Saturday, May 28, 2022
Powertv Logo
Homeರಾಜ್ಯಯುವತಿ ಮೇಲೆ ಮನ ಬಂದಂತೆ ಹಲ್ಲೆ ಮಾಡಿದ ನೀಚ

ಯುವತಿ ಮೇಲೆ ಮನ ಬಂದಂತೆ ಹಲ್ಲೆ ಮಾಡಿದ ನೀಚ

ಹಾವೇರಿ : ಡ್ರಿಪ್ ಪೈಪ್ ಮೂಲಕ ಮನಬಂದಂತೆ ಹಲ್ಲೆ ಮಾಡಿದ ಘಟನೆ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಅಕ್ಕಿ ಆಲೂರು ಗ್ರಾಮದಲ್ಲಿ ನಡೆದಿದೆ.

ಮನೆ ಗೋಡೆ ನಿರ್ಮಾಣ , ಮನೆ ಜಾಗದ ವಿಚಾರದಲ್ಲಿ ಎರಡೂ ಫ್ಯಾಮಿಲಿ ಮದ್ಯೆ ಮನಸ್ತಾಪ ಇದಿದ್ದು, ಈ ವೇಳೆ ಹೊಸ ಮನೆ ಪೈಪ್ ಲೈನ್ ಹಾಳು ಮಾಡುತ್ತಿದ್ದ ನೆರೆ ಮನೆಯವರು ಹೀಗಾಗಿ ಯುವತಿ ಮಮತಾ ಇದನ್ನು ಪ್ರಶ್ನಿಸಿ ವಿಡಿಯೋ ಮಾಡೋ ಸಂದರ್ಭದಲ್ಲಿಯೇ ಬಸವರಾಜ ಮೂಡೂರು  ಡ್ರಿಪ್ ಪೈಪ್ ಮೂಲಕ ಮನಬಂದಂತೆ ಹಲ್ಲೆ ಮಾಡಿದ್ದಾನೆ. ಅಲ್ಲದೇ ಯುವತಿ ಮಮತಾ ಚಿಕ್ಕಪ್ಪ ವೀರನಗೌಡ್ರ ಮೇಲೂ ಬಸವರಾಜ ಮೂಡೂರು ಕುಟುಂಬಸ್ಥರು ಹಲ್ಲೆ ಮಾಡಿದ್ದಾರೆ. ಈ ಬಗ್ಗೆ ಹಾನಗಲ್ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisment -

Most Popular

Recent Comments