Home Women Power ಪ್ರತಿಯೊಬ್ಬರಿಗೂ ಸ್ಫೂರ್ತಿ ಅಗ್ನಿಪುತ್ರಿ..!

ಪ್ರತಿಯೊಬ್ಬರಿಗೂ ಸ್ಫೂರ್ತಿ ಅಗ್ನಿಪುತ್ರಿ..!

ಮಿಸೈಲ್ ಮ್ಯಾನ್ ಆಫ್ ಇಂಡಿಯಾ ಅಂದ್ರೆ ಎಲ್ಲಾರಿಗೂ ಥಟ್ ಅಂತ ನೆನಪಾಗೋದು ಎಪಿಜೆ ಅಬ್ದುಲ್ ಕಲಾಂ. ಇಡೀ ವಿಶ್ವವೇ ಮಿಸೈಲ್ ಮ್ಯಾನ್ ಆಫ್ ಇಂಡಿಯಾ ಎಂದು ಅಬ್ದುಲ್ ಕಲಾಂ ಅವರನ್ನು ಕರೆಯುತ್ತೆ. ಮಹಿಳಾ ವಿಜ್ಞಾನಿಗಳಲ್ಲೂ ಮಿಸೈಲ್ ವುಮೆನ್ ಆಫ್ ಇಂಡಿಯಾ ಎಂದು ಒಬ್ಬ ಮಹಿಳೆ ಖ್ಯಾತಿ ಪಡೆದಿದ್ದಾರೆ. ಆಕೆ ಬೇರಾರು ಅಲ್ಲ ಕ್ಷಿಪಣಿ ಮಹಿಳೆ, ಅಗ್ನಿ ಪುತ್ರಿ ಟೆಸ್ಸಿ ಥಾಮಸ್.
ಕ್ಷಿಪಣಿ ಮಹಿಳೆ ಎಂದೇ ಹೆಸರುವಾಸಿಯಾದ ಟೆಸ್ಸಿ ಥಾಮಸ್​ ಏಪ್ರಿಲ್ 1963 ರಲ್ಲಿ ಜನಿಸಿದರು. ಇವರು ಕೇರಳ ಜಿಲ್ಲೆ ಅಲಪುಳದವರು. ಕುಟುಂಬದಲ್ಲಿ ಎಷ್ಟೇ ಬಡತನವಿದ್ದರೂ ಕಷ್ಟಪಟ್ಟು ಎಂಜಿನಿಯರಿಂಗ್ ಮತ್ತು ಬಿ.ಟೆಕ್ ಪದವಿ ಪಡೆದುಕೊಂಡ್ರು. ಇವರಿಗೆ ಚಿಕ್ಕ ವಯಸ್ಸಿನಿಂದಲೂ ಮಿಸೈಲ್ಸ್, ರಾಕೇಟ್​​ಗಳನ್ನು ತಯಾರಿಸುವ ವಿಭಾಗದಲ್ಲಿ ಅಧಿಕಾರಿಯ ಉದ್ಯೋಗ ಮಾಡಬೇಕೆಂಬುದು ಕನಸಾಗಿತ್ತು. ಕಠಿಣ ಶ್ರಮದಿಂದ ಕನಸನ್ನು ನನಸು ಮಾಡಿಕೊಂಡು ಅದರಂತೆ ಕ್ಷಿಪಣಿ ಮಹಿಳೆ ಎಂದೇ ಖ್ಯಾತಿ ಪಡೆದಿದ್ದಾರೆ.
ಟೆಸ್ಸಿ ಥಾಮಸ್​​ ಅವರು 1988 ರಲ್ಲಿ ಡಿಆರ್​ಡಿಒ ಸೇರಿದ ಸಂಧರ್ಭದಲ್ಲಿ ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಪ್ರಯೋಗಾಲಯದ ನಿರ್ದೇಶಕರಾಗಿದ್ದವರು ಎ.ಪಿ.ಜೆ ಅಬ್ದುಲ್ ಕಲಾಂರವರು. ಟೆಸ್ಸಿ ಥಾಮಸ್ ಅವರಿಗೆ ಎ.ಪಿಜೆ ಅಬ್ದುಲ್ ಕಲಾಂರವರೇ ಅಗ್ನಿ ಕ್ಷಿಪಣಿ ಯೋಜನೆಯಲ್ಲಿ ಕೆಲಸ ಮಾಡುವ ಹೊಣೆಗಾರಿಕೆ ನೀಡಿದರು. ಇದೇ ಟೆಸ್ಸಿ ಥಾಮಸ್​​ ಅವರಿಗೆ ದೊಡ್ಡ ಪ್ರೇರಣೆ ಮತ್ತು ಜೀವನದ ಸಾರ್ಥಕದ ಕ್ಷಣವಾಗಿತ್ತು.
ಅಗ್ನಿ-3 ಕ್ಷಿಪಣಿ ಯೋಜನೆಯ ಸಹಾಯಕ ನಿರ್ದೇಶಕರಾಗಿ ನೇಮಕಗೊಂಡ ಟೆಸ್ಸಿಥಾಮಸ್​ ಅವರು ಅಲ್ಲಿಂದ ಹೊಸ ಯುಗಕ್ಕೆ ನಾಂದಿಯಾಡಿದರು. ಸಹಾಯಕ ನಿರ್ದೇಶಕರಾಗಿ ಎಲ್ಲರಿಗೆ ಅಚ್ಚರಿಯಾಗುವಂತೆ ತನ್ನ ಕಾರ್ಯಕ್ಷಮತೆ ತೋರಿದ ಇವ್ರಿಗೆ 2011 ರಲ್ಲಿ ಯಶಸ್ವಿಯಾಗಿ ಪರೀಕ್ಷೆಗೊಳಗಾದ ಕ್ಷಿಪಣಿ ಅಗ್ನಿ-4 ಯೋಜನೆಯೆ ನಿರ್ದೇಶಕರ ಸ್ಥಾನ ತುಂಬುತ್ತಾರೆ.
ಹೌದು ಇಸ್ರೋದಿಂದ 104 ಉಪಗ್ರಹಗಳನ್ನು ಒಟ್ಟಿಗೆ ಕಕ್ಷೆಗೆ ಸೇರಿಸಲಾಯಿತು ಎಂಬುದು ದೇಶದ ಹೆಮ್ಮೆಯ ವಿಷಯ. ಈ ಸಾಧನೆಯ ಹಿಂದೆ ಇಸ್ರೋದಲ್ಲಿ ಹಗಲು- ರಾತ್ರಿ ಎನ್ನದೆ ತಮ್ಮ ವೈಯಕ್ತಿಕ ಜೀವನವನ್ನು ಪಕ್ಕಕ್ಕಿಟ್ಟು ದುಡಿದ ಮಹಿಳೆಯರ ಪಾತ್ರದಲ್ಲಿ ಟೆಸ್ಸಿ ಥಾಮಸ್​​ ಅವರ ಅಗಾಧ ಪರಿಶ್ರಮವಿದೆ.
ದೇಶಿಯವಾಗಿ ನಿರ್ಮಿಸಿದ 50 ಟನ್ ಭಾರದ ಅಗ್ನಿ – 5 ಕ್ಷಿಪಣಿ ಅದಾಗಿತ್ತು. ಮತ್ತು 8000 ಕಿಮೀಗಿಂತಲೂ ಅಧಿಕ ಸಾಮರ್ಥ್ಯ ಹೊಂದಿದ ಕ್ಷಿಪಣಿಯ ಹಿಂದಿನ ರುವಾರಿಯೇ ಟೆಸ್ಸಿ ಥಾಮಸ್. 56 ಅಡಿ, 17 ಮೀಟರ್, 2 ಮೀಟರ್ ಅಗಲವಿರುವ ಕ್ಷಿಪಣಿ, 5000 ಕಿಮೀಟರ್ ಗಿಂತಲೂ ಅಧಿಕ ದೂರ ಕ್ರಮಿಸಬಲ್ಲ ವಿಶೇಷ ಕ್ಷಿಪಣಿಯ ತಯಾರಿಗಿದ್ದು ಇವರ ನೇತೃತ್ವದಲ್ಲಿಯೇ.. ಅಗ್ನಿ-3 ಮತ್ತು ಅಗ್ನಿ -4 ಕ್ಷಿಪಣಿಯ ಪ್ರಾಜೆಕ್ಟ್ ಡೈರೆಕ್ಟರ್ ಆಗಿ ನೇಮಕಗೊಂಡಿದ್ದಲ್ಲದೆ. ಕ್ಷಿಪಣಿಗಳ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಿದರು.
ಅಗ್ನಿ ಸರಣಿಯ ಕ್ಷಿಪಣಿಗಳ ಹಿಂದಿನ ಪ್ರಮುಖ ವಿಜ್ಞಾನಿಯಾಗಿ ವಿಶ್ವವಿಖ್ಯಾತಿ ಪಡೆದುಕೊಂಡರು. ಕ್ಷಿಪಣಿ ತಂತ್ರಜ್ಞಾನದಲ್ಲಿ ದೇಶವನ್ನು ಸ್ವಾವಲಂಬಿ ಮಾಡುವಲ್ಲಿ ಟೆಸ್ಸಿ ಥಾಮಸ್​ ಅವರು ನೀಡಿದ ಗಣನೀಯ ಕೊಡುಗೆಗಳಿಗೆ ಹತ್ತಾರು ಪ್ರಶಸ್ತಿ ಪುರಸ್ಕಾರಗಳು ಒಲಿದು ಬಂದಿವೆ. 24 ವರ್ಷಗಳ ಕಾಲ ತಮ್ಮ ಸೇವೆಯಲ್ಲಿ ಅನೇಕ ಯೋಜನೆಗಳ ಜವಬ್ದಾರಿ ಹೊತ್ತ ಕ್ಷಿಪಣಿ ಮಹಿಳೆ ಟೆಸ್ಸಿ ಥಾಮಸ್​​ ಅವರಿಗೆ ಲಾಲ್ ಬಹಾದ್ದೂರ್ ಶಾಸ್ತ್ರಿ ಮತ್ತು ರಾಷ್ಟ್ರೀಯ ಪ್ರಶಸ್ತಿ ಕೂಡ ದೊರಕಿದೆ.
ಮನಸ್ಸೊಂದಿದ್ದರೆ ಎಲ್ಲವೂ ಸಾಧ್ಯ ಎಂಬುದನ್ನು ಸಾಬೀತು ಪಡಿಸಿದ್ದಾರೆ ಅಗ್ನಿಪುತ್ರಿ ಟೆಸ್ಸಿ ಥಾಮಸ್. ಒಟ್ಟಾರೆಯಾಗಿ ಸಂಸಾರವನ್ನು ನೌಕೆಯನ್ನು ಸಾಗಿಸುತ್ತಾ.. ದೇಶಕ್ಕಾಗಿ ಸೇವೆಯನ್ನು ಮಾಡುತ್ತಿರುವ ಕ್ಷಿಪಣಿಗಳ ಮಾತೆ, ಅಗ್ನಿಪುತ್ರಿ ಟೆಸ್ಸಿ ಥಾಮಸ್​​ವರಿಗೆ ನಮ್ಮದೊಂದು ಸಲಾಮ್.

LEAVE A REPLY

Please enter your comment!
Please enter your name here

- Advertisment -

Most Popular

ದೇಶದಲ್ಲಿ  24 ಗಂಟೆಗಳಲ್ಲಿ 48,648 ಕೊರೋನಾ ಕೇಸ್ ಪತ್ತೆ!

ನವದೆಹಲಿ : ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 48,648 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 80,88,851ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ...

 ಸಿನಿಮೀಯ ರೀತಿಯಲ್ಲಿ ನಗರಸಭೆ ಸದಸ್ಯ ಕಿಡ್ನಾಪ್​!

ಕೊಪ್ಪಳ : ಸಿನಿಮೀಯ ರೀತಿಯಲ್ಲಿ ನಗರಸಭೆ ಸದಸ್ಯನನ್ನು ಕಿಡ್ನಾಪ್ ಮಾಡಲಾಗಿದೆ. ಕಿಡ್ನಾಪ್​ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನವೆಂಬರ್ 2 ರಂದು ನಗರಸಭೆ ಚುನಾವಣೆ ನಡೆಯಲಿದ್ದು, ಗಂಗಾವತಿ ನಗರಸಭೆ ಕಾಂಗ್ರೆಸ್ ಸದಸ್ಯ...

ಅಲಹಬಾದ್​ ಹೈಕೋರ್ಟ್ ನಿಗಾದಲ್ಲಿ ಹತ್ರಾಸ್​ ಗ್ಯಾಂಗ್ ರೇಪ್​ ಕೇಸ್ ತನಿಖೆಗೆ ಸುಪ್ರೀಂ ಆದೇಶ

ನವದೆಹಲಿ : ಉತ್ತರ ಪ್ರದೇಶ ಹತ್ರಾಸ್​​​​ ಗ್ಯಾಂಗ್​ ರೇಪ್​​ ಪ್ರಕರಣದ ತನಿಖೆ ಅಲಹಬಾದ್​ ಹೈಕೋರ್ಟ್​ ನಿಗಾದಲ್ಲಿ ನಡೆಯಬೇಕೆಂದು ಸುಪ್ರೀಂ ಕೋರ್ಟ್​ ಆದೇಶಿಸಿದೆ. ಸದ್ಯ ಸಿಬಿಐ ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದು, ತನಿಖಾ ತಂಡದಲ್ಲಿರುವ ಅಧಿಕಾರಿಗಳನ್ನು ರಾಜ್ಯದಿಂದ...

ಡಿ.ಬಾಸ್​​ಗಾಗಿ ಕನ್ನಡ ಕಲಿತ ಜಗಮಪತಿ ಬಾಬು..!

ಸಾಲ್ಟ್ ಅಂಡ್ ಪೆಪ್ಪರ್ ಲುಕ್​ನಲ್ಲಿ ಸೌತ್​ನಲ್ಲಿ ಸಂಚಲನ ಸೃಷ್ಠಿಸಿರೋ ಜಗಪತಿ ಬಾಬು, ಮತ್ತೊಂದು ನೂತನ ದಾಖಲೆ ಬರೆದಿದ್ದಾರೆ. ಅದೂ ಡಿ ಬಾಸ್ ದರ್ಶನ್​ಗಾಗಿ ಅನ್ನೋದು ವಿಶೇಷ. ಇಷ್ಟಕ್ಕೂ ಮೋಸ್ಡ್ ಡಿಮ್ಯಾಂಡಿಂಗ್ ಜಗಪತಿ ಬಾಬು...

Recent Comments