ಬೆಂಗಳೂರು: ದುಡ್ಡಿನ ರುಚಿ ಸಿಕ್ಕರೆ ಸಾಕು ಆತ ಏನ್ ಬೇಕಾದ್ರೂ ಮಾಡ್ತಾನೆ ಅನ್ನೋದಕ್ಕೆ ಈ ಪ್ರಕರಣ ಸಾಕ್ಷಿ. ಇಲ್ಲಿ ಸಿಕ್ಕಿಬಿದ್ದಿರುವ ಆರೋಪಿಗಳೆರೂ 21-22 ಅಸುಪಾಸಿನವರು. ಈಗ ತಾನ ಮೀಸೆ ಬರುತ್ತಿದೆ. ದರೋಡೆ ಪ್ರಕರಣದಲ್ಲಿ ನಿತೀನ್ ಗೌಡ, ಹೃತೀಕ್ ಗೌಡ, ಸುಮಂತ್ ಹಾಗು ದರ್ಶನ್ ಸಿಕ್ಕಿಬಿದ್ದಿದ್ದಾರೆ. ಇವರಿಂದ ಐದು ಲಕ್ಷ ರೂಪಾಯಿ ಮೌಲ್ಯದ ಸ್ವಿಫ್ಟ್ ಕಾರು, 18 ಗ್ರಾಂ ಚಿನ್ನದ ಸರವನ್ನ ವಶಕ್ಕೆ ಪಡೆಯಲಾಗಿದೆ.
ಸಂಪಿಗೆಹಳ್ಳಿ ಬಳಿ ಇರುವ ಶಿವರಾಮಕಾರಂತ್ ಕ್ಲಬ್ ಬಳಿ ನಡೆದ ಘಟನೆ ಇದು. ಇದೇ ತಿಂಗಳು ಒಂದನೇ ತಾರೀಕಿನಂದು ನಾಲ್ವರು ಆರೋಪಿಗಳು ಮೊದಲು ಊಬರ್ ಕ್ಯಾಬನ್ನ ಬುಕ್ ಮಾಡ್ತಾರೆ. ಕಾರು ಹತ್ತಿದ ಆರೋಪಿಗಳು ಊಬರ್ ಚಾಲಕ ಅರುಳ್ಗೆ ಚಾಕು ತೋರಿಸಿ, ಮೊಬೈಲ್, ಎಟಿಎಂ ಕಾರ್ಡ್, ಚಿನ್ನದ ಸರ
ಕದ್ದಿದ್ದು ಸಾಲದೇ ಚಾಲಕನನ್ನ ಅಲ್ಲಿಯೇ ಬಿಟ್ಟು ಸ್ವಿಫ್ಟ್ ಕಾರನೊಂದಿಗೆ ಎಸ್ಕೇಪ್ ಆಗಿದ್ದಾರೆ. ಅದೇ ಕಾರಿನಲ್ಲಿ ಚಿಕ್ಕಮಗಳೂರು, ಮಡಿಕೇರಿ ಎಂದು ಹತ್ತು ದಿನ ಟ್ರಿಪ್ ಹೋಗಿ ಎಂಜಾಯ್ ಮಾಡಿದ್ದಾರೆ. ಖದೀಮರ ಬೆನ್ನು ಬಿದ್ದ ಪೊಲೀಸರು, ಸಿಸಿಟಿವಿಗಳ ಸಹಾಯದಿಂದ ಆರೋಪಿಗಳನ್ನ ಬಂಧಿಸಿದ್ದಾರೆ.
ಇನ್ನು ಆರೋಪಿಗಳಿಗೆ ಇನ್ನೂ ಚಿಕ್ಕ ವಯಸ್ಸು ಅಷ್ಟರಲ್ಲೆ ಅಫೆನ್ಸ್ ಮಾಡೋದೆ ಲೈಫ್ ಟೈಂ ವೃತ್ತಿಯನ್ನಾಗಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೆ ಜಾಮೀನು ಪಡೆದು ಜೈಲಿಂದ ರಿಲೀಸ್ ಆಗಿದ್ದ ಆರೋಪಿಗಳು, ತಮ್ಮ ಐಷಾರಾಮಿ ಜೀವನಕ್ಕೆ ಈ ಕೃತ್ಯ ಎಸಗಿರೋದಾಗಿ ಹೇಳಿಕೊಂಡಿದ್ದಾರೆ. ಈ ಬಗ್ಗೆ ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.