Monday, January 17, 2022
Powertv Logo
Homeಜೀವನ ಶೈಲಿವಿಶ್ವದ ದುಬಾರಿ ನಗರ ಟೆಲ್ ಅವಿವ್!

ವಿಶ್ವದ ದುಬಾರಿ ನಗರ ಟೆಲ್ ಅವಿವ್!

ಇಸ್ರೇಲ್:  ವಿಶ್ವದ ಅತ್ಯಂತ ದುಬಾರಿ ನಗರ ಯಾವುದು ಗೊತ್ತ? ಮೊನ್ನೆ ಮೊನ್ನೆ ತಾನೆ ಪ್ಯಾಲಿಸ್ಟೈನ್ ಜೊತೆ ಯುದ್ಧ ಮಾಡಿ ಬಸವಳಿದಿರುವ ಇರಾನಿನ ರಾಜಧಾನಿ ಟೆಲ್ ಅವಿವ್! ಹೌದು, ಈ ಅಚ್ಚರಿಯ ವಿಷಯವನ್ನು ಎಕನಾಮಿಸ್ಟ್ ಇಂಟಲಿಜೆನ್ಸ್ ಯುನಿಟ್ ನಡೆಸಿದ ಸಮೀಕ್ಷೆಯಲ್ಲಿ ತಿಳಿದುಬಂದಿದೆ. ಜಗತ್ತಿನಾದ್ಯಂತ ಏರುತ್ತಿರುವ ಹಣದುಬ್ಬರ ಮತ್ತು ಪೂರೈಕೆಯಲ್ಲಾಗುತ್ತಿರುವ ಸಮಸ್ಯೆಗಳು ಜಾಗತಿಕವಾಗಿ ಬೆಲೆಯನ್ನು ಹೆಚ್ಚಿಸಿರುವುದರಿಂದ ಟೆಲ್ ಅವಿವ್ ವಾಸಿಸಲು ವಿಶ್ವದ ಅತ್ಯಂತ ದುಬಾರಿ ನಗರ ಎಂದು ಹೆಸರಿಸಲಾಗಿದೆ.

ಕಳೆದ ವರ್ಷ ಐದನೆಯ ಸ್ಥಾನದಲ್ಲಿದ್ದ ಟೆಲ್ ಅವಿವ್ ನಗರವು ಈ ಬಾರಿ ಪ್ಯಾರಿಸ್ ಹಾಗೂ ಸಿಂಗಾಪೂರ್ ನಗರಗಳನ್ನು ಜಂಟಿಯಾಗಿ ಎರಡನೆ ಸ್ಥಾನಕ್ಕೆ ತಳ್ಳಿ ಮೊದಲನೆ ಸ್ಥಾನ ಪಡೆದುಕೊಂಡಿದೆ.  ಇದಕ್ಕೆ ವಿರುದ್ಧವಾಗಿ ಯುದ್ಧದಿಂಗಾಗಿ ಹಾನಿಗೊಳಗಾಗಿರುವ ಸಿರಿಯಾದ ಡೆಮಾಸ್ಕಸ್ ನಗರವು ತನ್ನ  ಸ್ಥಾನವನ್ನು ವಿಶ್ವದಲ್ಲೇ ಅಗ್ಗವಾಗಿ ಉಳಿಸಿಕೊಂಡಿದೆ. ಈ ಸಮೀಕ್ಷೆಯನ್ನು 173 ನಗರಗಳಲ್ಲಿನ ಸರಕು ಮತ್ತು ಸೇವೆಯನ್ನು ಆಧರಿಸಿ ಕೈಗೊಳ್ಳಲಾಗಿದೆ. ಟೆಲ್ ಅವಿವ್ ದುಬಾರಿ ನಗರ ಎನಿಸಿಕೊಳ್ಳಲು ಕಾರಣ ಇಸ್ರೇಲಿನ ಕರೆನ್ಸಿ ಶೆಕೆಲ್ ಅಮೇರಿಕದ ಡಾಲರ್ ಎದುರು ತನ್ನ ಮೌಲ್ಯವನ್ನು ಅತ್ಯಂತ ಹೆಚ್ಚಿಸಿಕೊಂಡಿರುವುದು.

ಈ ಸಮೀಕ್ಷೆಯು ಟೆಲ್ ಅವಿವ್ ಮಧ್ಯ ಮತ್ತು ಸಾರಿಗೆಗೆ ಎರಡನೆ ದುಬಾರಿ ನಗರವಾಗಿದೆ ಎಂದು ತಿಳಿಸಿದೆ. ವೈಯುಕ್ತಿಕ ಆರೈಕೆ ವಸ್ತುಗಳಿಗೆ ಐದನೆ ಮತ್ತು ಮನರಂಜನೆಗೆ ಆರನೆ ಸ್ಥಾನದಲ್ಲಿ ಟೆಲ್ ಅವಿವ್ ಇದೆ ಎಂದು ಈ ಸಮೀಕ್ಷೆ ಪ್ರಕಟಿಸಿದೆ.

3 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments