ದೇವನಹಳ್ಳಿ : ಬೆಂಗಳೂರು ಗ್ರಾಮಾಂತರ, ಹೊಸಕೋಟೆ ತಾಲೂಕಿನ ವೈದ್ಯಾಧಿಕಾರಿ ಕಳೆದ ಎರಡು ದಿನಗಳಿಂದ ಮಂಜುನಾಥ್ ನಾಪತ್ತೆ ಆಗಿದ್ದಾರೆ. ನಾಪತ್ತೆಗೆ ಕಾರಣ ಎಂಎಲ್ಸಿ ಎಂಟಿಬಿ ನಾಗರಾಜ್ ಆಪ್ತ ಬಿಜೆಪಿ ಮುಖಂಡನೊಬ್ಬ ಪ್ರಮುಖ ಕಾರಣ ಎಂಬ ಅನುಮಾನಗಳು ಮೂಡುತ್ತಿವೆ. ಟಿಎಚ್ಓ ಮಂಜುನಾಥ್ ಕಳೆದ ಮೂರು ದಿನಗಳ ಹಿಂದೆ ಹೊಸಕೋಟೆ ನಗರದಲ್ಲಿ ನಕಲಿ ಕ್ಲಿನಿಕ್ಗಳ ಮೇಲೆ ದಾಳಿ ನಡೆಸಿದ್ದರು. ದಾಳಿ ವೇಳೆ ಲಕ್ಷಾಂತರ ರೂಪಾಯಿ ಮೌಲ್ಯದ ಔಷಧಿಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಈ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡನೊಬ್ಬ ಟಿಎಚ್ಓ ಕಛೇರಿಗೆ ನುಗ್ಗಿ ಔಷಧಿಗಳನ್ನು ಹಿಂದಿರುಗಿಸಿ ಕೊಡುವಂತೆ ಮತ್ತು ಕ್ರಮ ಕೈಗೊಳ್ಳದಂತೆ ಅವಾಚ್ಯ ಶಬ್ದಗಳಿಂದ ನಿಂದಿಸಿಲಾಗಿತ್ತು. ಇದ್ರಿಂದ ಟಿಎಚ್ಓ ಮಂಜುನಾಥ್ ಮನನೊಂದು ನಾಪತ್ತೆ ಆಗಿದ್ದಾರೆ ಎಂದು ತಿಳಿದು ಬರುತ್ತಿದೆ.