ರಾಜಕುಮಾರನ ರೆಕಾರ್ಡ್ ಬ್ರೇಕ್ ಮಾಡಿದ ದಿ ವಿಲನ್….!

0
298

ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್ ಕುಮಾರ್ ಮತ್ತು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ‘ದಿ ವಿಲನ್ ‘ ಪವರ್ ಸ್ಟಾರ್  ಪುನೀತ್ ರಾಜ್ ಕುಮಾರ್ ನಟನೆಯ ‘ರಾಜಕುಮಾರ’ ಸಿನಿಮಾದ ರೆಕಾರ್ಡ್ ಬ್ರೇಕ್ ಮಾಡಿದೆ.‌

ಜೋಗಿ ಪ್ರೇಮ್ ನಿರ್ದೇಶನದ ‘ದಿ ವಿಲನ್’  ನಿರೀಕ್ಷಿತ ಯಶಸ್ಸನ್ನು ಪಡೆದಿದ್ದು,‌ ಮೊದಲ ದಿನವೇ ಭರ್ಜರಿ ಕಲೆಕ್ಷನ್ ಮಾಡಿದೆ. ವಿಶ್ವದಾದ್ಯಂತ ‘ದಿ ವಿಲನ್ ‘ ಅಬ್ಬರ ಜೋರಾಗಿದೆ. 2017 ರಲ್ಲಿ ತೆರೆಕಂಡ ಸಂತೋಷ್ ಆನಂದ ರಾಮ್ ನಿರ್ದೇಶನದ ರಾಜಕುಮಾರ ಮೊದಲ ದಿನ ಬರೋಬ್ಬರಿ 12 ಕೋಟಿ ಕಲೆಕ್ಷನ್ ಮಾಡಿ ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡಿತ್ತು. ಇದೀಗ ‘ದಿ ವಿಲನ್’ ರಾಜಕುಮಾರನ ಈ ರೆಕಾರ್ಡ್ ಬ್ರೇಕ್ ಮಾಡಿದೆ. ದಿ ವಿಲನ್ ನ ಕಲೆಕ್ಷನ್ 20.5ಕೋಟಿ ರೂ.

ಮಾಸ್ ಲುಕ್ ನಲ್ಲಿ ಶಿವಣ್ಣ ಮತ್ತು‌ ಕಿಚ್ಚ ಮಿಂಚಿದ್ದಾರೆ. ನಾಯಕಿಯಾಗಿ ಆಮಿಜಾಕ್ಷನ್ ಇಷ್ಟವಾಗುತ್ತಾರೆ.  ಸುದೀಪ್ ಮತ್ತು ಶಿವಣ್ಣ ಅವರನ್ನು ಒಂದೇ ಸ್ಕ್ರೀನ್ ನಲ್ಲಿ ತಂದು ಎರಡೂ ಪಾತ್ರಗಳಿಗೂ ಸಮಾನ ತೂಕ ನೀಡಿದ್ದಾರೆ ಪ್ರೇಮ್.

ಮೊದಲ ದಿನವೇ ದಾಖಲೆ ನಿರ್ಮಿಸಿರುವ ದಿ ವಿಲನ್ ಇನ್ನೂ ಹತ್ತಾರು ರೆಕಾರ್ಡ್ ಗಳನ್ನು ತನ್ನ ಹೆಸರಿಗೆ ಬರೆಸಿಕೊಳ್ಳುವುದಲ್ಲಿ ಅನುಮಾನವೇ ಇಲ್ಲ. ಪ್ರೇಮ್, ಶಿವಣ್ಣ, ಸುದೀಪ್ ಕಾಂಬಿನೇಷನ್ ಇನ್ನೂ ಏನೆಲ್ಲಾ ದಾಖಲೆ ಬರೆಯುತ್ತೆ ಅಂತ ಕಾದುನೋಡೋಣ.

-ಅರ್ಚನ ಗಂಗೊಳ್ಳಿ, ಸಿನಿಮಾ ಬ್ಯೂರೋ

LEAVE A REPLY

Please enter your comment!
Please enter your name here