Sunday, May 29, 2022
Powertv Logo
Homeರಾಜ್ಯಮರಿಯುಪೋಲ್ ಪರಿಸ್ಥಿತಿ ಅತ್ಯಂತ ಗಂಭೀರ : ವೊಲೊಡಿಮಿರ್ ಝೆಲೆನ್‌ಸ್ಕಿ

ಮರಿಯುಪೋಲ್ ಪರಿಸ್ಥಿತಿ ಅತ್ಯಂತ ಗಂಭೀರ : ವೊಲೊಡಿಮಿರ್ ಝೆಲೆನ್‌ಸ್ಕಿ

ರಷ್ಯಾ ಸೇನೆ ಮುತ್ತಿಗೆ ಹಾಕಿರುವ ಬಂದರು ನಗರ ಮರಿಯುಪೋಲ್‌ ಪರಿಸ್ಥಿತಿ ಅತ್ಯಂತ ಗಂಭೀರವಾಗಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಕಳವಳ ವ್ಯಕ್ತಪಡಿಸಿದ್ದಾರೆ.

ಹಾಗೆಯೇ, ರಷ್ಯಾ ಸೇನೆ ವಿರುದ್ಧ ಹೋರಾಟ ನಡೆಸುತ್ತಿರುವ ರಕ್ಷಣಾ ಪಡೆಗಳೊಂದಿಗೆ ನಿರಂತರ ಸಂಪರ್ಕದಲ್ಲಿರುವುದಾಗಿ ತಿಳಿಸಿದ್ದಾರೆ. ಝೆಲೆನ್‌ಸ್ಕಿ, ನಗರವನ್ನು ಸಂಪೂರ್ಣ ನಾಶ ಮಾಡಲು ರಷ್ಯಾ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಆದರೆ, ಮರಿಯುಪೋಲ್‌ನಿಂದ ಉಕ್ರೇನ್‌ ಪಡೆಗಳನ್ನು ಹೊರಹಾಕಲಾಗಿದೆ ಎಂಬ ರಷ್ಯಾ ಹೇಳಿಕೆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಮರಿಯುಪೋಲ್‌ ನಗರ ಪ್ರದೇಶವನ್ನು ಉಕ್ರೇನ್ ಸೇನಾ ಪಡೆಗಳಿಂದ ಸಂಪೂರ್ಣ ವಶಕ್ಕೆ ಪಡೆದಿರುವುದಾಗಿ ರಷ್ಯಾ ಸೇನೆ ಪ್ರಕಟಿಸಿತ್ತು.ಅಜೋವ್ ಸಮುದ್ರದ ಪ್ರಮುಖ ಬಂದರು ನಗರವಾಗಿರುವ ಮರಿಯುಪೋಲ್‌ ಅತ್ಯಂತ ಕೆಟ್ಟ ಹಿಂಸಾಚಾರಕ್ಕೆ ಸಾಕ್ಷಿಯಾಗಿದೆ ಎಂದು ವರದಿಯಾಗಿದೆ.

- Advertisment -

Most Popular

Recent Comments