Thursday, October 6, 2022
Powertv Logo
Homeದೇಶ'ದಿ ಎಂಡ್​ ಆಫ್ ಇಂಡಿಯಾ' : ಚರ್ಚೆ ಹುಟ್ಟುಹಾಕಿದ ಸೌರವ್ ಗಂಗೂಲಿ ಪುತ್ರಿ ಪೋಸ್ಟ್!

‘ದಿ ಎಂಡ್​ ಆಫ್ ಇಂಡಿಯಾ’ : ಚರ್ಚೆ ಹುಟ್ಟುಹಾಕಿದ ಸೌರವ್ ಗಂಗೂಲಿ ಪುತ್ರಿ ಪೋಸ್ಟ್!

ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ದೇಶದಲ್ಲಿ ಪ್ರತಿಭಟನೆ ಕಾವು ಜೋರಾಗಿದೆ. ವಿದ್ಯಾರ್ಥಿಗಳು ಕೂಡ ಪ್ರತಿಭಟನೆ ನಡೆಸುತ್ತಿದ್ದಾರೆ. ಅನೇಕ ಸಿನಿಮಾ ನಟ -ನಟಿಯರು ಕೂಡ ಕಾಯ್ದೆಯನ್ನು ವಿರೋಧಿಸಿ ಧ್ವನಿ ಎತ್ತಿದ್ದಾರೆ. ಇದೀಗ ಬಿಸಿಸಿಐ ಅಧ್ಯಕ್ಷ, ಟೀಮ್ ಇಂಡಿಯಾದ ಮಾಜಿ ಕ್ಯಾಪ್ಟನ್ ಸೌರವ್ ಗಂಗೂಲಿ ಪುತ್ರಿ ಸನಾ ಗಂಗೂಲಿ ಕೂಡ ಪರೋಕ್ಷವಾಗಿ ಬೆಂಬಲ ನೀಡಿ, ಪೋಸ್ಟ್​​ವೊಂದನ್ನು ಮಾಡಿದ್ದಾರೆ. ಸದ್ಯ ಸನಾ ಮಾಡಿರುವ ಟ್ವೀಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಖ್ಯಾತ ಲೇಖಕ ಖುಶ್ವಂತ್ ಸಿಂಗ್ ಬರೆದ ‘ದಿ ಎಂಡ್ ಆಫ್​ ಇಂಡಿಯಾ’ (ಭಾರತದ ಅಂತ್ಯ) ಪುಸ್ತಕದ ಸಾಲುಗಳನ್ನು ಇನ್ಸ್ಟಾಗ್ರಾಮ್​ನಲ್ಲಿ ಸನಾ ಶೇರ್ ಮಾಡಿದ್ದಾರೆ.
”ಪ್ರತಿಯೊಂದು ಫ್ಯಾಸಿಸ್ಟ್ ಆಡಳಿತ ಅಭಿವೃದ್ಧಿಗೆ ಒಂದು ಸಮುದಾಯ ಅಥವಾ ಗುಂಪಿನ ಅವಶ್ಯಕತೆ ಇರುತ್ತೆ. ಆದ್ರೆ, ಇದು ಯಾವತ್ತಿಗೂ ಕೂಡ ಮುಗಿಯಲ್ಲ. ದ್ವೇಷದ ಮೇಲೆ ನಿರ್ಮಿಸಲ್ಪಟ್ಟ ಚಳುವಳಿ ನಿರಂತರವಾಗಿ ಭಯ ಮತ್ತು ಕಲಹ ಸೃಷ್ಟಿಸುವ ಮೂಲಕ ಜೀವಂತವಾಗಿರುತ್ತೆ. ತಾವು ಮುಸ್ಲೀಮರು, ಕ್ರಿಶ್ಚಿಯನ್ನರಲ್ಲ ಎಂಬ ಕಾರಣಕ್ಕೆ ತಮ್ಮನ್ನು ತಾವು ಸುರಕ್ಷಿತರು ಅಂತ ಭಾವಿಸಿರುವವರು ಮೂರ್ಖರ ಸ್ವರ್ಗದಲ್ಲಿ ಬದುಕ್ತಿದ್ದಾರೆ. ಸಂಘವು ಈಗಾಗಲೇ ಎಂಡಪಂಥೀಯ ಇತಿಹಾಸಕಾರರನ್ನು, ಪಾಶ್ಚಾತ್ಯ ಸಂಸ್ಕೃತಿಯನ್ನು ಮೈಗೂಡಿಸಿಕೊಂಡ ಯುವ ಸಮುದಾಯವನ್ನು ಟಾರ್ಗೆಟ್ ಮಾಡಿದೆ. ನಾಳೆ ತನ್ನ ದ್ವೇಷವನ್ನು ಸ್ಕರ್ಟ್​ ಧರಿಸುವ ಹೆಣ್ಣುಮಕ್ಕಳ ಮೇಲೆ ಕಾರಿಕೊಳ್ಳುತ್ತೆ. ಮಾಂಸಹಾರಿಗಳು, ಮದ್ಯಪಾನ ಮಾಡೋರು, ವಿದೇಶಿ ಚಿತ್ರಗಳನ್ನು ನೋಡುವವರು, ಜೈಶ್ರೀರಾಮ್ ಅನ್ನೋ ಬದಲು ಶೇಕ್ ಹ್ಯಾಂಡ್ ಮಾಡೋರು ಅಥವಾ ಮುತ್ತು ಕೊಡೋರೆಲ್ಲರೂ ಇವರ ಶಿಕಾರಿಗಳಾಗ್ತಾರೆ. ಇಲ್ಲಿ ಯಾರು ಕೂಡ ಸ ಸುರಕ್ಷಿತರಲ್ಲ. ಭಾರತವನ್ನು ಜೀವಂತವಾಗಿ ಉಳಿಸಿಕೊಳ್ಳಲು ಇದನ್ನೆಲ್ಲಾ ಅರ್ಥಮಾಡಿಕೊಳ್ಳಬೇಕು” ಎಂಬುದು ಸನಾ ಟ್ವೀಟ್ ಸಾರಾಂಶ.
ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ಪೋಸ್ಟ್​ ಬಗ್ಗೆ ಪರ – ವಿರೋಧ ಚರ್ಚೆ ನಡೀತಿದೆ.

7 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments