Tuesday, January 25, 2022
Powertv Logo
Homeರಾಜ್ಯ'ನಾಪತ್ತೆಯಾಗಿದ್ದ ಹೊಸಕೋಟೆ  ವೈದ್ಯಾಧಿಕಾರಿ ಹಾಸನದ  ಚನ್ನರಾಯಪಟ್ಟಣದಲ್ಲಿ ಪತ್ತೆ':ರವಿ ಡಿ ಚನ್ನಣ್ಣನವರ್ 

‘ನಾಪತ್ತೆಯಾಗಿದ್ದ ಹೊಸಕೋಟೆ  ವೈದ್ಯಾಧಿಕಾರಿ ಹಾಸನದ  ಚನ್ನರಾಯಪಟ್ಟಣದಲ್ಲಿ ಪತ್ತೆ’:ರವಿ ಡಿ ಚನ್ನಣ್ಣನವರ್ 

ನೆಲಮಂಗಲ: ಕಳೆದ  ಮೂರು ದಿನಗಳ  ಹಿಂದೆ ನಾಪತ್ತೆಯಾಗಿದ್ದ ಹೊಸಕೋಟೆ  ವೈದ್ಯಾಧಿಕಾರಿಯನ್ನ  ಪತ್ತೆ ಮಾಡುವಲ್ಲಿ ಪೊಲೀಸರು  ಯಶಸ್ವಿಯಾಗಿದ್ದಾರೆ. ಹೊಸಕೋಟೆ  ಟಿಹೆಚ್ ಓ ಡಾ.ಮಂಜುನಾಥ್  ದಿನಾಂಕ  15-12-2020ರ ಬೆಳಗ್ಗೆಯಿಂದ ನಾಪತ್ತೆಯಾಗಿದ್ದರು,  ಹೊಸಕೋಟೆ  ನಗರ ಪೊಲೀಸ್ ಠಾಣೆಯಲ್ಲಿ ನಾಪತ್ತೆ  ಪ್ರಕರಣ  ದಾಖಲಾಗಿತ್ತು. ಡಾ. ಮಂಜುನಾಥ್  ಹೊಸಕೋಟೆ  ನಗರದ ನಕಲಿ ಕ್ಲಿನಿಕ್ ಗಳ  ಮೇಲೆ ದಾಳಿ ನಡೆಸಿ ಅವುಗಳ  ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಲು ಮುಂದ್ದಾಗಿದ್ದರು. ಈ ಸಮಯದಲ್ಲಿ ಡಾ.ಮಂಜುನಾಥ್ ಗೆ  ಬೆದರಿಕೆ ಕರೆಗಳು ಸಹ ಬಂದಿದ್ದು, ಎಂಟಿಬಿ  ನಾಗರಾಜ್  ಆಪ್ತ  ಜಯರಾಜ್  ಬೆದರಿಕೆ  ಹಾಕಿರುವ ಆಡಿಯೋ  ವೈರಲ್  ಆಗಿತ್ತು, ಗೋಪಾಲಕೃಷ್ಣ ಎಂಬುವರು ದಿನಾಂಕ 16-12-2020ರಂದು ಟಿಹೆಚ್ ಓ ನಾಪತ್ತೆಯಾಗಿರುವ ಬಗ್ಗೆ  ಪ್ರಕರಣ  ದಾಖಲು ಮಾಡಿದ್ದರು.

ಡಾ.ಮಂಜುನಾಥ್  ಅವರನ್ನ  ಕಿಡ್ನಾಪ್ ಮಾಡಿರುವ  ಬಗ್ಗೆ  ವದಂತಿಗಳು  ಸಹ ಹರಿದಾಡಿತು,  ಪ್ರಕರಣದ ಗಂಭೀರತೆ ಆರಿತ ಬೆಂಗಳೂರು  ಗ್ರಾಮಾಂತರ ಎಸ್ಪಿ  ರವಿ ಡಿ ಚನ್ನಣ್ಣನವರ್  ಡಾ.ಮಂಜುನಾಥ್  ಪತ್ತೆಗಾಗಿ 10 ಸರ್ಕಲ್ ಇನ್ಸ್ ಪೆಕ್ಟರ್ ಗಳ ತಂಡ ರಚನೆ ಮಾಡಿದ್ದರಲ್ಲದೇ.  ಇಂದು ಬೆಳಗ್ಗೆ ತಮ್ಮ  ಪತ್ನಿಗೆ ಪೋನ್  ಮಾಡಿದ  ಡಾಕ್ಟರ್  ತಾನೂ  ಚನ್ನಪಟ್ಟಣದಲ್ಲಿ ಇರುವುದ್ದಾಗಿ ತಿಳಿಸಿದರು, ಇಂದು ಬೆಳಿಗ್ಗೆ  ರವಿಚನ್ನಣ್ಣವರ್ ಗೆ ಪೋನ್ ಮಾಡಿ ಡಾಕ್ಟರ್ ತಾನು ಬರುತ್ತಿರುವ ಮಾಹಿತಿ ತಿಳಿಸಿದರು. ಹಾಸನ ಜಿಲ್ಲೆ ಚನ್ನರಾಯಪಟ್ಟಣದ  ಶಾಂತಿಗ್ರಾಮದಲ್ಲಿ ಡಾಕ್ಟರ್ ಮಂಜುನಾಥ್  ಪತ್ತೆಯಾಗಿದ್ದು ಅವರನ್ನು ನೆಲಮಂಗಲ ನಗರ ಠಾಣೆಗೆ  ಕರೆದುಕೊಂಡು ಬರಲಾಗಿದೆ. ವಿಚಾರಣೆ ಸಮಯದಲ್ಲಿ ಡಾ. ಮಂಜುನಾಥ್ ತನ್ನ ಮನಸ್ಸಿಗೆ ಬೇಸರವಾದ ಕಾರಣದಿಂದ ಪ್ರವಾಸ ಸ್ಥಳಗಳಿಗೆ  ಹೋಗಿದ್ದೆ.

ರಾಮನಗರ,  ಚನ್ನಪಟ್ಟಣ,  ಚಿಕ್ಕಬಳ್ಳಾಪುರ,  ಕೊಡಗು,  ಹೆಚ್.ಡಿ ಕೋಟೆ , ಮಡಿಕೇರಿ  ಸ್ಥಳಗಳಿಗೆ ಭೇಟಿ ನೀಡಿದ್ದರು, ನಾಪತ್ತೆಯಾದ ಸುದ್ದಿ  ಪ್ರಸಾರವಾದ ಹಿನ್ನೆಲೆ ಪದೇ ಪದೇ ತನ್ನ  ಮೊಬೈಲ್  ಗೆ ಕರೆಗಳು ಬರುತ್ತಿದ್ದ ಹಿನ್ನೆಲೆ  ಪೋನ್ ಸ್ವೀಚ್  ಆಫ್ ಮಾಡಿದ್ದಾಗಿ ಹೇಳಿದ್ದಾರೆಂದು ರವಿ ಡಿ ಚನ್ನಣ್ಣನವರ್  ತಿಳಿಸಿದ್ದಾರೆ. ಡಿವೈಎಸ್ಪಿ  ಜಗದೀಶ್  ನೇತೃತ್ವದಲ್ಲಿ  ತನಿಖೆ ಮುಂದುವರೆದಿದ್ದು ಡಾ. ಮಂಜುನಾಥ್ ನಾಪತ್ತೆ ಪ್ರಕರಣದ ಅಸಲಿಯತ್  ಬಯಲುಗೊಳಿಸುವುದಾಗಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

- Advertisment -

Most Popular

Recent Comments