ದಾವಣಗೆರೆ: ಒಬ್ಬರ ಮುಖ ಒಬ್ಬರು ನೋಡದಂತಹ ಸಂದರ್ಭದಲ್ಲಿ ಕೊರೊನಾ ಸೋಂಕಿತರ ಜೊತೆಗೆ ಇದ್ದು ಚಿಕಿತ್ಸೆ ನೀಡಿ ಗುಣಪಡಿಸುತ್ತಿರುವ ಕೊರೋನಾ ವಾರಿಯರ್ಸ್ ಸೇವೆ ನಿಜಕ್ಕೂ ಅವಿಸ್ಮರಣೀಯ ಎಂದು ಮೇಯರ್ ಬಿಜೆ ಅಜಯ್ ಕುಮಾರ್ ಬಣ್ಣಿಸಿದರು.
ನಗರದ ಹಳೇ ಕುಂದುವಾಡದಲ್ಲಿ ಮನಾ ಯುವ ಬ್ರಿಗೇಡ್ ಹಾಗೂ ಜನತಾ ರಕ್ಷಣಾ ವೇದಿಕೆಯಿಂದ ಹಮ್ಮಿಕೊಂಡಿದ್ದ ಥ್ಯಾಂಕ್ಯೂ ಕುಂದುವಾಡ ಕೊರೋನಾ ವಾರಿಯರ್ಸ್ ಅಭಿನಂದನಾ ಸಮಾರಂಭದಲ್ಲಿ ವಾರಿಯರ್ಸ್ ಗೆ ಸನ್ಮಾನಿಸಿ ಮಾತನಾಡಿದ ಅವರು, ಕೊರೋನಾ ಸಮಯದಲ್ಲಿ ಒಬ್ಬರು ಇನ್ನೊಬ್ಬರ ಮುಖ ನೋಡದಂತ ಪರಿಸ್ಥಿತಿ ನಿರ್ಮಾಣ ಆಗಿತ್ತು, ಈ ಸಮಯದಲ್ಲಿ ಆಶಾ ಕಾರ್ಯಕರ್ತೆಯರು, ವೈದ್ಯರು, ಪೊಲೀಸರು ತಮ್ಮ ಪ್ರಾಣದ ಹಂಗು ತೊರೆದು ಸೇವೆ ಮಾಡಿದ್ದು ನಿಜಕ್ಕೂ ಅವೀಸ್ಮರಣೀಯ. ನಾವೂ ಕೂಡ ಪಾಲಿಕೆಯಿಂದ ಕಿಟ್ ಸೇರಿದಂತೆ ಇನ್ನಿತರೆ ಸೇವೆಗಳ ಮೂಲಕ ಜನರ ಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡಿದ್ದೇವೆ. ಈ ಹಿನ್ನಲೆ ಅವರುಗಳಿಗೆ ನಗರದಲ್ಲಿ ಸನ್ಮಾನಿಸಿ ಗೌರವಿಸಲಾಗುತ್ತಿದೆ, ಆದರೆ ಇದೇ ಮೊದಲ ಭಾರಿಗೆ ನಾನು ಹೊರವಲಯದಲ್ಲಿವಾರಿಯರ್ಸ್ ಗೆ ಅಭಿನಂದನೆ ಆಗುತ್ತಿರುವುದು ಇಂದು ನೋಡಿದ್ದೇನೆ, ಹಳೇ ಕುಂದುವಾಡ ಯುವಕರು ನಮ್ಮ ಊರಿನ ವಾರಿಯರ್ಸ್ ಗಳನ್ನು ಗುರುತಿಸಿ ಪ್ರೋತ್ಸಾಹ ನೀಡುತ್ತಿರುವುದು ಸಂತೋಷದ ವಿಚಾರ ಎಂದು ತಿಳಿಸಿದರು.
ಅಭಿನಂದನಾ ಸಮಾರಂಭದಲ್ಲಿ ಕುಂದುವಾಡದವರೇ ಆದ ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಅಧಿಕಾರಿಗಳು, ನರ್ಸ್ಗಳು, ಪೊಲೀಸ್ ಹಾಗೂ ವರದಿಗಾರರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಮೇಯರ್ ಅಜಯ್ ಕುಮಾರ್ ಅವರಿಗೆ ಹಳೇ ಕುಂದುವಾಡದಲ್ಲಿ ಶಾಂತಿನಗರ, ಜನತಾ ಕ್ಯಾಂಪ್, ಗಡಿ ಕ್ಯಾಂಪ್ ರಸ್ತೆ ನಿರ್ಮಾಣ ಹಾಗೂ ಕುಂದುವಾಡ ರುದ್ರಭೂಮಿ ಅಭಿವೃದ್ದಿಪಡಿಸುವಂತೆ, ಜೊತೆಗೆ ಹೈವೆ ಬ್ರಿಡ್ಜ್ ನಿರ್ಮಾಣ, ಪ್ರಾಥಾಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಸಬ್ ಸೆಂಟರ್ ಹಳೇ ಕುಂದುವಾಡದಲ್ಲಿ ಪಾಳು ಬಿದ್ದಿದ್ದು ದುರಸ್ತಿ ಮಾಡಿಕೊಡಬೇಕು ಹಾಗೂ ಗ್ರಂಥಾಲಯ ಸ್ಥಾಪನೆ ಮಾಡಿಕೊಡಬೇಕು ಎಂದು ಮನಾ ಯುವ ಬ್ರಿಗೇಡ್ ನಿಂದ ಮನವಿ ಸಲ್ಲಿಸಿತು.
ಪಾಲಿಕೆ ಸದಸ್ಯರಾದ ಶಿಲ್ಪಾ ಜಯಪ್ರಕಾಶ್, ಮಾಜಿ ಮೇಯರ್ ಹೆಚ್ ಎನ್ ಗುರುನಾಥ್, ಎಪಿಎಂಸಿ ಮಾಜಿ ಅಧ್ಯಕ್ಷ ಹೆಚ್ ಜಿ ಗಣೇಶಪ್ಪ, ಮಾಜಿ ಕಾಪೋರೇಟರ್ ಹೆಚ್ ತಿಪ್ಪಣ್ಣ, ಜಿಲ್ಲಾ ಫಾರ್ಮಸಿ ಅಧಿಕಾರಿ ಶಿವಾನಂದ ದಳವಾಯಿ, ಮುಖಂಡರುಗಳಾದ ಮಿಟ್ಲಕಟ್ಟೆ ಚಂದ್ರಪ್ಪ, ನರಸಪ್ಪರ ಶಿವಪ್ಪ, ಹನುಮಂತಪ್ಪ, ಜೆಸಿ ದೇವರಾಜ್, ಎನ್ ಟಿ ನಾಗರಾಜ್, ಪತ್ರಕರ್ತರಾದ ಬಸವರಾಜ್ ದೊಡ್ಮನಿ, ಮಧುನಾಗರಾಜ್, ರಾಜೂ ಕರೂರು ಸೇರಿದಂತೆ ಮತ್ತಿತರರು ಇದ್ದರು.