Sunday, June 26, 2022
Powertv Logo
Homeರಾಜ್ಯಸಂಕೀರ್ತನಾಯಾತ್ರೆಯಲ್ಲಿ ಕೋಮುಘೋಷಣೆ

ಸಂಕೀರ್ತನಾಯಾತ್ರೆಯಲ್ಲಿ ಕೋಮುಘೋಷಣೆ

ಶ್ರೀರಂಗಪಟ್ಟಣ: ಕಡೆಗೂ ಶ್ರೀರಂಗಪಟ್ಟಣದಲ್ಲಿ ಭಜರಂಗದಳದವರು ಸಂಕೀರ್ತನಾ ಯಾತ್ರೆ ಪ್ರಾರಂಭಿಸಿಯೇಬಿಟ್ಟಿದ್ದಾರೆ. ಜಾಮಿಯ ಮಸೀದಿ ಬಳಿ ಯಾತ್ರೆ ಆಗಮಿಸುತ್ತಿದ್ದಂತೆ ಪೊಲೀಸರ ಅಲರ್ಟ್ ಆಗಿದ್ದಾರೆ. ಮಸೀದಿ ವೃತ್ತದಲ್ಲಿ ಪೊಲೀಸರ ಸರ್ಪಗಾವಲಿನ ಮಧ್ಯೆ ಹನುಮ ಮಾಲಾಧಾರಿಗಳು ಜಮಾವಣೆ ಆಗಿದ್ದಾರೆ. ಆ ಮಧ್ಯೆ ಮುಸ್ಲಿಂ ಯುವಕನೊಬ್ಬ ಮಸೀದಿಯ ಬಳಿಗೆ ಬಂದಿದ್ದಾನೆ. ಅವನೆ ಮೊದಲಿಗೆ ಹಲ್ಲೆಗೆ ಮುಂದಾದ ಎಂದು ಹನುಮ ಮಾಲಾಧಾರಿಗಳು ಅವನಿಗೆ ಹಿಗ್ಗಾಮುಗ್ಗ ಹೊಡೆದಿದ್ದಾರೆ. ಪೊಲೀಸರು ಸಹ ಹನುಮಮಾಲಾಧಾರಿಗಳಿಗೆ ಸಾಥ್ ನೀಡಿ ತಾವು ಯುವಕನಿಗೆ ಹೊಡೆದಿದ್ದಾರೆ. ನಂತರ ಅವನನ್ನು ಠಾಣೆಗೆ ಕರೆದೊಯ್ದಿದ್ದಾರೆ.

ನಿಜಕ್ಕೂ ಅಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಹನುಮ ಮಾಲಾಧಾರಿಗಳು ಅಲ್ಲಿ ಜಮಾವಣೆಯಾಗಿದ್ದಾಗ ಸಾಮಾನ್ಯ ಜ್ಷಾನವಿರುವ ಯಾವೊಬ್ಬನೆ ವ್ಯಕ್ತಿ, ಅದೂ ಒಬ್ಬನೆ ಇದ್ದಾಗ ಆ ಗುಂಪಿನವರ ಮೇಲೆ ಹಲ್ಲೆ ಮಾಡಲು ಸಾಧ್ಯವೆ ಎನ್ನುವ ಪ್ರಶ್ನೆ ಮೂಡುತ್ತದೆ. ಇದಕ್ಕೆ ಉತ್ತರ ಯಾರೂ ಹಾಗೆ ಮಾಡಲು ಸಾಧ್ಯವಿಲ್ಲ ಎಂದೇ ಹೇಳಬೇಕಾಗುತ್ತದೆ. ಹಾಗಾದರೆ ಹನುಮಮಾಲಾಧಾರಿಗಳು ಧರ್ಮದ ಹೆಸರಿನಲ್ಲಿ ಒಬ್ಬ ಅನ್ಯಕೋಮಿನ ಯುವಕನ ಮೇಲೆ ಹಲ್ಲೆ ಮಾಡಿದರಾ?

ನಂತರ ಮಸೀದಿ ಬಳಿ ಜಮಾವಣೆ ಆಗಿರುವ ಹನುಮ ಮಾಲಾಧಾರಿಗಳು ಕೋಮುದ್ವೇಶವನ್ನು ಬಿತ್ತುವ ಘೋಷಣೆಯನ್ನು ಕೂಗಿದ್ದಾರೆ. ರಾಮನ ಮಕ್ಕಳು ನಾವೆಲ್ಲಾ, ಟಿಪ್ಪು ಸಂತತಿ ಬೇಕಿಲ್ಲ.  ಹನುಮನ ಪಾದದ ಮೇಲಾಣೆ, ಇಲ್ಲೇ ಮಂದಿರ ಕಟ್ಟುವೆವು. ಹೀಗೆ ಹುನಮನ ಪರ ಹಾಗೂ ಅನ್ಯಕೋಮಿನ ವಿರುದ್ಧ ಘೋಷಣೆಗಳನ್ನು ಕೂಗಿದರೂ ಪೊಲೀಸರಾಗಲಿ, ಮಾಧ್ಯಮದವರಾಗಲಿ ಅದಕ್ಕೆ ಯಾವುದೇ ಆಕ್ಷೇಪ ವ್ಯಕ್ತಪಡಿಸದಿರುವುದು ನಮ್ಮ ದೇಶ ಜಾತ್ಯಾತೀತದಿಂದ ದೂರವಾಗುತ್ತಿರುವುದರ ಸಂಕೇತವೆ?

ಓಂಪ್ರಕಾಶ್ ನಾಯಕ್, ಪವರ್ ಟಿವಿ.

2 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments