ಬೆಂಗಳೂರು: ಡ್ರಗ್ಸ್ ಜಾಲದ ಹಿಂದೆ ದೊಡ್ಡ ಕುಳಗಳಿವೆ ಎಂದು ಇಂದ್ರಜಿತ್ ಲಂಕೇಶ್ ಕಮೀಷನರ್ ಕಚೇರಿ ಬಳಿ ಹೇಳಿದ್ದಾರೆ.
ಡ್ರಗ್ಸ್ ಜಾಲದಲ್ಲಿ ಸಣ್ಣ ಸಣ್ಣ ಮೀನು ಹಿಡಿದಿದ್ದಾರೆ. ಡೊಡ್ಡವರನ್ನು ಹಿಡಿಯಬೇಕು ಎಂದಿದ್ದಾರೆ. ಡಿಸಿಪಿ ಬಸವರಾಜ್ ಅಂಗಡಿ ವಿಚಾರಣೆಗೆ ಕರೆದಿದ್ದರೂ ಅದಕ್ಕೆ ಕಚೇರಿ ಬಳಿ ಬಂದಿದ್ದೇನೆ ಎಂದು ಹೇಳಿದ್ದಾರೆ. ತನಿಖೆಗೆ ಕಳೆದ ಆರು ತಿಂಗಳಿನಿಂದ ಸಹಕಾರವನ್ನು ನೀಡಿದ್ದೇನೆ. ಕೋಟ್ಯಾಂತರ ಮೌಲ್ಯದ ಮಾದಕ ವಸ್ತು ವಶಕ್ಕೆ ಪಡೆದಿದ್ದಾರೆ. ಸೆಷನ್ ನಲ್ಲಿ ಪ್ರಸ್ತಾಪ ಮಾಡಿ ಅಂತ ಮನವಿ ಮಾಡಿಕೊಳ್ಳುವೆ. ವಿರೋಧ ಪಕ್ಷದವರಿಗೂ ಕೇಳಿ ಕೋಳ್ತಿನಿ, ಇದು ಅಂತ್ಯವಾಗಬೇಕು. ನಾನು ಒಬ್ಬ ನಿರ್ದೇಶಕನಾಗಿ, ಸಾಮಾನ್ಯ ವ್ಯಕ್ತಿಯಾಗಿ ಬೇಡಿಕೋಳ್ತಿನಿ ಎಂದು ಇಂದ್ರಜಿತ್ ಹೇಳಿದ್ದಾರೆ.