Monday, May 23, 2022
Powertv Logo
Homeರಾಜ್ಯಬಾಡಿಗೆ ನೀಡಿಲ್ಲವೆಂದು ಗೋಲಿಬಾರ್ ಮಾಡಿದ ಮನೆ ಮಾಲೀಕ..!

ಬಾಡಿಗೆ ನೀಡಿಲ್ಲವೆಂದು ಗೋಲಿಬಾರ್ ಮಾಡಿದ ಮನೆ ಮಾಲೀಕ..!

ಚಿಕ್ಕೋಡಿ: ಲಾಕ್​ಡೌನ್ ಹಿನ್ನೆಲೆ ಮನೆ ಬಾಡಿಗೆ ಕಟ್ಟಲು ರಿಯಾಯಿತಿ ನೀಡುವಂತೆ ಸರ್ಕಾರವೇ ಆದೇಶ ನೀಡಿತ್ತು. ಆದರೆ ಬೆಳಗಾವಿ‌ ಜಿಲ್ಲೆಯ ಚಿಕ್ಕೋಡಿ ನಗರದ ಬಿಕೆ ಕಾಲೇಜ್ ಬಳಿ ಮನೆ ಬಾಡಿಗೆ ಕಟ್ಟಿಲ್ಲವೆಂದು ಮಾಲೀಕ ಕೋಪಗೊಂಡು ತನ್ನ ಡಬಲ್ ರೈಫಲ್ ಗನ್​ನಿಂದ ಫೈರ್ ಮಾಡಿದ ಘಟನೆಯೊಂದು ಭಾನುವಾರ ತಡರಾತ್ರಿ ನಡೆದಿದೆ.

ನೂರಹಮ್ಮದ ಶಾಹಪುರೆ ಎಂಬಾತನ ಮನೆಯಲ್ಲಿ ಬಾಡಿಗೆ ಇದ್ದ ದೀಕ್ಷಿತ ಕುಟುಂಬ ಕಳೆದು ಎರಡು ತಿಂಗಳಿಂದ ಬಾಡಿಗೆ ಕಟ್ಟಿಲ್ಲ. ಹಾಗಾಗಿ ನೂರಹಮ್ಮದ ಹಾಗೂ ದೀಕ್ಷಿತ ಕುಟುಂಬ ನಡುವೆ ವಾಗ್ವಾದ ನಡೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದಾಗ ನೂರಹಮ್ಮದ ತನ್ನ ಡಬಲ್ ರೈಫಲ್ ಗನ್​ನಿಂದ ಫೈರ್ ಮಾಡಿದ್ದಾರೆ. ಆದರೆ ಅದೃಷ್ಟಾವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ.‌ ಈ ಘಟನೆಯಿಂದ ಗಾಬರಿಗೊಂಡ ದೀಕ್ಷಿತ ಕುಟುಂಬ ತಕ್ಷಣ ಚಿಕ್ಕೋಡಿ ಪೋಲಿಸ್ ಠಾಣೆಗೆ ದೌಡಾಯಿಸಿ ದೂರು ದಾಖಲಿಸಿದ್ದಾರೆ. ಮಾಹಿತಿ ಪಡೆದ ಪೊಲೀಸ್ ಅಧಿಕಾರಿಗಳು ನೂರಹಮ್ಮದನನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.

LEAVE A REPLY

Please enter your comment!
Please enter your name here

- Advertisment -

Most Popular

Recent Comments