Tuesday, January 18, 2022
Powertv Logo
Homeರಾಜ್ಯಶಿಥಿಲಗೊಂಡ ಟ್ಯಾಂಕ್ ಆತಂಕದಲ್ಲಿ ಶಾಲೆಗೆ ಬರುತ್ತಿರುವ ಮಕ್ಕಳು

ಶಿಥಿಲಗೊಂಡ ಟ್ಯಾಂಕ್ ಆತಂಕದಲ್ಲಿ ಶಾಲೆಗೆ ಬರುತ್ತಿರುವ ಮಕ್ಕಳು

ವಿಜಯಪುರ : ದೇವರ ಹಿಪ್ಪರಗಿ ತಾಲೂಕಿನ ಕೊಂಡಗೂಳಿ ಗ್ರಾಮದ ಪ್ರಾಥಮಿಕ ಶಾಲೆಯ ಆವರಣದಲ್ಲಿ ನೀರಿನ ಟ್ಯಾಂಕ್​ ಇದೆ. ಇದು ಸುಮಾರು 30 ವರ್ಷಕ್ಕೂ ಹಳೆಯದಾದ ಈ ನೀರಿನ ಟ್ಯಾಂಕ್ ಆಗಿದ್ದು ಇದರ ಮೂಲಕವೇ ಗ್ರಾಮಕ್ಕೆ ನೀರು ಸರಬರಾಜು ಆಗುತ್ತದೆ. ಆದರೆ ಆ ಟ್ಯಾಂಕ್​ನ ಪರಿಸ್ಥಿತಿ ನೋಡಿದರೆ ಸಂಪೂರ್ಣವಾಗಿ ಶಿಥಿಲಗೊಂಡು ಯಾವ ಸಮಯದಲ್ಲಿ ಬಿಳುತ್ತದೋ ಎಂಬುದೇ ಗೊತ್ತಾಗುವುದಿಲ್ಲ ಆ ಹಂತಕ್ಕೆ ಟ್ಯಾಂಕ್ ಬಿರುಕು ಬಿಟ್ಟಿದೆ. ಅದುವಲ್ಲದೆ ಟ್ಯಾಂಕಿನ ಮೇಲೆ ಹತ್ತುವ ಮೆಟ್ಟಿಲುಗಳಂತೂ ಕಳಚಿ ಬಿದ್ದಿವೆ. ಆದರೆ ಈ ಟ್ಯಾಂಕ್ ಯಾವ ಸಮಯದಲ್ಲಿ ಸಂಪೂರ್ಣವಾಗಿ ಬೀಳುವುದೋ ಗೊತ್ತಿಲ್ಲ.

ಶಾಲೆಯ ಶಿಕ್ಷಕರು, ಗ್ರಾಮಸ್ಥರು ಸಂಬಂಧಪಟ್ಟ ಅಧಿಕಾರಿಗಳಿಂದ ಹಿಡಿದು ಜನ ಪ್ರತಿನಿಧಿಗಳಿಗೆ ಅದೆಷ್ಟೊ ಬಾರಿ ಈ ಟ್ಯಾಂಕ್ ಅನ್ನು ಬೇರೆಡೆ ಸ್ಥಳಾಂತರಿಸಿ ಎಂದು ಮನವಿ ಸಲ್ಲಿಸಿದರೂ ಸಹಿತ ಯಾವುದೇ ಪ್ರಯೋಜನವಾಗುತ್ತಿಲ್ಲ.

ಇನ್ನೂ ಶಾಲೆಯ ಕಂಪೌಂಡ್ ಒಳಭಾಗದಲ್ಲೇ ಈ ಟ್ಯಾಂಕ್ ಇರುವುದು.ಆ ಪ್ರಾಥಮಿಕ ಶಾಲೆಗೆ ಒಟ್ಟು 1 ನೇ ತರಗತಿಯಿಂದ 7 ನೇ ತರಗತಿಯವರೆಗೆ ವಿದ್ಯಾರ್ಥಿಗಳು ಓದುತ್ತಾರೆ. ಒಟ್ಟು 148 ಮಕ್ಕಳು ಇಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು ಈಗ‌ ಶಾಲೆಗಳು ಮತ್ತೆ ಆರಂಭಗೊಂಡಿರುವ ಕಾರಣ ಮಕ್ಕಳು ಶಾಲೆಗಳಿಗೆ ಬರುತ್ತಿದ್ದಾರೆ, ಆದರೆ ಯಾವ ಸಮಯದಲ್ಲಿ ಈ ಟ್ಯಾಂಕ್ ಮುರಿದು ಬಿದ್ದು ತಮ್ಮ ಮಕ್ಕಳ ಪ್ರಾಣಕ್ಕೆ ಕುತ್ತು ಆಗುವುದೋ ಎಂಬ ಆತಂಕದಲ್ಲೇ ಪೋಷಕರು ಅವರ ಮಕ್ಕಳನ್ನು ಕಳುಹಿಸುತ್ತಿದ್ದಾರೆ. ಅಲ್ಲದೆ ಕೆಲವು ಪಾಲಕರು ಇದರ ಭೀತಿಯಿಂದ ತಮ್ಮ ಮಕ್ಕಳನ್ನು ಈ ಸರ್ಕಾರಿ ಶಾಲೆಗೆ ಕಳುಹಿಸಲು ಮುಂದೆ ಬರುತ್ತಿಲ್ಲ ಎಂಬುದು ಸ್ಥಳಿಯರ ಮಾತಗಿದೆ.

ಈ ಕುರಿತು ಜಿಲ್ಲಾ ಪಂಚಾಯತಿ ಸಿಇಒದಿಂದ ಹಿಡಿದು ಶಾಸಕ ಸೋಮನಗೌಡ ಪಾಟೀಲ ಅವರಿಗೆ ಮನವಿ ಸಲ್ಲಿಸಿದ್ದಾರೆ ಆದರೂ ಪ್ರಯೋಜನವಾಗಿಲ್ಲ. ಇನ್ನಾದರೂ ಈ ಕುರಿತು ಶಾಸಕ ಸೋಮನಗೌಡ ಪಾಟೀಲ ಅವರು ಒಂದಿಷ್ಟು ಲಕ್ಷವಹಿಸಿ ಶಾಲಾ ಕಂಪೌಂಡ್ ನಲ್ಲಿರುವ ಈ ನೀರಿನ ಟ್ಯಾಂಕ್ ಅನ್ನು ತೆರವುಗೊಳಿಸಿ ಬೇರೆಡೆ ಸ್ಥಳಾಂತರಿಸಬೇಕು ಇರದಿದ್ದರೆ ಮುಂದೆ ನಡೆಯಬಹುದಾದ ದೊಡ್ಡ ಅನಾಹುತಕ್ಕೆ ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳೇ ನೇರ ಹೊಣೆಯಾಗಬೇಕಾಗುವುದು.

ಸುನೀಲ್ ಭಾಸ್ಕರ ಪವರ ಟಿವಿ ವಿಜಯಪುರ

4 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments