Monday, May 23, 2022
Powertv Logo
Homeರಾಜ್ಯಬಿಡಿಎ ನ ಮತ್ತಷ್ಟು ಅಧಿಕಾರಿಗಳ ತಲೆದಂಡ ಸದ್ಯದಲ್ಲೇ!

ಬಿಡಿಎ ನ ಮತ್ತಷ್ಟು ಅಧಿಕಾರಿಗಳ ತಲೆದಂಡ ಸದ್ಯದಲ್ಲೇ!

ಬೆಂಗಳೂರು : ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಂದರೆ ಬಿಡಿಎ ಖ್ಯಾತಿಗಿಂತ ಕುಖ್ಯಾತಿಗಳನ್ನೇ ಪಡೆದಿದೆ. ಬೆಂಗಳೂರಿನಲ್ಲಿ ಸೈಟ್​ ಹಂಚಿಕೆ ಮಾಡುವ ಗುರುತರ ಜವಾಬ್ದಾರಿ ಹೊತ್ತಿರುವ ಸರಕಾರಿ ಸಂಸ್ಥೆ ಬಿಡಿಎಗೂ ಅಕ್ರಮಗಳಿಗೂ ಅವಿನಾಭಾವ ಸಂಬಂಧ.ಅಂತಹ ಬಿಡಿಎಗೆ ಎಸಿಬಿ ಅಧಿಕಾರಿಗಳು ಸರಿಯಾಗೆ ಚಳಿ ಬಿಡಿಸಿದ್ದಾರೆ. ಬಿಡಿಎ ಕಡತಗಳ ಒಂದೊಂದು ಹಾಳೆಯನ್ನೂ ಜಾಲಾಡಿ ಸಾಕಷ್ಟು ಮಾಹಿತಿಗಳನ್ನು ಕಲೆ ಹಾಕಿದ್ದಾರೆ.

ಈಗ ಎಸಿಬಿ ಅಧಿಕಾರಿಗಳು ಲಿಸ್ಟೊಂದನ್ನು ರೆಡಿ ಮಾಡಿದ್ದಾರೆ. ದಾಖಲೆಗಳ ಪರಿಶೀಲನೆ ನಂತರ ಬಿಡಿಎ ಅಧಿಕಾರಿಗಳ ಜೊತೆ ಅಲ್ಲಿನ ಮಧ್ಯವರ್ತಿಗಳ ಪಟ್ಟಿಯನ್ನೂ ಸಿದ್ಧ ಪಡಿಸಿದ್ದಾರೆ.50ಕ್ಕೂ ಹೆಚ್ಚು ಮಧ್ಯವರ್ತಿಗಳು, 30 ಸಿಬ್ಬಂದಿಯ ಲಿಸ್ಟ್‌ ರೆಡಿಯಾಗಿದೆ.ಅಗತ್ಯ ಬಿದ್ರೆ ಲಿಸ್ಟ್‌ನಲ್ಲಿ ಇರೋರ ಮನೆ ರೇಡ್ ಮಾಡಲು ಪ್ಲ್ಯಾನ್ ಮಾಡಿದ್ದು ,ಒಂದೆರಡು ದಿನದಲ್ಲಿ ರೇಡ್‌ಗೆ ಸರ್ಚ್ ವಾರೆಂಟ್ ಪಡೆಯಲು ಸಿದ್ಧತೆ ನಡೆಸಿದ್ದಾರೆ.

ವರ್ಗಾವಣೆಗೊಂಡ ಅಧಿಕಾರಿಗಳು ಸಹ ಅಕ್ರಮದಲ್ಲಿ ಶಾಮೀಲಾಗಿದ್ದು.ಅಂತಹ ಅಧಿಕಾರಿಗಳ ಲಿಸ್ಟ್ ಸಹ ಸಿದ್ದ ಮಾಡೋ ಪ್ಲಾನ್​ನಲ್ಲಿದ್ದಾರೆ ಅಧಿಕಾರಿಗಳು.ಸುಮಾರು 20ಕ್ಕೂ ಹೆಚ್ಚು ಅಧಿಕಾರಿಗಳ ಹೆಸರು ಕೇಳಿ ಬರ್ತಿದೆ. ದೂರು ನೀಡಿರೋ ದೂರುದಾರರು ಅಧಿಕಾರಿಗಳ ಹೆಸರು ಉಲ್ಲೇಖಿಸಿದ್ದಾರೆ.ಈಗಾಗ್ಲೇ ದಾಖಲೆ ಪರಿಶೀಲನೆ ನಡೆಸಿ‌ ಲಿಸ್ಟ್ ರೆಡಿಮಾಡಲು 10 ತಂಡಗಳ ರಚನೆಯಾಗಿದೆ. ಸುಮಾರು 2000 GB ಮೊತ್ತದ ಹಾರ್ಡ್ ಡಿಸ್ಕ್‌ಗಳು ಸೀಜ್ ಮಾಡಿದ್ದು ಕೆಲ ಸೈಟ್, ನಿವೇಶನದ ದಾಖಲೆಗಳು ಸ್ಕ್ಯಾನ್ ಮಾಡಿರೋ ಡೇಟಾ ಹಾರ್ಡ್ ಡಿಸ್ಕ್‌ನಲ್ಲಿದೆ. ಪರಿಶೀಲನೆ ಬಳಿಕ ಮತ್ತಷ್ಟು ವಿಚಾರಗಳು ಹೊರಬರಲಿದೆ ಅಂತಿದ್ದಾರೆ ಎಸಿಬಿ ಅಧಿಕಾರಿಗಳು.

17 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments