Saturday, October 1, 2022
Powertv Logo
Homeದೇಶಉಕ್ರೇನ್‌ನಲ್ಲಿ 695 ಕನ್ನಡಿಗರು ಅತಂತ್ರ : ಮನೋಜ್ ರಾಜನ್ 

ಉಕ್ರೇನ್‌ನಲ್ಲಿ 695 ಕನ್ನಡಿಗರು ಅತಂತ್ರ : ಮನೋಜ್ ರಾಜನ್ 

ಬೆಂಗಳೂರು : ಉಕ್ರೈನ್​ನಲ್ಲಿ ಸಿಕ್ಕಿಕೊಂಡಿರುವ ವಿದ್ಯಾರ್ಥಿಗಳ ಬಗ್ಗೆ ಮಾಹಿತಿ ನೀಡಿದ ನೋಡಲ್ ಅಧಿಕಾರಿ‌ ಮನೋಜ್ ರಾಜನ್  ಕಾಲ್ ಸೆಂಟರ್ ನಲ್ಲಿ 695 ವಿದ್ಯಾರ್ಥಿಗಳು ಉಕ್ರೈನ್ ನಲ್ಲಿ ಸಿಲುಕಿದ್ದಾರೆ. 9 ಬ್ಯಾಚ್ ವರೆಗೆ ಈವರೆಗೆ ಬಂದಿದ್ದಾರೆ. ಸಂಜೆ 6-30ರವರೆಗೆ ವೇಳೆಗೆ 8 ಜನ ವಿದ್ಯಾರ್ಥಿಗಳು ಬರಲಿದ್ದಾರೆ. ಮಧ್ಯಾಹ್ನದ ವೇಳೆಗೆ 6 ಜನ ಬರ್ತಾ ಇದ್ದಾರೆ. 23 ಜನ ವಿದ್ಯಾರ್ಥಿಗಳು ಇಂದು ಬರುವವರಿದ್ದಾರೆ. ವಿಮಾನ ಸಂಖ್ಯೆಯನ್ನು ಏರಿಸಲಾಗಿದೆ ಎಂದು ಮಾಹಿತಿ ನೀಡಿದರು.

ಇಂದು ಮಾಧ್ಯಮದೊಂದಿಗೆ ಮಾತನಾಡಿದ ಅವರು ಕನ್ನಡಿಗ ನವೀನ್ ಯುದ್ಧದಲ್ಲಿ ನಿಧನ ಹೊಂದಿದ ಬಳಿಕ ಕಾರ್ಯಚರಣೆಯನ್ನು ಚುರುಕು ಮಾಡಲಾಗಿದೆ. 413 ಜನ ವಿದ್ಯಾರ್ಥಿಗಳ ಕುಟುಂಬದ ಜೊತೆ ಮಾತನಾಡಲಾಗಿದೆ. ಆಯಾಯ ಜಿಲ್ಲಾವಾರು ಅಧಿಕಾರಿಗಳು ಕುಟುಂಬಗಳ ಜೊತೆ ಮಾತನಾಡುತ್ತಿದ್ದಾರೆ. ಕುಟುಂಬಗಳಿಗೆ ಧೈರ್ಯ ತುಂಬುವ ಕೆಲಸ ಆಗುತ್ತಿದೆ. ಅಲ್ಲದೇ ಕರ್ನಾಟಕ ಸರ್ಕಾರವು ಎರಡು ಹೆಲ್ಪ್ ಡೆಸ್ಕ್ ತೆಗೆದಿದ್ದಾರೆ. ಯಾವುದೇ ವಿದ್ಯಾರ್ಥಿಯ ಕುಟುಂಬದವರು ದೆಹಲಿ, ಮುಂಬೈ ಹೋಗುವ ಅವಶ್ಯಕತೆ ಇಲ್ಲ. ಬೆಂಗಳೂರಿಗೆ ಅವರನ್ನು ಕರೆ ತರುವ ತನಕ ನಾವು ವ್ಯವಸ್ಥೆ ಮಾಡಿದ್ದೇವೆ.

ಇನ್ನು ಯಾವುದೇ ಒಂದು ರೂಪಾಯಿ ಖರ್ಚು ಮಾಡುವ ಅಗತ್ಯ ಇಲ್ಲ. ನಾವೇ ಎಲ್ಲಾ ಖರ್ಚನ್ನು ನೋಡಿಕೊಳ್ತಾ ಇದ್ದೀವಿ. ಬಾರ್ಡರ್​​ಗೆ ಬಂದಿದ್ದೀವಿ ಅಂತ ಅನೇಕ ಹುಡುಗರು ಹೇಳ್ತಾ ಇದ್ದಾರೆ. ಅವರಿಗೆ ನಾನು ಹೇಳಿದ್ದೇನೆ. ಎಂಬೆಸ್ಸಿ ಜೊತೆ ಮಾತನಾಡುವ ಕುರಿತು ಹೇಳಿದ್ದೇನೆ.

ತುಂಬಾ ಹುಷಾರಾಗಿ ಇರಿ, ಎಲ್ಲೆಲ್ಲೋ ಓಡಾಡಬೇಡಿ. ಎಂಬೆಸ್ಸಿ ಸಂಪರ್ಕದಲ್ಲಿ ಇರಿ ಎಂದು ಹೇಳಿದ್ದೇವೆ. ಆದಷ್ಟು ಬೇಗ ಕನ್ನಡಿಗರನ್ನು ಕರೆ ತರುವ ಪ್ರಯತ್ನ ಆಗ್ತಾ ಇದೆ. ನವೀನ್ ಸ್ನೇಹಿತರು ಕೂಡ ನಾನು ಸಂಪರ್ಕ‌ ಮಾಡಿದ್ದೇನೆ. ದಿನಸಿ ಇಲ್ಲದ ಕಾರಣ ನವೀನ್ ತರಲು ಹೋಗಿದ್ದರು. ಆಗ ದುಡ್ಡಿಲ್ಲ ಅಂತ ಹೇಳಿದರು. ಆಗ ಶೆಲ್ ದಾಳಿ ನಡೆದಿದೆ ಎಂದಿದ್ದಾರೆ. ಇನ್ನೊಬ್ಬರಿಗೆ ಇಂಜುರಿ ಆಗಿರೋ ಬಗ್ಗೆ ನಮಗೆ ಮಾಹಿತಿ ಇಲ್ಲ. ಸಚಿವಾಲಯ ನವೀನ್ ದೇಹವನ್ನು ಇಲ್ಲಿಗೆ ತರುವ ಕುರಿತು ಪ್ರಯತ್ನ ಮಾಡ್ತಾ ಇದೆ.

- Advertisment -

Most Popular

Recent Comments