Home ರಾಜ್ಯ ಲಾಕ್ ಡೌನ್ ವೇಳೆಯೇ ಅರಣ್ಯ ಲೂಟಿಗೆ ಯತ್ನಿಸಿದ ಖದೀಮರು..!

ಲಾಕ್ ಡೌನ್ ವೇಳೆಯೇ ಅರಣ್ಯ ಲೂಟಿಗೆ ಯತ್ನಿಸಿದ ಖದೀಮರು..!

ಶಿವಮೊಗ್ಗ : ಇತ್ತ ರಾಜ್ಯದೆಲ್ಲೆಡೆ ಲಾಕ್ ಡೌನ್ ಘೋಷಣೆಯಾಗಿದೆ. ಅದೆಷ್ಟೊ ಜನರು ಮನೆ ಸೇರಿಕೊಂಡಿದ್ದರೆ, ಮತ್ತೆ ಕೆಲವರು ಆಸ್ಪತ್ರೆಗಳಿಗೆ ಅಲೆಯುತ್ತಿದ್ದಾರೆ.  ಇನ್ನೂ ಕೆಲವರು ಹೇಗಪ್ಪಾ ಲಸಿಕೆ ಪಡೆದುಕೊಳ್ಳೋದು ಎಂಬ ಯೋಚನೆಯಲ್ಲಿದ್ದಾರೆ. ಆದ್ರೆ ಇಲ್ಲಿನ ಖದೀಮರು ಮಾತ್ರ ಹೇಗಪ್ಪಾ ಅರಣ್ಯ ಲೂಟಿ ಹೊಡೆಯೋದು ಅಂತಾ ಯೋಚ್ನೆ ಮಾಡಿದ್ದಾರೆ. ಹೌದು, ಇಲ್ಲಿ ಅರಣ್ಯ ಲೂಟಿಕೋರರು, ಲಾಕ್ ಡೌನ್ ಘೋಷಣೆಯಾದಾಗಿನಿಂದ, ಅಪರೂಪದ ನೂರಾರು ವರ್ಷಗಳ ಹಳೆಯದಾದ ಲಕ್ಷಾಂತರ ರೂ. ಬೆಲೆ ಬಾಳುವ ಮರಗಳಿಗೆ ಕನ್ನ ಹಾಕಲು ಯೋಜಿಸಿ, ಇದೀಗ ಸಿಕ್ಕಿಹಾಕಿಕೊಂಡು ಬಿದ್ದಿದ್ದಾರೆ. ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಹಳೆ ಸೊರಬ ಗ್ರಾಮದ ಸರ್ವೆ ನಂ. 245 ರಲ್ಲಿ ಅರಣ್ಯ ನೆಡುತೋಪಿನಲ್ಲಿ ಅಕ್ರಮ ಕಡಿತಲೆ ಮಾಡಿರುವ ಖದೀಮರು ಲಕ್ಷಾಂತರ ರೂ. ನ ಹಲಸು, ದೇವಧಾರಿ ಸೇರಿದಂತೆ ವಿವಿಧ ಅಪರೂಪದ ನೂರಾರು ವರ್ಷಗಳ ಹಳೆಯದಾದ ಮರದ ತುಂಡುಗಳನ್ನು ಮಾರಾಟ ಮಾಡಲು ಸ್ಕೆಚ್ ಹಾಕಿದ್ದಾರೆ.

ಸತತ ಮೂರು ದಿನಗಳ ಕಾಲ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ ಅಧಿಕಾರಿಗಳು, ಅಪರೂಪದ ಲಕ್ಷಾಂತರ ರೂ. ಬೆಲೆ ಬಾಳುವ ಮರಗಳನ್ನು ಸೊರಬದ ಅರಣ್ಯ ಇಲಾಖೆ ಕಚೇರಿ ಆವರಣದಲ್ಲಿ ಸಂಗ್ರಹಿಸಿದ್ದಾರೆ. ಅಲ್ಲದೆ, ಮರದ ತುಂಡುಗಳ ಮಹಜರ್ ನಡೆಸಿದ್ದು, ಈ ಅಕ್ರಮ ಕಡಿತಲೆ ಸಂಬಂಧ, ಗ್ರಾಮದ ಪ್ರಮುಖರನ್ನು ಕರೆಸಿ ವಿಚಾರಣೆ ನಡೆಸಿದ್ದಾರೆ. ಅಲ್ಲದೇ, ಗ್ರಾಮದ ಕೆಲ ಮನೆಗಳ ಆವರಣದಿಂದ ಇನ್ನು ಹಲವಾರು ಮರಗಳ ನಾಟಗಳನ್ನು ವಶಕ್ಕೆ ಪಡೆಯಲಾಗಿದ್ದು, ನೂರಾರು ಮರಗಳ ದಿಮ್ಮಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಬ್ರಿಟೀಷರ ಕಾಲದಲ್ಲಿ ಅರಣ್ಯ ಸಂಪತ್ತಿಗೆ ಅಪಾರ ಕಾಳಜಿ ತೋರಿಸಿದ್ದ ಬ್ರಿಟೀಷರು, ಇಲ್ಲಿ ಬೆಲೆ ಬಾಳುವ ಮರಗಳನ್ನು ನೆಟ್ಟಿದ್ದರು. ಈ ಮರಗಳ ಮೇಲೆ, ಮರಗಳ್ಳರ ಕಣ್ಣು ಬಿದ್ದಿದ್ದು, ಮರಗಳನ್ನು ಸಾಗಿಸಲು ಸ್ಕೆಚ್ ಹಾಕಿದ್ದರು. ಆದರೆ, ಇದರ ಸುಳಿವನ್ನರಿತ ಅರಣ್ಯ ಇಲಾಖಾಧಿಕಾರಿಗಳಾದ ಎ.ಸಿ.ಎಫ್. ಪ್ರವೀಣ್ ಕುಮಾರ್ ಬಸ್ರೂರು, ಡಿ.ಎಫ್.ಓ. ಮೋಹನ್ ಕುಮಾರ್, ಮತ್ತು ಅಧಿಕಾರಿಗಳು ಮತ್ತು ಸಿಬ್ಭಂಧಿಗಳು, ಸತತ ಮೂರು ದಿನಗಳ ಕಾಲ ಕೂಂಬಿಂಗ್ ಕಾರ್ಯಾಚರಣೆ ನಡೆಸಿ ಪತ್ತೆ ಹಚ್ಚಿದ್ದಾರೆ. ಅಲ್ಲದೇ, ಶಂಕಸ್ಪಾದ ವ್ಯಕ್ತಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಒಟ್ಟಾರೆ, ಅದೇನೋ ಹೇಳ್ತಾರಲ್ಲಾ ಗಾದೆ, ಅಜ್ಜಿಗೆ ಅರಿವೆ ಚಿಂತೆ ಆದ್ರೆ, ಮೊಮ್ಮಗಳಿಗೆ ಅದೇನೋ ಚಿಂತೆ ಎನ್ನುವ ಹಾಗೆ, ಇಡೀ ಪ್ರಪಂಚ, ದೇಶವೇ ಕೊರೋನಾ ಹೆಮ್ಮಾರಿಯಿಂದ ನಲುಗಿ ಹೋಗಿರುವಾಗ, ಇಲ್ಲಿನ ಈ ಖದೀಮರು ಮಾತ್ರ ಅರಣ್ಯ ಲೂಟಿಯಲ್ಲಿ ತೊಡಗಿಕೊಂಡಿದ್ದು, ಅರಣ್ಯ ಇಲಾಖಾಧಿಕಾರಿಗಳು ಇದಕ್ಕೆ ಬ್ರೇಕ್ ಹಾಕಿದ್ದಾರೆ.

LEAVE A REPLY

Please enter your comment!
Please enter your name here

- Advertisment -

Most Popular

‘ಈ ಗ್ರಾಮದಲ್ಲಿ ಎಲ್ಲರಿಗೂ ಕಷಾಯ ಉಚಿತ’

ಗದಗ : ಕೊರೊನಾ ನಿರ್ಮೂಲನೆಗೆ ಗ್ರಾಮ ಪಂಚಾಯತಿಯೊಂದು ವಿಭಿನ್ನ ಹಾಗೂ ವಿನೂತನ ಪ್ರಯತ್ನ ನಡೆಸಿದೆ. ಈಗಾಗಲೇ ರಾಜ್ಯದಲ್ಲಿ ಹಲವು ಗ್ರಾಮ‌ ಪಂಚಾಯತಿಗಳು ಕೊರೋನಾ ನಿರ್ಮೂಲನೆಗೆ ಅತ್ಯುನ್ನತ ಹಾಗೂ ವಿನೂತನ ಕಾರ್ಯಗಳನ್ನ ಮಾಡಿ ಮಾದರಿ...

‘ವಿಚಿತ್ರ ರೋಗಕ್ಕೆ ನವಜಾತ ಶಿಶು ಬಲಿ’

ಬೆಂಗಳೂರು : ಕೊರೋನಾದಿಂದ ಗುಣಮುಖವಾದ ಮಕ್ಕಳನ್ನು ಈಗ ಹೊಸದೊಂದು ರೋಗ ಕಾಡುತ್ತಿದೆ. ಪುಟ್ಟ ಮಕ್ಕಳಲ್ಲೇ ಈ ರೋಗ ಹೆಚ್ಚಾಗಿ ಕಂಡು ಬರುತ್ತಿದ್ದು, ಪೋಷಕರು ಕಂಗಾಲಾಗಿದ್ದಾರೆ. ಈ ರೋಗಕ್ಕೆ ಚಿಕಿತ್ಸೆ ನೀಡಲು ಒಂದು ಮಗುವಿಗೆ...

ಖಾಸಗಿ ಶಾಲಾ ಶುಲ್ಕದಲ್ಲಿ ಕಡಿತ ಮಾಡುವ ಪ್ರಮೇಯವೇ ಇಲ್ಲ : ಕ್ಯಾಮ್ಸ್ ತೀರ್ಮಾನ

ಬೆಂಗಳೂರು : ಖಾಸಗಿ ಶಾಲಾ ಶುಲ್ಕದಲ್ಲಿ ಕಡಿತ ಮಾಡುವ ಪ್ರಮೇಯವೇ ಇಲ್ಲ. ಪೂರ್ತಿ ಶುಲ್ಕ ಕಟ್ಟಲೇ ಬೇಕು ಎಂದು ವರ್ಚುವಲ್ ಮೀಟಿಂಗ್ ನಲ್ಲಿ ಕ್ಯಾಮ್ಸ್ ತೀರ್ಮಾನ ಕೈಗೊಂಡಿದೆ. ವರ್ಚುವಲ್ ಮೀಟಿಂಗ್ ನಲ್ಲಿ 10ಕ್ಕೂ...

ಬೈಕ್‌ ಅಪಘಾತದಲ್ಲಿ ನಟ ಸಂಚಾರಿ ವಿಜಯ್‌ ಗೆ ಗಂಭೀರ ಗಾಯ..

ಬೆಂಗಳೂರು :  ರಾಷ್ಟ್ರ ಪ್ರಶಸ್ತಿ ನಟ ಸಂಚಾರಿ ವಿಜಯ್ ಗೆ ಅಪಘಾತವಾಗಿದ್ದು, ಸಂಚಾರಿ ವಿಜಯ್ ಸ್ಥಿತಿ ಚಿಂತಾಜನಕವಾಗಿದೆ. ಬನ್ನೇರುಘಟ್ಟ ರಸ್ತೆಯಲ್ಲಿರುವ ಅಪೊಲೋ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ನಟ ಸಂಚಾರಿ ವಿಜಯ್ ತಲೆಗೆ...

Recent Comments