Tuesday, January 25, 2022
Powertv Logo
Homeಆಧ್ಯಾತ್ಮಜಗತ್ತು ಕಂಡ ಅಪ್ರತಿಮ ವ್ಯಕ್ತಿ ಗೌತಮ ಬುದ್ದ

ಜಗತ್ತು ಕಂಡ ಅಪ್ರತಿಮ ವ್ಯಕ್ತಿ ಗೌತಮ ಬುದ್ದ

ಗೌತಮ ಬುದ್ಧ ಬೌದ್ಧಧರ್ಮದ ಸಂಸ್ಧಾಪಕ ಮಾತ್ರವಲ್ಲ, ದು:ಖದ ಹುಟ್ಟು, ದು:ಖದ ಅಡಗುವಿಕೆ, ಮತ್ತು ದು:ಖ ನಿವಾರಣೆಗೆ ಒಯ್ಯುವ ಅಷ್ಟಾಂಗಿಕ ಮಾರ್ಗವನ್ನು ಕಂಡು ಹಿಡಿದ ದಾರ್ಶನಿಕ. ಇಡೀ ಜಗತ್ತಿಗೆ ಜ್ಞಾನದ ಹಿರಿಮೆಯನ್ನು ತುಂಬಲು ಜನಿಸಿದರು.

ಸಿದ್ದಾರ್ಥ ಜನಿಸಿದಾಗಲೇ ಅವನಲ್ಲಿ ಅಪೂರ್ವವಾದ ಮಹಾಪುರುಷನ ಲಕ್ಷಣವಿರುವುದನ್ನು ಅರಿತ ದೈವಜರು ಅರಿತಿದ್ದರು. ಸಿದ್ದಾರ್ಥನಿಗೆ 32 ಚಿನ್ಹೆಗಳಿದ್ದು, ನೀಳಬಾಹು, ವಿಶಾಲವಾದ ಎದೆ, ಊಧ್ವ ಮುಖ, ರೋಮಧಾರೆ, ದೇಹವನ್ನು ಬಾಗಿಸದೆ ಮಂಡಿ ಮುಟ್ಟುವಷ್ಟು ನೀಳವಾದ ಕೈಗಳು, ಉದ್ದವಾದ ಬೆರಳುಗಳು, ಅತೀ ಮೃದುವಾದ ಹಸ್ತ ಮತ್ತು ನವಿರಾದ ಪಾದಗಳನ್ನು ಹೊಂದಿದ್ದನೆಂದು ಪುರುಷರಲ್ಲಿ ಇರಬೇಕಾದ ಸರ್ವಲಕ್ಷಣಗಳನ್ನು ದಿಗ್ಗನಿಕಾಯ ಎಂಬ ಬೌದ್ಧಗ್ರಂಥದಲ್ಲಿ ನಾವು ತಿಳಿಯಬಹುದು.

ಗೌತಮ ಬುದ್ಧನ ಜನನ :

ಕಪಿಲ ವಸ್ತುವಿನ ಸಿಂಹಹನುವಿನ ಮಗ ಶುದ್ಧೋದನ. ಶುದ್ಧೋದನನಿಗೆ ತಂದೆ ಸಿಂಹಹನು ತನ್ನ ನೆರೆಯ ರಾಜ್ಯದ ದೊರೆ ಸುಪ್ರಬುದ್ಧನ ಮಕ್ಕಳಾದ ಪ್ರಜಾಪತಿದೇವಿ ಮತ್ತು ಮಾಯಾದೇವಿ ಎಂಬ ಇಬ್ಬರು ಹೆಣ್ಣು ಮಕ್ಕಳನ್ನು ತಂದು ಮದುವೆ ಮಾಡಿದರು. ಶುದ್ಧೋದನನ ಪಟ್ಟದ ಅರಸಿ ಮಾಯಾದೇವಿಯಾಗಿದ್ದಳು. ಬುದ್ಧ ಲುಂಬಿನಿ ವನದಲ್ಲಿ, ವೈಶಾಖ ಶುದ್ಧ ಪೌರ್ಣಮಿಯಂದು ಶುದ್ಧೋದನ ಮತ್ತು ಮಾಯಾದೇವಿಯ ಮಗನಾಗಿ ಜನಿಸುತ್ತಾನೆ.

ಮಗುವಿಗೆ ಏಳು ದಿನವಾದಾಗ, ತಾಯಿ ಮಾಯಾದೇವಿ ಅಸುನೀಗಿದಳು. ನಂತರ ಮಗುವನ್ನು ಎರಡನೇ ತಾಯಿ ಪ್ರಜಾಪತಿದೇವಿ ಸಾಕಿ ಸಲಹುತ್ತಾಳೆ.

ಗೌತಮ ಬುದ್ದನ ಶಿಕ್ಷಣ :

ರಾಜ ಶುದ್ಧೋಧನನು ಮಗನು ಚಕ್ರವರ್ತಿಯಾಗುವ ಲಕ್ಷಣಗಳಿವೆಯೆಂದು, ಬಹಳ ವಾತ್ಸಲ್ಯದಿಂದ ಸಿದ್ದಾರ್ಥನ ಶಿಕ್ಷಣದ ಬೆಳವಣಿಗೆಯಲ್ಲಿ ಹೆಚ್ಚು ಆಸಕ್ತಿ ವಹಿಸಿದನು. ಸಿದ್ದಾರ್ಥನು ಸರ್ವ ವಿದ್ಯಾಪಾರಂಗತನಾಗುವಂತೆ, ಕುಲಗುರುವಿನಲ್ಲಿ ವಿದ್ಯೆ ಕೊಡಿಸಿ ತೃಪ್ತನಾಗದೆ, ರಾಮ,ಧಜ,ಲಕ್ಷಣ, ಮಂತಿಯಣ್ಣ,ಸುಯಾಮ,ಸುಭೋಗ,ಸುದತ್ತ,ಸುಮಿತ್ರ,ಸುಲಭ ಮುಂತಾದ ವಿವಿಧ ವಿದ್ಯಾಪಾರಂಗತರಾದ ವಿದ್ವಾಂಸರಲ್ಲಿ ಶಿಕ್ಷಣ ಕೊಡಿಸಿದನು.

ಗೌತಮ ಬುದ್ಧನ ವಿವಾಹ :

ರಾಜ ಶುದ್ಧೊಧನನು ಮಗನು ವಿರಕ್ತನಾಗದಂತೆ ನೋಡಿಕೊಳ್ಳಲು ಸರ್ವ ಪ್ರಯತ್ನಗಳನ್ನು ಮಾಡುತ್ತಿದ್ದನು. ಹರೆಯದಲ್ಲಿ ಮದುವೆ ಮಾಡಿದರೆ ಅವನು ಸಂಸಾರಸುಖದಲ್ಲಿ ಮಗ್ನನಾಗಿರುತ್ತಾನೆಂದು ತಿಳಿದು ಮಗನಿಗೊಂದು ಸ್ವಯಂವರವನ್ನೇರ್ಪಡಿಸಿದನು. ಅವನು ಒಪ್ಪುವ ಕನ್ಯೆ ಅವನಿಗೆ ಸಿಕ್ಕಲಿ ಎಂಬ ಉದ್ದೇಶವಿತ್ತು. ಆದರೆ ಒಂದು ದಿನ ಊರಿನ ಎಲ್ಲಾ ಕನ್ಯೆಯರು ಬಂದು ರಾಜಕುಮಾರನಿಂದ ಆಭರಣಗಳನ್ನು ದಾನ ಪಡೆಯುತ್ತಿದ್ದರು.

ಅದೇರೀತಿ ಊರಿನ ಎಲ್ಲಾ ಕನ್ಯೆಯರು ಬಂದು ಸಿದ್ಧಾರ್ಥನ ಕೈಯಿಂದ ಆಭರಣಗಳನ್ನು ಪಡೆದರು. ಆದರೆ ಶುದ್ಧೋಧನನ ಸಚಿವನಾದ ದಂಡಪಾಣಿಯ ಮಗಳು ಯಶೋಮತಿ ಎಂಬುವವಳು ಅತೀ ಸುಂದರಳೂ ಸುಸಂಸ್ಕ್ರತಳೂ ಆಗಿದ್ದು , ಆಕೆಯ ಗಾಂಭಿರ್ಯ, ಘನತೆಗಳು, ಸಿದ್ದಾರ್ಥನನ್ನು ಮಂತ್ರಮುಗ್ಧಗೊಳಿಸಿದವು, ದಾನ ಮಾಡುತ್ತಿದ್ದ ಒಡವೆಗಳೆಲ್ಲ ಮುಗಿದು ಹೋಗಿದ್ದವು. ಆಗ ಸಿದ್ದಾರ್ಥನು ತನ್ನ ಬೆರಳಿನಲ್ಲಿದ್ದ ಉಂಗುರವನ್ನೇ ತೆಗೆದು ಕೊಡಲು ಹೋದಾಗ ಅವಳು ನಿಮ್ಮ ವಾತ್ಸಲ್ಯಮಯ ನೋಟವೇ ನನಗೊಂದು ಆಭರಣವೆಂದು ಮುಂದೆ ಸಾಗಿದಳು.

ಹಿಂದೂ ಧರ್ಮದಲ್ಲಿ ಬುದ್ಧ :

ಹಿಂದೂ ಧರ್ಮದಲ್ಲಿ ಗೌತಮ ಬುದ್ಧನನ್ನು ಕೆಲವೊಮ್ಮೆ ವಿಷ್ಣುವಿನ ಅವತಾರವೆಂದು ಕಾಣಲಾಗುತ್ತದೆ. ಪೌರಾಣಿಕ ಪಠ್ಯ ಭಾಗವತ ಪುರಾಣದ ಪ್ರಕಾರ , ಬುದ್ಧ ವಿಷ್ಣುವಿನ ಇಪ್ಪತ್ತೈದು ಅವತಾರಗಳಲ್ಲಿ ಇಪ್ಪತ್ನಾಲ್ಕನೆಯ ಅವತಾರ ಎಂದು ಉಲ್ಲೇಖಿಸಲಾಗುತ್ತದೆ. ಅದೇ ರೀತಿ ಹಿಂದೂ ಸಂಪ್ರದಾಯಗಳು ಬುದ್ಧ ಹತ್ತು ಅವತಾರಗಳಲ್ಲಿ ದಶಾವತಾರ ಇತ್ತೀಚಿನ ( ಒಂಬತ್ತನೆಯ) ಅವತಾರವಾಗಿ ಕಾಣುತ್ತದೆ. ಬೌದ್ಧ ಧರ್ಮೀಯ ದಶರಥ ಜಟಕಾ ಅಂದರೆ ರಾಮನನ್ನು ಬುದ್ಧನ ಪೂರ್ವದ ಜನ್ಮ ಎಂದು ಪ್ರತಿನಿಧಿಸುತ್ತದೆ. ಬುದ್ಧ ಭೋಧನೆಗಳು ವೇದಗಳ ಅಧಿಕಾರವನ್ನು ತಿರಸ್ಕರಿಸುತ್ತದೆ. ಇದರ ಪರಿಣಾಮವಾಗಿ ಬೌಧ ಧರ್ಮ ನಾಸ್ತಿಕ ಚಿಂತನೆ ಎಂದು ಭಾವಿಸಲಾಗುತ್ತದೆ.

ಆಧ್ಯಾತ್ಮದತ್ತ ಒಲವು :

ತಾನೊಬ್ಬ ಮಹಾ ಯೋಗಿಯಾಗಬೇಕು, ಜ್ಞಾನಿಯಾಗಬೇಕೆಂಬ ತುಡಿತ ಇದ್ದುದರಿಂದ ಗೌತಮ ಬುದ್ದನು ಈ ವೈಭೋಗದ ಜೀವನದಿಂದ ಮುಕ್ತಿ ಪಡೆಯಲು ಹಾತೊರೆಯುತ್ತಾನೆ. ಅಲ್ಲದೆ ತಾನಿರುವ ಅರಮನೆಯ ಹೊರಗೆ ಏನಿದೆ ಎಂಬ ಕುತೂಹಲವು ತನ್ನಲ್ಲಿ ಹುಟ್ಟಿಕೊಳ್ಳಲಾರಂಭಿಸುತ್ತದೆ. ಹೀಗಿರುವಾಗ ಒಂದು ದಿನ ವಾಯುವಿಹಾರಕ್ಕಾಗಿ ಅರಮನೆಯಿಂದ ಹೊರಗಡೆ ಬಂದಾಗ ಅಲ್ಲಿ ನಾಲ್ಕು ವಿಚಾರಗಳನ್ನು ನೋಡಿ ಜೀವನದಲ್ಲಿ  ತನಗರಿವಿಲ್ಲದೆಯೇ ಮೊದಲ ಬಾರಿ ಜಿಗುಪ್ಸೆಗೊಳ್ಳುತ್ತಾನೆ. ಆ ವಿಚಾರವೇನೆಂದರೆ ಓರ್ವ ಮುದುಕ ,ರೋಗಿ,ಶವಯಾತ್ರೆ ಹಾಗೂ ಅಲೆದಾಡುವ ಓರ್ವ ತಪಸ್ವಿಯನ್ನು ಕಂಡು ದಿವ್ಯದರ್ಶನವಾಗುತ್ತದೆ. ಈ ನಾಲ್ಕು ವಿಚಾರಗಳನ್ನು ಕಂಡ ಕೂಡಲೇ ಗೌತಮನು ಕೂತೂಹಲಕ್ಕೆ ಒಳಗಾಗುತ್ತಾನೆ. ನಂತರ ಅರಮನೆಗೆ ಹಿಂತಿರುಗಿ ನಿಜ ಜೀವನದ ಬಗ್ಗೆ ತಿಳಿದುಕೊಳ್ಳಲು ಗುರುಗಳ ಹುಡುಕಾಟ ಮಾಡಲು ಬಹಳಷ್ಟು ಕಷ್ಟಪಡುತ್ತಾನೆ. ಇದರಿಂದ ಬೇಸರಗೊಂಡ ಬುದ್ಧ ಸಂಸಾರ ಹಾಗೂ ಅರಮನೆಯನ್ನು ತ್ಯಾಗ ಮಾಡಿ ಜೀವನದ ಬಗ್ಗೆ ತನಗಿರುವ ಪ್ರಶ್ನೆಗಳಿಗೆ ಉತ್ತರ ಹುಡುಕಲು ಒಂಟಿಯಾಗಿ ತೆರಳುತ್ತಾನೆ.

ಸತ್ಯ  ಶೋಧಕ್ಕಾಗಿ ಪ್ರಪಂಚ ಪರ್ಯಟನೆ :

ಜೀವನದ ಸತ್ಯತೆಯನ್ನು ತಿಳಿಯುದಕ್ಕಾಗಿ ಬುಧ್ಧನು ತನ್ನ ಎಂಭತ್ತು ವರ್ಷದವರೆಗೆ ಪ್ರಪಂಚ ಪರ್ಯಟನೆ ಮಾಡುತ್ತಾನೆ. ಅದಲ್ಲದೆ ಪರ್ಯಟನೆಯ ಜೊತೆಜೊತೆಗೆ ಸತ್ಯ ದರ್ಶನದ ಬಗ್ಗೆ ಜನರಿಗೆ ಭೋಧನೆಗಳನ್ನು ನಿರಂತರವಾಗಿ ನಾಡುತ್ತಾನೆ ಹಾಗೂ ಬಡವ ಹಾಗೂ ದುರ್ಬಲರ ಸೇವೆಯನ್ನು ಮಾಡುತ್ತಾನೆ. ಈ ಜತ್ತಿನಲ್ಲಿ ಯಾವುದೂ ಶಾಶ್ವತವಲ್ಲ ಹಾಗಾಗಿ ನಾವು ಪರರಿಗೆ ಹಾಗೂ ಮಾನವೀಯತೆಗೆ ಬೆಲೆ ಕೊಡಬೇಕು ಎಂಬುವುದು ಗೌತಮ ಬುಧ್ಧನು ಭೋಧಿಸಿದ ಮುಖ್ಯ ತತ್ವಗಳು . ಬುಧ್ಧನು ಇಹಲೋಕವನ್ನು ತ್ಯಜಿಸುವಾಗ ಎಂಭತ್ತು ವರ್ಷಗಳಾಗಿದ್ದರೂ ಯಾವುದೇ ದಣಿವಿಲ್ಲದೇ ಸತ್ಯ ದರ್ಶನಕ್ಕಾಗಿ ನಿರಂತರವಾದ ಪ್ರಪಂಚ ಪರ್ಯಟನೆ ಮಾಡುತ್ತಾನೆ. ಅಲ್ಲದೇ ಕೊನೆಗೆ ತನ್ನ ಅನುಯಾಯಿಗಳಿಗೆ ಈ ಜಗತ್ತಿನಲ್ಲಿ ಯಾವುದೂ ಶಾಶ್ವತವಲ್ಲ ಹಾಗಾಗಿ ನಿಮ್ಮ ವಿಮೊಚನೆಗಾಗಿ ಮಾತ್ರ ಕೆಲಸ ಮಾಡಿ ಎಂಬ ಕೊನೆಯ ನುಡಿಗಳನ್ನು ನೀಡಿ ಲೋಕದಲ್ಲಿ ಅಜರಾಮರನಾಗುತ್ತಾನೆ.

ಪವಿತ್ರ, ಪವರ್ ಟಿವಿ

- Advertisment -

Most Popular

Recent Comments