸುಧಾಕರ್.
ನೈಟ್ ಕರ್ಪ್ಯೂ ಹಾಗೂ ಶಾಲೆ ಆರಂಭದ ಬಗ್ಗೆ ತಾಂತ್ರಿಕ ಸಲಹಾ ಸಮಿತಿ ಸದಸ್ಯರಿಂದ ಸಲಹೆ ಪಡೆದು ಆ ನಂತರ ಸಿಎಂ ಜೊತೆ ಚರ್ಚೆ ಆ ಬಳಿಕ ಈ ಬಗ್ಗೆ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದರು.