Thursday, August 18, 2022
Powertv Logo
HomePower Specialಸಾಲ ತೀರಿಸೋದಕ್ಕೆ ಆಸ್ತಿ ಮಾರಿದ ಕುಬೇರ

ಸಾಲ ತೀರಿಸೋದಕ್ಕೆ ಆಸ್ತಿ ಮಾರಿದ ಕುಬೇರ

ಅನಿಲ್​ ಅಂಬಾನಿ.. ಈ ಹೆಸರು ಯಾರಿಗೆ ತಾನೆ ಗೊತ್ತಿಲ್ಲ ಹೇಳಿ, ಭಾರತದ ದೈತ್ಯ ಉದ್ಯಮಿಯಾಗಿ, ರಾಜ್ಯಸಭೆಯ ಸದಸ್ಯರಾಗಿ, ಹಾಗು ಸಂಸದನಾಗಿ ಸಿಕ್ಕಾಪಟ್ಟೆ ಹೆಸರು ಮಾಡಿದ್ರು ಅನಿಲ್​. ಒಂದು ಕಾಲದಲ್ಲಿ ಅನಿಲ್​ ಅಂಬಾನಿ ಯಾವುದಾದರೂ ಹೊಸ ಉದ್ಯಮ ಶುರು ಮಾಡ್ತಾರೆ ಅಂದ್ರೆ ಅಲ್ಲಿ ಬಹುದೊಡ್ಡ ಸಂಚಲನವೇ ಸೃಷ್ಟಿಯಾಗ್ತಾ ಇತ್ತು. ಜೊತೆಗೆ ಹಲವು ನಿರೀಕ್ಷೆಗಳು ಕೂಡ ಗರಿಗೆದರಿಕೊಳ್ಳೋದಕ್ಕೆ ಶುರುವಾಗ್ತಾ ಇತ್ತು. ಹೀಗಾಗಿನೇ ಅನಿಲ್​ ಅಂಬಾನಿಗೆ ಸಾಲ ಕೊಡೋದಕ್ಕೆ ಬ್ಯಾಂಕ್​ಗಳು ಮುಗಿ ಬಿಳ್ತಾ ಇದ್ವು. ಆದ್ರೆ ಇವತ್ತು ಅದೇ ಬ್ಯಾಂಕ್​ಗಳು ಅನಿಲ್​ ಅಂಬಾನಿಗೆ ಸಾಲವನ್ನ ಹಿಂತಿರುಗಿಸಲಿ ಅಂತ ಮುಗಿ ಬಿಳ್ತಾ ಇದ್ದಾವೆ.

ಹೌದು ಒಂದು ಕಾಲದಲ್ಲಿ ಉದ್ಯಮ ಜಗತ್ತಿನಲ್ಲಿ ದಿಗ್ಗಜನಾಗಿ ಮೆರೆದ ಅನಿಲ್​ ಅಂಬಾನಿ ಈಗ ಸಾಲಗಾರನಾಗಿ ತಿರುಗಾಡ್ತಾ ಇದ್ದಾರೆ. ತಾನು ದಿವಾಳಿಯಾಗಿದ್ದೀನಿ ಅಂತ ಹೇಳಿದ್ರು ಕೂಡ ಯಾವ ಬ್ಯಾಂಕುಗಳು ಕೂಡ ಅನಿಲ್​ ಅಂಬಾನಿಯನ್ನ ನಂಬೋದಕ್ಕೆ ತಯಾರಿಲ್ಲ ಇದಕ್ಕೆ ಕಾರಣ ಅನಿಲ್​ ಬಳಿ ಇರುವ ಕಂಪನಿಯ ಆಸ್ತಿ ಮೌಲ್ಯ. ಹಾಗಾಗಿ ಈ ಅನಿಲ್​ ಅಂಬಾನಿ ತಮ್ಮ ಪ್ರತಿಷ್ಠಿತ ಕಂಪನಿಗಳನ್ನೇ ಮಾರುತ್ತಾ ಇದ್ದಾರೆ. ಇದಕ್ಕೆ ಪೂರಕ ಅನ್ನೋ ಹಾಗೆ, ಅನಿಲ್​ ತಮ್ಮ ಒಡೆತನದ ರಿಲಯನ್ಸ್ ನವಲ್ ಇಂಜಿನೀಯರಿಂಗ್ ಲಿಮಿಟೆಡ್ ಕಂಪನಿಯನ್ನ ಹರಾಜು ಹಾಕಿದ್ದಾರೆ. ಈ ಕಂಪನಿಯನ್ನ ಮಂಗಳವಾರ ನಡೆದ ಹರಾಜಿನಲ್ಲಿ ಮುಂಬೈ ಮೂಲದ ಉದ್ಯಮಿ ಮತ್ತು ಹೆಜೆಲ್ ಮರ್ಕಂಟೈಲ್ ಪ್ರೈವೇಟ್ ಲಿಮಿಟೆಡ್​ನ ಪಾಲದಾರರಲ್ಲಿ ನಿಖಿಲ್ ಮರ್ಚೆಂಟ್ ಖರೀಸಿದಿಸಿದ್ದಾರೆ. ಇನ್ನು ಈ ಕಂಪನಿ ರೂ. 2,700 ಕೋಟಿಗೆ ಖರೀದಿಸಿರುವ ನಿಖಿಲ್​, ಹರಾಜು ಪ್ರಕ್ರಿಯೆಯ ಮೂರನೇ ಸುತ್ತಿನಲ್ಲಿ ಅತಿ ಹೆಚ್ಚು ಬಿಡ್ ಮಾಡಿ ಖರೀದಿಸಿದ್ದಾರೆ.

ಈ ಕಂಪನಿಯನ್ನ ಕಮಿಟಿ ಆಫ್ ಕ್ರೆಡಿಟರ್ಸ್ ಹರಾಜಿಗಿಟ್ಟಿತ್ತು, ಹರಾಜಿನಲ್ಲಿ ಪಾಲ್ಗೊಂಡಿದ್ದ ಕಂಪನಿಗಳಿಗೆ ಹೆಚ್ಚಿನ ಮೊತ್ತಕ್ಕೆ ಬಿಡ್ ಮಾಡುವುದಕ್ಕೆ ಸಂಸ್ಥೆ ಕೇಳಿಕೊಂಡಿದೆ. ಈ ಕಾರಣಕ್ಕಾಗಿ ಮೊದಲು ರೂ 2,400 ಕೋಟಿಗೆ ಹೆಜೆಲ್ ಮರ್ಕಂಟೈಲ್ ಬಿಡ್ ಮಾಡಿತ್ತು. ಬಳಿಕ ಬಿಡ್​​ಗೆ ಕೆಲ ಕಂಪನಿಗಳು ಪೈಪೋಟಿ ನೀಡಿದ್ರಿಂದ, ಹೆಜೆಲ್ ಮರ್ಕಂಟೈಲ್ ಪ್ರೈವೇಟ್ ಲಿಮಿಟೆಡ್ ಕಂಪನಿ ಬಿಡ್​ನ ಮೊತ್ತವನ್ನ 2,700 ಕೋಟಿಗೆ ಹೆಚ್ಚಿಸಿತು. ಬಳಿಕ ಅಂತಿಮವಾಗಿ RNEL ಕಂಪನಿ 2700 ಕೋಟಿಗೆ ಮಾರಟವಾಯಿತು. ಅಂದಹಾಗೆ ಈ RNEL ಕಂಪನಿಯ ಮೇಲೆ 12,429 ಕೋಟಿ ಸಾಲವಿದೆ. ಇದಕ್ಕೆ ಅತಿಹೆಚ್ಚು ಸಾಲ ನೀಡಿದ ಬಾಂಕ್​ಗಳ ಪೈಕಿ ಐಡಿಬಿಐ ಮುಂಚೂಣಿಯಲ್ಲಿದೆ. ಈ ಬ್ಯಾಂಕ್ ನೀಡಿರುವ ಸಾಲದ ಮೊತ್ತ ಎಷ್ಟು ಅನ್ನೋದರ ಬಗ್ಗೆ ನಿಖರವಾದ ಮಾಹಿತಿ ಲಭ್ಯವಿಲ್ಲ. ಆದರೆ, SBI 1,965 ಕೋಟಿ ರೂಪಾಯಿ ಮತ್ತು ಯೂನಿಯನ್ ಬ್ಯಾಂಕ್ ರೂ 1,555 ಕೋಟಿ ಸಾಲ ನೀಡಿದೆ ಅನ್ನೋದನ್ನ ಈ ಬ್ಯಾಂಕುಗಳು ಖಚಿತ ಪಡಿಸಿದೆ.

ಇನ್ನು ಬ್ಯಾಂಕ್​ಗಳ ಈ ಹೇಳಿಕೆಯಿಂದಾಗಿ ಅನಿಲ್​ ಅಂಬಾನಿ ಸಾಲದ ಮೊತ್ತದ ಬಗ್ಗೆ ಚರ್ಚೆಯಾಗ್ತಾ ಇದೆ. ಹಾಗೆ ನೋಡೋದಕ್ಕೆ ಹೋದ್ರೆ ಕಂಪನಿಯ ಅಧಿಕೃತ ವೆಬ್ಸೈಟ್ ಪ್ರಕಾರವೇ ಅನಿಲ್​ ಕಂಪನಿಗಳು 49,193 ಕೋಟಿ ರೂಪಾಯಿ ಸಾಲ ಪಾವತಿಸಬೇಕಿದೆ. ಇದರ ಜೊತೆಗೆ ರಿಲಯನ್ಸ್ ಟೆಲಿಕಾಂ 24,306.27 ಕೋಟಿ ರೂಪಾಯಿ ಹಾಗೂ ರಿಲಯನ್ಸ್ ಇನ್ಫ್ರಾಟೆಲ್ 12,687.65 ಕೋಟಿ ರೂಪಾಯಿಗಳ ಸಾಲವನ್ನು ಹೊತ್ತುಕೊಂಡಿದೆ.
ಒಟ್ಟಾರೆಯಾಗಿ ಈ ಎಲ್ಲಾ ಸಾಲವನ್ನ ಸೇರಿಸಿದರೆ 86,188 ಕೋಟಿ ರೂಪಾಯಿಗಳಾಗುತ್ತೆ. ಇನ್ನು, ಇಲ್ಲಿ ಸ್ಪೆಕ್ಟ್ರಂನ ಬಾಕಿ ಮೊತ್ತ 28,837 ಕೋಟಿ ರೂಪಾಯಿ ಸೇರಿಸಿಲ್ಲ. ಇದನ್ನ ಲೆಕ್ಕಕ್ಕೆ ತೆಗೆದುಕೊಂಡರೆ ಅನಿಲ್ ಅಂಬಾನಿ ಕಂಪನಿಗಳ ಬಾಕಿ ಮೊತ್ತ 1 ಲಕ್ಷ ಕೋಟಿ ರೂ. ದಾಟುತ್ತೆ ಅಂತ ಹೇಳಲಾಗಿದೆ.

ಸದ್ಯಕ್ಕೆ ಅನಿಲ್​ ಅಂಬಾನಿ ದುಬಾರಿ ಸಾಲದ ಹೊರೆಯನ್ನ ಹೊತ್ತಿದ್ದು,.. ಈಗ ಬಾರೀ ಸಂಕಟಕ್ಕೆ ಸಿಲುಕಿಕೊಂಡಿದ್ದಾರೆ… ಹೀಗಾಗಿ ತಮ್ಮಲ್ಲಿರುವ ಬಹುತೇಕ ಎಲ್ಲಾ ಕಂಪನಿಗಳನ್ನ ಮಾರೋದಕ್ಕೆ ಹೊರಟಿದ್ದು, ಇನ್ನಷ್ಟು ಕಂಪನಿಗಳನ್ನ ಮಾರೋದಕ್ಕೆ ಅನಿಲ್​ ಪ್ಲಾನ್​ ಮಾಡ್ಕೊಂಡಿದ್ದಾರೆ ಅಂತ ಹೇಳಲಾಗ್ತಾ ಇದೆ. ಒಟ್ಟಾರೆಯಾಗಿ ಈ ಸಾಲಗಳನ್ನ ತಿರಿಸೋದಕ್ಕೆ ಅನಿಲ್​ ಅಂಬಾನಿ ಹಲವು ಯೋಜನೆಗಳನ್ನ ರೂಪಿಸಿಕೊಂಡಿದ್ದು ಮುಂದಿನ ದಿನಗಳಲ್ಲಿ ಆ ಯೋಜನೆಗಳನ್ನ ಕಾರ್ಯ ರೂಪಕ್ಕೆ ತರುತ್ತಾರ ಅನ್ನೋದನ್ನ ಕಾದು ನೋಡಬೇಕಿದೆ.

LEAVE A REPLY

Please enter your comment!
Please enter your name here

- Advertisment -

Most Popular

Recent Comments