Home ಸಿನಿ ಪವರ್ ಮೂವಿ ಮಾಫಿಯಾದ ಕರಾಳಮುಖ ಬಿಚ್ಚಿಟ್ಟ  ಎ.ಆರ್ ರೆಹಮಾನ್ ..! ಸಂಗೀತ ದಿಗ್ಗಜನ  ವಿರುದ್ಧ ಪಿತೂರಿ ನಡೆಸ್ತಿರೋರು...

ಮೂವಿ ಮಾಫಿಯಾದ ಕರಾಳಮುಖ ಬಿಚ್ಚಿಟ್ಟ  ಎ.ಆರ್ ರೆಹಮಾನ್ ..! ಸಂಗೀತ ದಿಗ್ಗಜನ  ವಿರುದ್ಧ ಪಿತೂರಿ ನಡೆಸ್ತಿರೋರು ಯಾರು?

ಯುವ ನಟ ಸುಶಾಂತ್ ಸಿಂಗ್ ಸಾವಿನ ನಂತ್ರ ಬಾಲಿವುಡ್​ನ ಒಂದೊಂದೇ ಹುಳುಕುಗಳು ಹೊರ ಬರ್ತಿವೆ.  ಬೂದಿ ಮುಚ್ಚಿದ ಕೆಂಡದಂತಿದ್ದ ಹಿಂದಿ ಚಿತ್ರರಂಗದ ರಹಸ್ಯಗಳು ಸುಶಾಂತ್ ನಿಧನದ ಬಳಿಕ ಸ್ಫೋಟಿಸುತ್ತಿವೆ. ಒಬ್ಬೊಬ್ಬರೇ  ಬಾಲಿವುಡ್​ನ ಕಹಿ ಸತ್ಯಗಳನ್ನು ಹೇಳುತ್ತಿದ್ದಾರೆ. ಇದೀಗ ಸಂಗೀತ ದಿಗ್ಗಜ ಎ.ಆರ್ ರೆಹಮಾನ್ ಕೂಡ ಆ ಬಗ್ಗೆ ಮೌನ ಮುರಿದಿದ್ದಾರೆ! ಹೊಸಬರ ಕಥೆ ಬದಿಗಿರಲಿ.. ಎ.ಆರ್ ರೆಹಮಾನ್ ಅವರಂಥವರಿಗೇ ತೊಂದರೆಯಾಗಿದೆ ಅಂದ್ರೆ ಲೆಕ್ಕಹಾಕಿ  ಮೂವಿ ಮಾಫಿಯಾದ ಕರಾಳತೆ ಹೇಗಿರಬೇಡ ಅಂತ!

ಹೌದು ಎ.ಆರ್ ರೆಹಮಾನ್ …  ಒಂದ್ ಕಾಲ್ದಲ್ಲಿ ಬಾಲಿವುಡ್​ನ ಸ್ಟಾರ್​ ನಟರ ಮೂವಿಗಳಿಗೆ ಮ್ಯೂಸಿಕ್ ಡೈರೆಕ್ಟರ್ ಆಗಿರ್ತಿದ್ರು. ಆದ್ರೆ ಅದ್ಯಾಕೋ ಇತ್ತೀಚಿಗೆ ಅಲ್ಲಿ ಅವರಿಗೆ ಅವಕಾಶಗಳು ಹೆಚ್ಚಾಗಿ ಸಿಗ್ತಿಲ್ಲ. ಅದಕ್ಕಾಗಿ ಅವ್ರು ತಮಿಳು ಸಿನಿಮಾಗಳ ಕಡೆ ಹೆಚ್ಚಿನ ಗಮನ ಕೊಟ್ಟಿದ್ದಾರೆ. ರೆಹಮಾನ್​ ಅವರಿಗೆ ಬಾಲಿವುಡ್​​ನಲ್ಲಿ ಅವಕಾಶಗಳು ಕಮ್ಮಿ ಆಗ್ತಿರೋದಕ್ಕೆ ಅಲ್ಲಿನ ಮೂವಿ ಮಾಫಿಯಾ, ಸ್ವಜನ ಪಕ್ಷಪಾತವೇ ಕಾರಣವಂತೆ!

ಇಂತಹದ್ದೊಂದು ಗಂಭೀರ ಆರೋಪವನ್ನು ಬೇರೆ ಯಾರೋ ಮಾಡಿರೋದಲ್ಲ. ಸ್ವತಃ ರೆಹಮಾನ್ ಈ ಬಗ್ಗೆ ಮಾತಾಡಿದ್ದಾರೆ. ಒಳ್ಳೆಯ ಸಿನಿಮಾಗಳ ಆಫರ್​ಗಳನ್ನು ನಾನು ಯಾವತ್ತು ಕೂಡ ತಿರಸ್ಕರಿಸಿರಲಿಲ್ಲ. ಆದ್ರೆ ಕೆಲವು ತಪ್ಪು ತಿಳುವಳಿಕೆಗಳಿಂದ ಒಂದು ಗುಂಪು ನನ್ ಮೇಲೆ ಇಲ್ಲ ಸಲ್ಲದ ಅಪವಾದ ಹೊರಿಸ್ತಿದೆ. ನಂಗೆ ಅವ್ರುಗಳಿಂದ ತೊಂದ್ರೆ ಆಗ್ತಿದೆ . ಬಾಲಿವುಡ್​ನಲ್ಲಿ ನಂಗೆ ಒಳ್ಳೆಯ ಸಿನಿಮಾಗಳ ಅವಕಾಶ ಯಾಕೆ ಸಿಗ್ತಿಲ್ಲ ಅನ್ನೋದು ಈಗ ಅರ್ಥವಾಗಿದೆ ಅಂತ ರೆಹಮಾನ್ ಹೇಳಿಕೊಂಡಿದ್ದಾರೆ.

ನನ್ನ ಮೇಲೆ ಪಿತೂರಿ ನಡೀತಾ ಇದೆ ಅನ್ನೋದು ಗಮನಕ್ಕೆ ಬಂದಿದೆ. ಜನ ನನ್ನನ್ನು ಬಯಸ್ತಿದ್ದಾರೆ. ಆದ್ರೆ ಕೆಲವರು ಅಡ್ಡಗಾಲು ಹಾಕ್ತಿದ್ದಾರೆ. ಎಲ್ಲಾ ಕೂಡ ದೇವ್ರಿಂದಲೇ ಆಗ್ತಿದೆ ಅಂತ ನಂಬಿದವ್ನು ನಾನು. ಒಳ್ಳೆಯ ಸಿನಿಮಾ ಮಾಡಿ ಎಲ್ಲರನ್ನು ಬರಮಾಡಿಕೊಳ್ತೀನಿ ಅಂದಿದ್ದಾರೆ.

ಸುಶಾಂತ್ ಸಿಂಗ್ ರಜಪೂತ್​​ ಅಭಿನಯದ ಕೊನೇ ಸಿನಿಮಾ ದಿಲ್​​​ ಬೇಚಾರಾ ಸಿನಿಮಾಕ್ಕೆ ಸಂಗೀತ ನೀಡಿರುವುದು ರೆಹಮಾನ್. ಈ ಸಿನಿಮಾ ಬಗ್ಗೆ ಮಾತಾಡೋ ಟೈಮಲ್ಲಿ ತಮ್ಮ ನೋವನ್ನು ತೋಡಿಕೊಂಡಿದ್ದಾರೆ. ದಿಲ್ ಬೇಚಾರಾ ಡೈರೆಕ್ಟರ್ ಮುಕೇಶ್​ ಛಾಬ್ರಾ ಅವ್ರಿಗೂ ಅನೇಕರು ರೆಹಮಾನ್ ಜೊತೆ ಕೆಲಸ ಮಾಡ್ಬೇಡಿ ಅಂತ ಏನೇನೋ ಹೇಳಿದ್ರಂತೆ. ಮುಕೇಶ್ ಛಾಬ್ರಾ ಅವ್ರಿಂದ ಈ ವಿಷ್ಯ ತಿಳಿದ್ಮೇಲೆಯೇ ರೆಹಮಾನ್​ಗೆ ಎಲ್ಲಾ ಅರ್ಥವಾಗಿದ್ದಂತೆ!

 

LEAVE A REPLY

Please enter your comment!
Please enter your name here

- Advertisment -

Most Popular

5 ವರ್ಷದ ಬಾಲಕಿ ಕಾಣೆ

ಬೆಂಗಳೂರು : ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ 5 ವರ್ಷದ ಬಾಲಕಿ ಕಾಣೆಯಾಗಿದ್ದಾಳೆ. ಲೋಕಿತ ಕೆ.ಮರನ್ ಕಾಣೆಯಾಗಿರುವ ಬಾಲಕಿ‌. ಈಕೆ ತನ್ನ ತಾತನ ಜೊತೆ ಸೆ.18 ರಂದು ಮನೆಯಿಂದ ತೆರಳಿದ್ದಳು. ಮೆಜೆಸ್ಟಿಕ್ ನಿಲ್ದಾಣದಲ್ಲಿ...

ಅಕ್ಕ ಗೌರಿ ಲಂಕೇಶ್​ರನ್ನು ನೆನೆದು ಕಣ್ಣೀರಿಟ್ಟ ಇಂದ್ರಜಿತ್ ಲಂಕೇಶ್..!

ಬೆಂಗಳೂರು : ಸ್ಯಾಂಡಲ್​​ವುಡ್​ ಡ್ರಗ್ಸ್​ ಮಾಫಿಯಾ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಸಿಸಿಬಿ ವಿಚಾರಣೆ ಎದುರಿಸಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಇಂದು ಮತ್ತೊಮ್ಮೆ ಸಿಸಿಬಿ ಅಧಿಕಾರಿಗಳ ಮುಂದೆ ಹಾಜರಾಗುತ್ತಿದ್ದಾರೆ.  ಇಂದು ಸಿಸಿಬಿ ವಿಚಾರಣೆಗೆ ಹೋಗುವ...

ಸ್ಯಾಂಡಲ್​​ವುಡ್​​​​​ನಲ್ಲಿ ಡ್ರಗ್​ ಮಾಫಿಯಾ : ಇಂದು ಸಿಸಿಬಿಯಿಂದ ನಟಿ ರಾಗಿಣಿ ವಿಚಾರಣೆ

ಬೆಂಗಳೂರು :  ಸ್ಯಾಂಡಲ್​​​​ವುಡ್​​ನಲ್ಲಿ ಡ್ರಗ್​​ ಮಾಫಿಯಾದ ಬಗ್ಗೆ ಬಿಸಿಬಿಸಿ ಚರ್ಚೆ ನಡೀತಾ ಇದೆ. ಚಂದನವನಕ್ಕೆ ಮಾದಕ ಜಾಲ ಹಬ್ಬಿದೆಯೇ ಅಥವಾ ಇಲ್ಲವೇ ಅನ್ನೋದು ಸದ್ಯದ ಗಾಂಧಿನಗರದ ಹಾಟ್ ಸುದ್ದಿ. ಇದಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ...

ಕೊರೋನಾದಿಂದ ಮಾಜಿ ಶಾಸಕ ಅಪ್ಪಾಜಿ ಗೌಡ ನಿಧನ

ಶಿವಮೊಗ್ಗ : ಭದ್ರಾವತಿಯ ಜೆಡಿಎಸ್ ನ ಮಾಜಿ ಶಾಸಕ ಅಪ್ಪಾಜಿಗೌಡ ವಿಧಿವಶರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಕೊರೋನಾ ಸೋಂಕಿಗೆ ಒಳಗಾಗಿದ್ದ ಅವರು,  ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಅಪ್ಪಾಜಿಗೌಡರಿಗೆ 69 ವರ್ಷ ವಯಸ್ಸಾಗಿತ್ತು. ಪತ್ನಿ...

Recent Comments