ಬೆಂಗಳೂರು: ರಸ್ತೆ ದಾಟುತ್ತಿದ್ದ ನಾಯಿ ಮೇಲೆ ಕಾರು ಹತ್ತಿಸಿ ವಿಕೃತಿ ಮೆರೆದ ಘಟನೆ ನಗರದ ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಏಪ್ರಿಲ್ 19ರಂದು ಬೆಳಗ್ಗೆ 9 ಗಂಟೆ ಸುಮಾರಿಗೆ ರಸ್ತೆ ದಾಟುತ್ತಿದ್ದ ನಾಯಿ ಮೇಲೆ ಕಾರು ಹತ್ತಿಸಿ ನಿಲ್ಲಿಸಿದೆ ಹೊರಟ ಕಾರು ಚಾಲಕ ಅಪಘಾತಕ್ಕೊಳಗಾದ ನಾಯಿ ನಡು ರಸ್ತೆಯಲ್ಲೇ ವಿಲವಿಲ ಒದ್ದಾಟ ಮಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆ ಸಂಬಂಧಪಟ್ಟಂತೆ ಸತ್ಯನಾರಾಯಣ ವಿರುದ್ಧ FIR ದಾಖಲಿಸಿ ಪೊಲೀಸರು ಕಾರಿಗಾಗಿ ಪರಿಶೀಲನೆ ನಡೆಸುತ್ತಿದ್ದಾರೆ.